
ಬೆಂಗಳೂರು (ಮೇ 31): ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 33 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಈಗ ಸಿದ್ದರಾಮಯ್ಯ ಅವರ ಆಪ್ತರಾದ ಎಂ.ಬಿ. ಪಾಟೀಲ್, ಪ್ರಿಯಾಂಕ ಖರ್ಗೆಗೆ ಅವರಿಗೆ ಹೆಚ್ಚುವರಿಯಾಗಿ ತಲಾ ಒಂದೊಂದು ಖಾತೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟಕ್ಕೆ ಆರಂಭದಲ್ಲಿಯೇ ಸೇರ್ಪಡೆಗೊಂಡ ಎಂ.ಬಿ. ಪಾಟೀಲ್ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಖಾತೆಗಳು ಹಂಚಿಕೆಯಾದ ಒಂದು ವಾರದ ನಂತರ ಪುನಃ ತಲಾ ಒಂದೊಂದು ಹೆಚ್ಚುವರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈಗಾಗಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಕೂಡ ನೀಡಲಾಗಿದೆ. ಮತ್ತೊಂದೆಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಅವರಿಗೆ ಹೆಚ್ಚುವರಿಯಾಗಿ ಐಟಿ ಮತ್ತು ಬಿಟಿ ಖಾತೆಯನ್ನು ನೀಡಲಾಗಿದೆ. ಇನ್ನು ಪ್ರಿಯಾಂಕ ಖರ್ಗೆ ಅವರು 2013ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿಯೂ ಕೂಡ ಐಟಿ-ಬಿಟಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು.
ರಾಮಲಿಂಗಾರೆಡ್ಡಿಗೆ ಒಂದು ಖಾತೆ ತಗೊಂಡ್ರೆ ಮತ್ತೊಂದು ಫ್ರೀ: ಆಪ್ತನಿಗೆ ಆಫರ್ ಕೊಟ್ಟ ಡಿ.ಕೆ.ಶಿವಕುಮಾರ್
ಸಿಎಂ ಬಳಿಯಿದ್ದ ಖಾತೆಗಳ ಹಂಚಿಕೆ: ಇನ್ನು ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಕ ಖರ್ಗೆ ಅವರಿಗೆ ಬುಧವಾರ (ಜೂ.31ರಂದು) ಹಂಚಿಕೆ ಮಾಡಲಾದ ಖಾತೆಗಳು ಈವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೇ ಹಂಚಿಕೆಯಾಗದೆ ಉಳಿದ ಖಾತೆಗಳಾಗಿದ್ದವು. ಈಗ ಸಂಬಂಧಪಟ್ಟ ಸಚಿವಾಲಯದ ಅನುಭವ ಇರುವ ಹಾಗೂ ಆಪ್ತರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಮ ಹಣಕಾಸು, ಸಚಿವಾಲಯ ವ್ಯವಹಾರಗಳು, ಇಲಾಖೆ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳು, ಗುಪ್ತಚರ ಹಾಗೂ ಮಾಹಿತಿ ಇಲಾಖೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.
ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ
ಸಿಎಂ ಸಿದ್ದರಾಮಯ್ಯ: ಹಣಕಾಸು, ಗುಪ್ತಚರ ಹಂಚಿಕೆಯಾದ ಖಾತೆಗಳು
ಡಿಸಿಎಂ ಡಿಕೆ ಶಿವಕುಮಾರ್: ಸಣ್ಣ ಮತ್ತು ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ
ಜಿ.ಪರಮೇಶ್ವರ್: ಗೃಹ
ಹೆಚ್ ಕೆ ಪಾಟೀಲ್: ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
ಕೆ.ಹೆಚ್.ಮುನಿಯಪ್ಪ: ಆಹಾರ
ರಾಮಲಿಂಗರೆಡ್ಡಿ: ಸಾರಿಗೆ ಮತ್ತು ಮುಜರಾಯಿ
ಎಂ.ಬಿ.ಪಾಟೀಲ್: ಬೃಹತ್-ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
ಕೆ.ಜೆ.ಜಾರ್ಜ್: ಇಂಧನ
ದಿನೇಶ್ ಗುಂಡೂರಾವ್: ಆರೋಗ್ಯ
ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ
ಸತೀಶ್ ಜಾರಕಿಹೊಳಿ: ಲೋಕೋಪಯೋಗಿ
ಕೃಷ್ಣ ಬೈರೇಗೌಡ: ಕಂದಾಯ
ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ
ಶಿವಾನಂದ ಪಾಟೀಲ್: ಜವಳಿ ಮತ್ತು ಸಕ್ಕರೆ
ಅನ್ನಭಾಗ್ಯ ಯೋಜನೆಯ 450 ಅಕ್ಕಿ ಮೂಟೆ ತುಂಬಿದ್ದ ಲಾರಿಯೇ ನಾಪತ್ತೆ!
ಜಮೀರ್ ಅಹ್ಮದ್ ಖಾನ್: ವಸತಿ
ಶರಣುಬಸಪ್ಪ ದರ್ಶನಾಪುರ್: ಸಣ್ಣ ಕೈಗಾರಿಕೆ
ಈಶ್ವರ್ ಖಂಡ್ರೆ: ಅರಣ್ಯ
ಚಲುವರಾಯಸ್ವಾಮಿ: ಕೃಷಿ
ಎಸ್.ಎಸ್.ಮಲ್ಲಿಕಾರ್ಜುನ: ಗಣಿ
ರಹೀ ಖಾನ್: ಪೌರಾಡಳಿತ ಮತ್ತು ಹಜ್
ಸಂತೋಷ ಲಾಡ್: ಕಾರ್ಮಿಕ
ಡಾ.ಶರಣುಪ್ರಕಾಶ್ ಪಾಟೀಲ್: ವೈದ್ಯಕೀಯ
ಆರ್.ಬಿ.ತಿಮ್ಮಾಪುರ: ಅಬಕಾರಿ
ಕೆ.ವೆಂಕಟೇಶ್: ಪಶುಸಂಗೋಪನೆ
ಶಿವರಾಜ್ ತಂಗಡಗಿ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
ಡಿ.ಸುಧಾಕರ್: ಯೋಜನೆ
ಬಿ.ನಾಗೇಂದ್ರ: ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
ಕೆ.ಎನ್.ರಾಜಣ್ಣ: ಸಹಕಾರ
ಬಿ.ಎಸ್.ಸುರೇಶ್: ನಗರಾಭಿವೃದ್ಧಿ
ಲಕ್ಷ್ಮಿ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಂಕಾಳ್ ವೈದ್ಯ: ಮೀನುಗಾರಿಕೆ ಮತ್ತು ಬಂದರು
ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಡಾ.ಎಂ.ಸಿ.ಸುಧಾಕರ್: ಉನ್ನತ ಶಿಕ್ಷಣ
ಎನ್.ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.