
ರಾಜ್ಯದ ರಾಜಕೀಯ ಕುತೂಹಲಿಗಳು ಯಾವುದಕ್ಕೋಸ್ಕರ ಕಾಯ್ತಾ ಇದ್ರೋ, ಅದು ನಡೆದಿದೆ.. ಡಿಕೆ ಶಿವಕುಮಾರ್ ಅವರ ಸಂಪುಟ ಈಗ ಸನ್ನದ್ಧವಾಗಿದೆ.. ಆದ್ರೆ ವೀಕ್ಷಕರೇ, ಒಂದಂತೂ ಸತ್ಯ.. ಸಂಪುಟ ರಚನೆ ಕೆಲಸ ಅಂದ್ರೆ, ಅದು ಹೆಜ್ಜೇನಿನ ಗೂಡಿಗೆ ಕಲ್ಲೆಸೆದ ಹಾಗೇನೆ.. ಅದರಿಂದ ಜೇನುತುಪ್ಪ ಸಿಕ್ಕಷ್ಟೇ, ಜೇನು ಕಡಿತವೂ ಖಚಿತ.. ಈಗ ಆಗ್ತಾ ಇರೋದೂ ಅದೆ. ಅದರ ಪರಿಣಾಮ ಏನಾಗಿದೆ? ಬಂಡಾಯ! ಬಂಡಾಯದ ಬಡಬಾಗ್ನಿ ಭುಗಿಲೆದ್ದು, ರಾಜ್ಯದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ.