Karnataka Politics; ನಲಪಾಡ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಕೋರರ ಸತ್ಯ ಹೇಳಿದ ಹ್ಯಾರಿಸ್!

By Suvarna NewsFirst Published Nov 5, 2021, 9:41 PM IST
Highlights

* ಬೇಕಂತಲೇ ನಲ್ ಪಾಡ್ ವಿರುದ್ಧ ಕೆಟ್ಟ ಸುದ್ದಿ ಹಬ್ಬಿಸುವ ಕೆಲಸ ಮಾಡ್ತಿದ್ದಾರೆ
*  ಶಾಂತಿನಗರ ಶಾಸಕ ಹ್ಯಾರೀಸ್  ನೋವು 
* ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾತು ಬಂದಾಗಲೆಲ್ಲ ಒಂದೆಲ್ಲ ಒಂದು ಆರೋಪ
* ಒಂದೇ ಪ್ರಕರಣವನ್ನು ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯೆ?

ಬೆಂಗಳೂರು(ನ. 05) ನಲಪಾಡ್( Mohammed Haris Nalapad) ವಿರುದ್ಧ ವಿರೋಧಿಗಳು ಬೇಕಂತಲೇ ಕೆಟ್ಟ ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಯೂತ್ ಕಾಂಗ್ರೆಸ್ (Youth Congress) ಅಧ್ಯಕ್ಷ ಸ್ಥಾನ ತಪ್ಪಿಸಲು ಇಂಥ ಕೆಲಸ ಮಾಡುತ್ತಿದ್ದಾರೆ. ಯಾವುದೋ ಒಂದು ಕೇಸ್ ಆಯ್ತು ಅಂತ ಎಲ್ಲದಕ್ಕೂ ಜೋಡಿಸಲಾಗುತ್ತಿದೆ ಎಂದು ನಲಪಾಡ್ ಅವರ ತಂದೆ ಶಾಂತಿನಗರ ಶಾಸಕ ಹ್ಯಾರೀಸ್  (NA Haris) ನೋವು ತೋಡಿಕೊಂಡಿದ್ದಾರೆ.

ನಲಪಾಡ್ ಈಗ ಸಾಮಾಜಿಕ ಕೆಲಸದಲ್ಲಿ (Social Service) ಈಗ ತೊಡಗಿದ್ದಾನೆ. ಯಾವ್ದೋ ಕಾಯಿನ್ ವಿಚಾರಕ್ಕೂ ನಲಪಾಡ್ ಗೂ ಸಂಬಂಧ ಇಲ್ಲ. ನಾವು ನಮ್ಮ ಬ್ಯುಸಿನೆಸ್ ನೋಡ್ಕೊಂಡ್ ಇದಿನಿ. ಈ ತರ ತುಳಿಯೋ ಯತ್ನ ಮಾಡಬಾರದು‌. ಇಡಿ ಯಾವತ್ತು ನೋಟಿಸ್ ಕೊಡೋದು ಯಾರಿಗೂ ಗೊತ್ತಾಗಲ್ಲ. ಮಾದ್ಯಮದವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ‌. ಬೇರೆಯವರ ಸುಳ್ಳು ಹೇಳಿಕೆಗೆ ನೀವು ಇಲ್ಲಿ ಬಂದಿದ್ದೀರಿ ಎಂದು ಹ್ಯಾರೀಸ್ ಪ್ರತಿಕ್ರಿಯೆ ನೀಡಿದರು.

ಕೆಟ್ಟು ನಿಂತ ಆಂಬುಲೆನ್ಸ್ ತಳ್ಳಿದ ನಲಪಾಡ್

ಶ್ರೀಕಿ ನಲಪಾಡ್ ಗೆ ಫ್ರೆಂಡೋ ಇಲ್ವೋ ಗೊತ್ತಿಲ್ಲ. ನಲಪಾಡ್ ಎಲ್ಲಾ ಸ್ನೇಹಿತರು ನನಗೆ ಗೊತ್ತಿಲ್ಲ.. ನನಗೆ ಗೊತ್ತಿರೋ ಪ್ರಕಾರ ನನ್ನ ಮಗ ಯಾವುದೇ ಕಾಯಿನ್ ವ್ಯವಹಾರ ಮಾಡಿಲ್ಲ ಎಂದರು.

ಯೂತ್ ಕಾಂಗ್ರೇಸ್ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಇದೆಲ್ಲ ನಡೀತಾ ಇದೆ. ಸಿಎಲ್ ಪಿ ಲೀಡರ್ ಮತ್ತು ನಮ್ಮ ಎಲ್ಲಾ ನಾಯಕರಿಗೆ ಈ ವಿಚಾರ ಗೊತ್ತಿದ್ದು ಅವರು ಎಲ್ಲವನ್ನು ಅರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹ್ಯಾರೀಸ್ ತಿಳಸಿದರು. 

ಬಿಟ್ ಕಾಯಿನ್ ಮತ್ತು ಹಲ್ಲೆ ಪ್ರಕರಣ: ಸಿದ್ದರಾಮಯ್ಯನವರೇ ಆರೋಪ ಮಾಡಿದ್ದ ಬಿಟ್ಟ ಕಾಯಿನ್ ಹಗರಣಕ್ಕೂ ನಲಪಾಡ್ ಗೂ ಲಿಂಕ್ ಮಾಡುವಂತಹ ಮಾತುಗಳು ಬಂದಿದ್ದವು. ಇನ್ನೊಂದು ಕಡೆ ಕೆಲ ದಿನಗಳ ಹಿಂದೆ ತನ್ನ ಸ್ನೇಹಿತರನ್ನು ನಲಪಾಡ್  ಪ್ರಕರಣವೊಂದರಲ್ಲಿ ಬಚಾವ್ ಬ ಮಾಡಿದ್ದರು ಎಂಬುದು  ಸುದ್ದಿಯಾಗಿತ್ತು.

ನಲಪಾಡ್ ಸಾಮಾಜಿಕ ಕೆಲಸದಲ್ಲಿಯೂ ತೊಡಗಿಕೊಂಡಿದ್ದಾರೆ. ಕೊರೋನಾ ವಾರಿಯರ್ಸ್ ಜತೆ ನಿಲ್ಲುವ ಕೆಲಸ ಮಾಡಿದ್ದರು.   ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮೊಹಮ್ಮದ್ ನಲಪಾಡ್ ಗೆದ್ದರೂ ಅಧ್ಯಕ್ಷ ಪಟ್ಟ ಕೈತಪ್ಪಿಸಿಕೊಂಡಿದ್ದರು.

ನಲ್ ಪಾಡ್ ಗಿಂತ ಕಡಿಮೆ ಮತ ಪಡೆದರೂ ರಕ್ಷ ರಾಮಯ್ಯ  ಅವರು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಅಪರಾಧ ಪ್ರಕರಣದ ಕಾರಣಕ್ಕೆ ನಲ್ಪಾಡ್ ಅವರನ್ನ ಎಐಸಿಸಿ ಅನರ್ಹ ಮಾಡಿತ್ತು.

ಇದರಿಂದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹೆಚ್ಚು ಮತ ಪಡೆದಿದ್ದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ  ನಲ್ಪಾಡ್ ಗೆ ಒಲಿದಿಒರಲಿಲ್ಲ.  57271 ಮತ ಪಡೆದ ರಕ್ಷ ರಾಮಯ್ಯ ಅಧ್ಯಕ್ಷರಾಗಿದ್ದಾರೆ.  ಶಾಂತಿನಗರ ಶಾಸಕ ಎನ್.ಎ.ಹಾರೀಸ್ ಅವರ ಪುತ್ರ ಮೊಹಮ್ಮದ್ ನಲ್ಲಪಾಡ್, ಎಂ.ಆರ್.ಸೀತಾರಾಮು ಅವರ ಪುತ್ರ ರಕ್ಷ ರಾಮಯ್ಯ ನಡುವೆ ಗದ್ದುಗೆಗಾಗಿ ಗುದ್ದಾಟ ನಡೆದಿತ್ತು. 

click me!