ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ರಾಮುಲು ಅಲ್ಲ, ಸ್ವತಃ ಮೋದಿ ಬಂದು ನಿಂತುಕೊಂಡರೂ ನಾವು ಗೆಲ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬಳ್ಳಾರಿ (ಅ.16): ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ರಾಮುಲು ಅಲ್ಲ, ಸ್ವತಃ ಮೋದಿ ಬಂದು ನಿಂತುಕೊಂಡರೂ ನಾವು ಗೆಲ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸಂಡೂರು ಉಪಚುನಾವಣೆ ವಿಚಾರವಾಗಿ ಇಂದು ಬಳ್ಳಾರಿಯ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಂಡೂರು ಅಷ್ಟೇ ಅಲ್ಲ, ಶಿಗ್ಗಾಂವಿಯಲ್ಲೂ ಅಲ್ಪಸಂಖ್ಯಾತರ ಪ್ರಾಬಲ್ಯ ಇದೆ. ಕಳೆದ ಐದಾರು ಬಾರಿ ಅಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಾಗಿದೆ. ಈ ಬಾರಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತೇನೆ ಎಂದರು.
undefined
ಬಳ್ಳಾರಿಯಲ್ಲಿ ಲೂಟಿ ಆಗ್ತಿತ್ತು, ನಾವು ಪಾದಯಾತ್ರೆ ಮಾಡಿದ ಬಳಿಕ ಈಗ ಎಲ್ಲವೂ ಶಾಂತಿ ಇದೆ: ಡಿಕೆ ಶಿವಕುಮಾರ
ಇನ್ನು ಚನ್ನಪಟ್ಟಣದಲ್ಲೂ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತದೆ. ಕಾಂಗ್ರೆಸ್ ವಿರುದ್ಧ ಯಾರೇ ನಿಂತರೂ ಗೆಲುವು ನಮ್ಮದೆ. ಎನ್‌ಡಿಎ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡ್ತಾರೋ, ಸಿಪಿ ಯೋಗೇಶ್ವರ ಆಗ್ತಾರೋ ಅದೆಲ್ಲ ಅವರ ಪಕ್ಷಕ್ಕೆ ಬಿಟ್ಟಿದ್ದು. ಆದರೆ ಯಾರೇ ನಿಂತರೂ ನಾವು ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು ಇದೇ ವೇಳೆ ಒಂದು ವೇಳೆ ಟಿಕೆಟ್ ಕೈತಪ್ಪಿದ್ರೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚನ್ನಪಟ್ಟಣದಲ್ಲಿ ಈ ಬಾರಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಯಾರು ಬಂದರೂ ಬರದಿದ್ದರೂ ಗೆಲುವು ನಮ್ಮದೇ ಎಂದರು.
ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ: 'ಮಳೆ ನೀರು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ?' ಗೃಹಸಚಿವ ಬೇಜವಾಬ್ದಾರಿ ಹೇಳಿಕೆ
ಇನ್ನು ಸಂಡೂರು ಉಪಚುನಾವಣೆಗೆ ಕಾಂಗ್ರೆಸ್ ವಿರುದ್ಧ ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ಎನ್‌ಡಿಎ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು. ವಾಲ್ಮೀಕಿ ಹಗರಣ ವಿಚಾರದಲ್ಲಿ ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ಎಲ್ಲ ಹಣವನ್ನು ಎಸ್‌ಐಟಿ ರಿಕವರಿ ಮಾಡಿದೆ. ಇನ್ನು 3.80 ಲಕ್ಷ ರಿಕವರಿ ಆಗಬೇಕಿದೆ. ಇಡಿ ಯವರು ಚಾರ್ಜ್ ಶೀಟ್ ಹಾಕಿದ್ರು ಏನೇ ಇದ್ದರೂ ಉಪಚುನಾವಣೆಯಲ್ಲಿ ಅದರ ಪರಿಣಾಮ ಆಗುವುದಿಲ್ಲ ಎಂದರು.
ಸಂಡೂರು ಉಪಚುನಾವಣೆಗೆ ಮಾಜಿ ಸಚಿವ ಬಿ ನಾಗೇಂದ್ರರನ್ನು ಕರೆದುಕೊಂಡು ಹೋಗ್ತಿರಾ ಎಂಬ ಪ್ರಶ್ನೆಗೆ, ಅವರೇ ಎಲೆಕ್ಷನ್ ನಡೆಸೋದು ಟೈಗರ್ ಈಸ್ ಬ್ಯಾಕ್ ಅವರ ನೇತೃತ್ವದಲ್ಲೇ ಚುನಾವಣೆ ನಡೆಯುವುದು ಎಂದ ಜಮೀರ್