ಚನ್ನಪಟ್ಟಣ ಉಪಚುನಾವಣೆಗೆ ನಮ್ಮ ಪಕ್ಷದಿಂದ ಡಿಕೆ ಸುರೇಶ್ ಸಾಹೇಬ್ರೇ ಅಧಿಕೃತ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆಗಳಿವೆ. ಅವರೇ ಗೆಲ್ಲಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಚಿಕ್ಕಬಳ್ಳಾರಪು (ಅ.16): ಚನ್ನಪಟ್ಟಣ ಉಪಚುನಾವಣೆಗೆ ನಮ್ಮ ಪಕ್ಷದಿಂದ ಡಿಕೆ ಸುರೇಶ್ ಸಾಹೇಬ್ರೇ ಅಧಿಕೃತ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆಗಳಿವೆ. ಅವರೇ ಗೆಲ್ಲಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ಸಂಬಂಧ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೂ ಚನ್ನಪಟ್ಟಣ ಉಪಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ಅವರೇ ನಮ್ಮ ಪಕ್ಷದ ಅಭ್ಯರ್ಥಿಯಾಗಲಿದ್ದು. ಗೆಲ್ಲುವುದು ನಿಶ್ಚಿತ ಎಂದರು.
undefined
ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ: 'ಮಳೆ ನೀರು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ?' - ಗೃಹಸಚಿವ
ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಜೆಡಿಎಸ್ ಬಿಜೆಪಿ ನಡುವೆ ಒಳಜಗಳ ತಾರಕಕ್ಕೇರಿದೆ. ಇದು ನಮಗೆ ಅನುಕೂಲ ಆಗಲಿದೆ. ಒಂದು ಕಡೆ ಸಿಪಿ ಯೋಗೇಶ್ವರ್ ತಾನು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದರೆ ಸಿಪಿ ಯೋಗೇಶ್ವರ್ ಬೆಂಬಲಿಗರ ಮತಗಳು ನಮಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಸಿಪಿವೈ ವರ್ಸಸ್ ಹೆಚ್‌ಡಿಕೆ ಒಳಜಗಳ ನಮಗೆ ಅನುಕೂಲವಾಗಿದೆ ಎಂದರು.
ಸದ್ಯ ನಮಗೆ ಇರೋ ಮಾಹಿತಿ ಪ್ರಕಾರ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರ್ ಸ್ವಾಮಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಹೀಗಾಗಿ ಬಿಜೆಪಿ ಜೆಡಿಎಸ್ ಒಳ ಜಗಳ ನಮಗೆ ಬೆನಿಫಿಟ್ ಆಗಲಿದೆ. ಡಿಕೆ ಸುರೇಶಣ್ಣ ನಮ್ಮ ಜೊತೆ ವಿಧಾನಸೌಧಕ್ಕೆ ಬರ್ತಾರೆ ಎಂಬ ವಿಶ್ವಾಸವಿದೆ. ಅವರೇ ಅಭ್ಯರ್ಥಿಯಾದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.