Asianet News Gujarat Pre Poll Survey: ಬಿಜೆಪಿಗೆ ಪಟೇಲರೇ ಶಕ್ತಿ, ಕಾಂಗ್ರೆಸ್‌ಗೆ ಮುಸ್ಲಿಮರ ಬಲ!

By Santosh NaikFirst Published Oct 30, 2022, 4:27 PM IST
Highlights

ಹಾಗೇನಾದರೂ ಗುಜರಾತ್‌ ವಿಧಾನಸಭೆಗೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆದಲ್ಲಿ ಯಾವ ಪಕ್ಷ ಗೆಲ್ಲಬಹುದು ಎನ್ನುವ ನಿಟ್ಟಿನಲ್ಲಿ ಏಷ್ಯಾನೆಟ್‌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಅದರಲ್ಲಿಯಾವ ಜಾತಿಯವರು ಯಾವ ಪಕ್ಷಕ್ಕೆ ಮತ ಹಾಕಬಹುದು ಎನ್ನುವ ಸಮೀಕ್ಷೆಯನ್ನೂ ನೀಡಲಾಗಿದೆ.

ಬೆಂಗಳೂರು (ಅ.30): ಗುಜರಾತ್‌ ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ, ಬಿಜೆಪಿ 133 ರಿಂದ 143 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್‌ ಪಕ್ಷವು 28-37 ಸ್ಥಾನಗಳನ್ನು ಗೆಲ್ಲಬಹುದು. ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ 5-14 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಏಷ್ಯಾನೆಟ್‌ ಚುನಾವಣಾ ಪೂರ್ಣ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇನ್ನು ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿಗೆ ಮೇಲ್ವರ್ಗದ ಹಿಂದುಗಳ ಮತ ದಂಡಿಯಾಗಿ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಪಟೇಲ್‌ ಅಥವಾ ಪಾಟಿದಾರ್‌ ಸಮುದಾಯದ ಎರಡು ಪ್ರಮುಖ ಪಂಗಡಗಳಾದ ಲೇಯುವಾ ಪಟೇಲ್‌ ಹಾಗೂ ಕಾಡ್ವಾ ಪಟೇಲರ ಪೈಕಿ ಕಾಡ್ವಾ ಪಟೇಲರು ಹೆಚ್ಚಾಗಿ ಬಿಜೆಪಿ ಪರ ಒಲವು ಹೊಂದಿದ್ದಾರೆ. ಇನ್ನು ಗುಜರಾತ್‌ನ ಇತರ ಹಿಂದುಳಿದ ವರ್ಗ, ಜೈನರು, ರಜಪೂತರು, ಬನಿಯಾ, ಬ್ರಾಹ್ಮಣರು ಹಾಗೂ ಇತರ ಮೇಲ್ವರ್ಗದವರಿಂದ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆದುಕೊಳ್ಳಲಿದೆ. ಬಿಜೆಪಿಗೆ ಪ್ರಬಲ ಎದುರಾಳಿಗಳ ಪೈಕಿ ಒಂದಾಗಿರುವ ಕಾಂಗ್ರೆಸ್‌ ಪಕ್ಷವು, ಮುಸ್ಲಿಮರು, ಎಸ್‌ಸಿ ಮತ್ತು ಎಸ್‌ಟಿಗಳ ಮತಗಳನ್ನು ಹೆಚ್ಚಾಗಿ ಪಡೆಯಲಿದೆ ಎಂದು ಹೇಲಲಾಗಿದೆ. ಇನ್ನು ಆಮ್‌ ಆದ್ಮಿ ಪಾರ್ಟಿ ಲೆಯುವಾ ಪಟೇಲ್‌ಗಳು, ಪರಿಶಿಷ್ಟ ಪಂಗಡಗಳು (ಎಸ್‌ಟಿ), ಮುಸ್ಲಿಮರು, ಪರಿಶಿಷ್ಟ ಜಾತಿಗಳು (ST), ಠಾಕೂರ್‌ ಮತ್ತು ಒಬಿಸಿ ವರ್ಗದಿಂದ ಹೆಚ್ಚಿನ ಮತಗಳನ್ನು ತೆಕ್ಕೆಗೆ ಹಾಕಿಕೊಳ್ಳಲಿದೆ.

ಬಿಜೆಪಿಗೆ ಎಷ್ಟೆಲ್ಲಾ ಜಾತಿಗಳ ಬೆಂಬಲ: ಗುಜರಾತ್‌ನಲ್ಲಿ ಬಿಜೆಪಿಗೆ ಬ್ರಾಹ್ಮಣರು ಶೇ. 77ರಷ್ಟು ಒಲವು ಹೊಂದಿದ್ದರೆ, ಬನಿಯಾರ ಜಾತಿಯ ಬಲ ಶೇ 84ರಷ್ಟಿದೆ. ಅದರೊಂದಿಗೆ ಶೇಕಡಾವಾರು ಲೆಕ್ಕಾಚಾರದಲ್ಲಿ ಗುಜರಾತ್‌ನ ಜಾತಿಗಳ ಪೈಕಿ ಲೆಯುವಾ ಪಟೇಲ್‌ (45), ಕಾಡ್ವಾ ಪಟೇಲ್‌ (67), ಕೋಲಿ (38), ಮಿನಾ, ದುಬ್ಲಾ, ನೈಕ್ಡಾ ಹಾಗೂ ಬಿಹಿಲ್‌ ಸೇರಿದ ಎಸ್‌ಟಿ ಸಮುದಾಯ (34), ದಲಿತರು (13), ರಾಬರೀಸ್‌ (50), ಠಾಕೂರರು(37), ರಜಪೂತರು (70), ಭಾರ್ವಾಡ್‌ (43), ಗುರ್ಜರ್‌ (50), ಮುಸ್ಲಿಮರು (2), ಒಬಿಸಿ (48), ಖಾರ್ವಾ (42), ಜೈನರು (76), ಬನಿಯಾ (84) ಹಾಗೂ ಇತರ ಮೇಲ್ವರ್ಗದವರು (64) ಬೆಂಬಲವಿದೆ. ಜೈನರು, ಬ್ರಾಹ್ಮಣರು ಹಾಗೂ ರಜಪೂತರಿಂದ ಬಿಜೆಪಿಗೆ ದೊಡ್ಡ ಮಟ್ಟದ ಬೆಂಬಲವಿದ್ದರೆ, ಮುಸ್ಲಿಮರಿಂದ ಕೇವಲ ಶೇ. 2ರಷ್ಟು ಬೆಂಬಲ ವ್ಯಕ್ತವಾಗಿದೆ.

ಕಾಂಗ್ರೆಸ್‌ಗೆ ಎಷ್ಟೆಲ್ಲಾ ಜಾತಿಗಳ ಬೆಂಬಲ: ಇನ್ನು ಕಾಂಗ್ರೆಸ್‌ ಪಾಲಿಗೆ ಅತಿದೊಡ್ಡ ವೋಟ್‌ಬ್ಯಾಂಕ್‌ ಮುಸ್ಲೀಮರಾಗಿದ್ದಾರೆ. ನಂತರದ ಸ್ಥಾನದಲ್ಲಿ ದಲಿತರು ನಿಲ್ಲುತ್ತಾರೆ. ಗುಜರಾತ್‌ನ ಜಾತಿಗಳ ಪೈಕಿ ಲೆಯುವಾ ಪಟೇಲ್‌ (20), ಕಾಡ್ವಾ ಪಟೇಲ್‌ (9), ಬ್ರಾಹ್ಮಣರು (5), ಕೋಲಿ (31), ಮಿನಾ, ದುಬ್ಲಾ, ನೈಕ್ಡಾ ಹಾಗೂ ಬಿಹಿಲ್‌ ಸೇರಿದ ಎಸ್‌ಟಿ ಸಮುದಾಯ (36), ದಲಿತರು (57), ರಾಬರೀಸ್‌ (27), ಠಾಕೂರರು(36), ರಜಪೂತರು (12), ಭಾರ್ವಾಡ್‌ (35), ಗುರ್ಜರ್‌ (33), ಮುಸ್ಲಿಮರು (64), ಒಬಿಸಿ (29), ಖಾರ್ವಾ (37), ಜೈನರು (9), ಬನಿಯಾ (7) ಹಾಗೂ ಇತರ ಮೇಲ್ವರ್ಗದವರು (16) ಬೆಂಬಲವಿದೆ. ಕಾಂಗ್ರೆಸ್‌ ಪಕ್ಷಕ್ಕೆ ಬ್ರಾಹ್ಮಣರು, ಜೈನರು ಮತ್ತು ಬನಿಯಾ ಮತಗಳು ಹೊಡೆತ ನೀಡಲಿವೆ.

ಗುಜರಾತ್‌ನಲ್ಲಿಂದು ಅಮಿತ್ ಶಾ ಸಮ್ಮುಖದಲ್ಲಿ 12,000 ಕೆ.ಜಿ.ಗೂ ಅಧಿಕ Drugs ನಾಶ

ಆಪ್‌ಗೆ ಎಷ್ಟೆಲ್ಲಾ ಜಾತಿಗಳ ಬೆಂಬಲ: ಆಪ್‌ಗೆ ಲೆಯುವಾ ಪಟೇಲರ ಮತಗಳು ಬೀಳಲಿವೆ. ಕಾಂಗ್ರೆಸ್‌ಗಿಂತ ಹೆಚ್ಚಾಗಿ ಲೆಯುವಾ ಪಟೇಲರು ಆಪ್‌ಗೆ ಬೆಂಬಲ ನೀಡಿದ್ದಾರೆ. ಶೆ. 33ರಷ್ಟು ಲೆಯುವಾ ಪಟೇಲ್‌ ಮತದಾರರು ಆಪ್‌ಅನ್ನು ಬೆಂಬಲಿಸಿದ್ದಾರೆ.   ಗುಜರಾತ್‌ನ ಜಾತಿಗಳ ಪೈಕಿ ಲೆಯುವಾ ಪಟೇಲ್‌ (33), ಕಾಡ್ವಾ ಪಟೇಲ್‌ (21, ಬ್ರಾಹ್ಮಣರು (17), ಕೋಲಿ (24), ಮಿನಾ, ದುಬ್ಲಾ, ನೈಕ್ಡಾ ಹಾಗೂ ಬಿಹಿಲ್‌ ಸೇರಿದ ಎಸ್‌ಟಿ ಸಮುದಾಯ (18), ದಲಿತರು (26), ರಾಬರೀಸ್‌ (18), ಠಾಕೂರರು(24), ರಜಪೂತರು (16), ಭಾರ್ವಾಡ್‌ (19), ಗುರ್ಜರ್‌ (15), ಮುಸ್ಲಿಮರು (32), ಒಬಿಸಿ (20), ಖಾರ್ವಾ (19), ಜೈನರು (13), ಬನಿಯಾ (8) ಹಾಗೂ ಇತರ ಮೇಲ್ವರ್ಗದವರು (17) ಬೆಂಬಲವಿದೆ. ಕೆಲವೊಂದು ಜಾತಿಯ ಮತದಾರರು ಬಿಜೆಪಿ ಹೊರತಾಗಿ ಬೇರೆ ಪಕ್ಷದ ಆಯ್ಕೆ ಮಾಡುವುದಿದ್ದರೆ ಅದು ಆಪ್‌ ಎಂದು ಹೇಳಿರುವುದು ಕಾಂಗ್ರೆಸ್‌ ಪಾಲಿಗೆ ಆತಂಕದ ವಿಚಾರವಾಗಿದೆ.

21 ವರ್ಷದ ಬಳಿಕ ಯೋಧನ ಜೊತೆ PM Modi ಪುನರ್ಮಿಲನ

ಉಳಿದಂತೆ ಸ್ವತಂತ್ರ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಸಿಕ್ಕಿರುವ ಬೆಂಬಲವೆಲ್ಲಾ ಒಂದಂಕಿಯಲ್ಲಿದೆ. ಬಿಜೆಪಿ ಪಾಲಿಗೆ ಗುಜರಾತ್‌ನಲ್ಲಿ ಅಧಿಕಾರ ಹಿಡಿಯಲು ಕಾಡ್ವಾ ಪಟೇಲರು, ಬ್ರಾಹ್ಮಣರು ಹಾಗೂ ಬಿನಿಯಾ ವರ್ಗದವರು ಪ್ರಮುಖವಾಗಿದ್ದರೆ, ಕಾಂಗ್ರೆಸ್‌ ಹಾಗೂ ಆಪ್‌ ಇತರ ಜಾತಿಗಳ ಬಲದ ಮೇಲೆ ನಿಂತಿದೆ.

click me!