ಒಂದು ಲಿಂಕ್‌ ಕ್ಲಿಕ್‌ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ, ಮತಗಟ್ಟೆಗೆ ಹೋಗಿ..!

By Sathish Kumar KH  |  First Published May 8, 2023, 2:47 PM IST

ರಾಜ್ಯದಲ್ಲಿ ಮೇ 10 ರಂದು ನಡೆಯುವ ಮತದಾನಕ್ಕೂ ಮುನ್ನ ವೋಟಿಂಗ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯೇ ಪರಿಶೀಲಿಸಿಕೊಳ್ಳಿ. ನಿಮ್ಮ ಮತಗಟ್ಟೆ ವಿವರವನ್ನು ಹುಡುಕಲು ಇಲ್ಲಿದೆ ಸುಲಭ ಮಾರ್ಗ. 


ಬೆಂಗಳೂರು  (ಮೇ 08): 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮೇ 10 (ಬುಧವಾರ) ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಲಿದೆ. ಆದರೆ, ನಿಮ್ಮ ಹೆಸರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿದೆಯೇ? ನಮ್ಮ ಕ್ಷೇತ್ರದ ಅಭ್ಯರ್ಥಿಗಳು ಯಾರು? ಮತದಾನ ಮಾಡುವ ಬೂತ್‌ ಎಲ್ಲಿದೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲಿದೆ ನೋಡಿ...

ರಾಜ್ಯದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‌, ಕೆಆರ್‌ಪಿಪಿ ಅಧಿಕಾರ ಹಿಡಿಯಲು ಭಾರಿ ಕಸರತ್ತು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಳೆದ ಮೂರು ತಿಂಗಳಿಂದ ಭರ್ಜರಿ ಪ್ರಚಾರ ಕಾರ್ಯಗಳನ್ನು ಆರಂಭಿಸಿವೆ. ಆದರೆ, ಯಾರು ಅರ್ಹರು ಎಂಬುದನ್ನು ನಿರ್ಧರಿಸಿ ಮತವನ್ನು ಹಾಕಿ ಗೆಲ್ಲಿಸಬೇಕಾದವರು ಮಾತ್ರ ಮತದಾರರು ಆಗಿದ್ದಾರೆ. ಯಾವ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಹೆಸರಿದೆ? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ರಾಜ್ಯದಲ್ಲಿ ತುಂಬಾ ದಿನಗಳಿಂದ ಆಯಾ ಪ್ರದೇಶದಲ್ಲಿ ವಾಸವಿಲ್ಲದವರ ಹೆಸರನ್ನು ಕೈಬಿಟ್ಟಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಸರನ್ನು ಕೂಡಲೇ ಪರಿಶೀಲನೆ ಮಾಡಿಕೊಳ್ಳಲು ಇಲ್ಲಿದೆ ಅವಕಾಶ.

Tap to resize

Latest Videos

ಕೇಂದ್ರ ಚುನಾವಣಾ ಆಯೋಗದ ಈ ಮುಂದಿನ ವೆಬ್‌ಸೈಟ್‌ https://ceo.karnataka.gov.in/finalroll_2023/Dist_List.aspx ಲಿಂಕ್‌ ಕ್ಲಿಕ್‌ ಮಾಡಿದರೆ ರಾಜ್ಯದ 30 ಜಿಲ್ಲೆಗಳ ಹೆಸರು ಕಾಣಿಸುತ್ತದೆ. ಇದರಲ್ಲಿ ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು (ಬೆಂಗಳೂರಿನಲ್ಲಿ ಆಯಾ ಉಪ ವಿಭಾಗ ಮತ್ತು ವಿಧಾನಸಭಾ ಕ್ಷೇತ್ರಗಳು) ನೀಡಲಾಗಿದೆ. ಇನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್‌ವಾರು ಮತಗಟ್ಟೆಗಳ ವಿವರನ್ನು ನೀಡಲಾಗಿದೆ. ಅಲ್ಲಿ ನಿಮ್ಮ ಹೆಸರು ಯಾವ ಮತಗಟ್ಟೆಯಲ್ಲಿದೆ ಎಂಬುದನ್ನು ಮತಗಟ್ಟೆವಾರು ಪಿಡಿಎಫ್‌ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಣೆ ಮಾಡಬಹುದು. ಅದರಲ್ಲಿ ನಿಮ್ಮ ಹೆಸರಿದ್ದರೆ ಹೋಗಿ ಮತದಾನ ಮಾಡಬಹುದು. ಹೆಸರಿಲ್ಲದೇ ಹೋದಲ್ಲಿ ನಿಮಗೂ ಮುಜುಗರ ಆಗಬಹುದು.  ಮತಗಟ್ಟೆವಾರು ಪಿಡಿಎಫ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ: https://ceo.karnataka.gov.in/finalroll_2023/Dist_List.aspx

ಡಿಕೆಶಿ- ಸಿದ್ದರಾಮಯ್ಯ ಮನದಾಳದ ಮಾತು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದಿಗ್ಗಜರು!

ಮತದಾರರ ಚೀಟಿ ಇದ್ದವರು ಮತಗಟ್ಟೆ ಹುಡುಕುವುದು ಹೇಗೆ? 
ಇನ್ನು ನಮ್ಮ ಬಳಿ ಮತದಾರರ ಗುರುತಿನ ಚೀಟಿ ಇದೆ ಮತದಾನದ ಪೋಲಿಂಗ್‌ ಬೂತ್‌ (ಮತಗಟ್ಟೆ) ಯಾವುದು ಎಂಬುದರ ಬಗ್ಗೆ ಮಾಹಿತಿ ಇಲ್ಲವಾದಲ್ಲಿ ಕೂಡಲೇ ಈ ವೆಬ್‌ಸೈಟ್‌ ಲಿಂಕ್‌ನಲ್ಲಿ ಪರೀಕ್ಷೆ ಮಾಡಿಕೊಳ್ಳಬಹುದು. ಇದಕ್ಕಾಗಿ https://kgis.ksrsac.in/election/knowyourpollingbooth.aspx ಎಂಬ ಲಿಂಕ್‌ ಕ್ಲಿಕ್‌ ಮಾಡಿ, ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ಅಥವಾ ನಿಮ್ಮ ಹೆಸರಿನ ಆಧಾರದಲ್ಲಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಯನ್ನು ಹುಡುಕಬಹುದು. 

ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ವಿವರ ಇಲ್ಲಿ ನೋಡಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ವಿವರವನ್ನು ನೀವು ಇಲ್ಲಿ ವೀಕ್ಷಣೆ ಮಾಡಬಹುದು. ನಮ್ಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಯಾರು? ಯಾವ ಪಕ್ಷದಿಂದ ಯಾವ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ ಎಂದು ನೀವು ಈ ಲಿಂಕ್‌ https://kgis.ksrsac.in/election/home.aspx ಕ್ಲಿಕ್‌ ಮಾಡುವ ಮೂಲಕ ಅಭ್ಯರ್ಥಿಗಳನ್ನು ವೀಕ್ಷಣೆ ಮಾಡಬಹುದು. ಈ ಲಿಂಕ್‌ ತೆರೆದ ಕೂಡಲೇ 224 ವಿಧಾನಸಭಾ ಕ್ಷೇತ್ರದ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ, ವಿಧಾನಸಭಾ ಆಯ್ಕೆ ಮಾಡಿ ಅಭ್ಯರ್ಥಿಗಳ ವಿವರವನ್ನು ವೀಕ್ಷಿಸಬಹುದು.

Karnataka Election: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ

ವ್ಹೀಲ್‌ ಏರ್‌ ಬುಕಿಂಗ್‌ ಮಾಡಲು ಅವಕಾಶ: ಈಗಾಗಲೇ ಕೇಂದ್ರ ಚುನಾವಣಾ ಆಯೋಗದಿಂದ 80 ವರ್ಷ ಮೇಲ್ಪಟ್ಟ ಎಲ್ಲ ಮತದಾರರಿಂದ ಮನೆ ಮನೆಗೆ ತೆರಳಿ ಬ್ಯಾಲೆಟ್‌ ಪೇಪರ್‌ (ಪೋಸ್ಟಲ್‌ ವೋಟಿಂಗ್) ಮೂಲಕ ಮತವನ್ನು ಹಾಕಿಸಿಕೊಳ್ಳಲಾಗಿದೆ. ಇನ್ನು ಮೇ 10 ರಂದು ನಡೆಯುವ ಸಾರ್ವತ್ರಿಕ ಮತದಾನ ದಿನದಂದು ಅಂಗವಿಕಲರು ಅಥವಾ ಅನಾರೋಗ್ಯದಿಂದ ಬಳಲುವವರು ನಡೆದುಕೊಂಡು ಮತಗಟ್ಟೆಗೆ ಹೋಗಲಾಗದವರು ವ್ಹೀಲ್‌ ಚೇರ್‌ ಮೂಲಕ ತೆರಳಿ ಮತಗಟ್ಟೆಗೆ ಹೋಗಲು ಕೂಡ ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ವ್ಹೀಲ್‌ ಚೇರ್‌ ಬುಕಿಂಗ್‌ ಮಾಡಲಿ ಈ ಲಿಂಕ್‌ https://kgis.ksrsac.in/election/WheelChairBookingEng.aspx?id=1 ಕ್ಲಿಕ್‌ ಮಾಡಿ.

click me!