ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಸಂಪೂರ್ಣ ಅವೈಜ್ಞಾನಿಕ: ಪ್ರಧಾನಿ ಮೋದಿ, ಹೆಚ್‌ಡಿಕೆ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

Published : Nov 28, 2026, 12:17 PM IST
Priyank khage

ಸಾರಾಂಶ

Delimitation bill: ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಈ ಮಸೂದೆ ಅವೈಜ್ಞಾನಿಕವೆಂದು ಮತ್ತು ಮೋದಿಗೆ ಸೋಲಿನ ಭಯವಿದೆಯೆಂದು ಅವರು ಹೇಳಿದ್ದಾರೆ.

ಕಲಬುರಗಿ (ನ.28): ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ಕಲ್ಪಿಸುವ, ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂವಿಧಾನಿಕ ಪ್ರಕ್ರಿಯೆಗೆ ಮುಂದಾಗಿರುವ ಹಿನ್ನೆಲೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಟೀಕಿಸಿದ್ದಾರೆ.

ಈ ವಿಚಾರವಾಗಿ ಇಂದು ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಲೋಕಸಭೆಯಲ್ಲಿ ಈಗಲೇ 545 ಸದಸ್ಯರಿದ್ದಾರೆ. ಅವರಿಗೆ ಮಾತನಾಡೋಕೆ ಸಮಯ, ಅವಕಾಶವೇ ಸಿಗುತ್ತಿಲ್ಲ. ಹೀಗಿರುವಾಗ ಇನ್ನು ಹೆಚ್ಚಿಗೆ ಮಾಡಿ ಏನು ಪ್ರಯೋಜನವಾಗುತ್ತೆ? ಎಂದು ಪ್ರಶ್ನಿಸಿದರು.

ಕ್ಷೇತ್ರ ಮರುವಿಂಗಡಣೆಯ ಆಯೋಗದಲ್ಲಿ ಜ್ಞಾನೇಶ್‌ ಕುಮಾರ್ ಸಮಿತಿ ಸದಸ್ಯರಿದ್ದಾರೆ. ಎಸ್‌ಐಆರ್ ಹಾಳು ಮಾಡಿದ್ದು ಇವರೇ ಅಲ್ಲವಾ? ಇಂಥವರು ಸಮಿತಿಯ ಸದಸ್ಯರಾಗಿದ್ದಾರೆ. ಹೀಗಾಗಿ ಈ ಮಸೂದೆಯಲ್ಲಿ ಸ್ಪಷ್ಟ ಉದ್ದೇಶವಿದೆ. ಈ ಬಗ್ಗೆ ನಮ್ಮ ಮೈತ್ರಿಕೂಟದ ಸದಸ್ಯರು ಏನು ಹೇಳ್ತಾರೋ ಗೊತ್ತಿಲ್ಲ, ಡಿಎಂಕೆ ನಾಯಕರು ಏನು ಮಾಡ್ತಾರೋ ಕಾದುನೋಡೋಣ. ಆದ್ರೆ ಪ್ರಧಾನಿ ಮೋದಿಗೆ ಸೋಲಿನ ಭಯವಂತೂ ಶುರುವಾಗಿದೆ. ಅದಕ್ಕಾಗಿಯೇ ಇವೆಲ್ಲ ಡಿಲೀಮಿಟಿಷನ್ ಅಂತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧವೂ ಟೀಕಿಸಿದರು.

ಎನ್‌ಡಿಎ ಮೈತ್ರಿಕೂಡ ಅಧಿಕಾರಕ್ಕೆ ಬಂದ್ರೆ ಎರಡು ಹಸು ಹೆಚ್ಡಿಕೆ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು

ಇನ್ನು ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಎರಡು ಹಸು ಕೊಡ್ತೇವೆ ಎಂಬ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಖರ್ಗೆ, ಅವರು ಗೆಲ್ಲೋ ವಿಶ್ವಾಸದಲ್ಲಿ ಇತಿಮಿತಿಯಲ್ಲಿ ಹೇಳ್ತಾರೆ. ಇಲ್ಲಾಂದ್ರೆ ಎರಡು ಹಸು ಏಕೆ, ಎತ್ತು ಕೊಡ್ತಿನಿ ಅಂತಾರೆ. ಹಿಂದೆ ಅಚ್ಚೇ ದಿನ್ ಬರುತ್ತೆ ಅಂತಾ ಹೇಳಿ ಗೆದ್ದರಲ್ಲ, ಹಾಗಾದ್ರೆ ಯಾರಿಗೆ ಬಂತು ಅಚ್ಚೇ ದಿನ್? ಎಂದು ಪ್ರಶ್ನಿಸಿದರು. ಮುಂದುವರಿದು, ಇಂದು ಯಾರಾರು ಸೋತು ಸುಣ್ಣವಾಗಿದ್ದಾರೋ ಅವರೆಲ್ಲ ಮೋದಿ ಕಹೀ ಮಹೀ ಜಾಯೇಗಾ ಅಂತಿದ್ದಾರೆ. ಮೊದಲಿಗೆ ಸೋತಿರೋರನ್ನ ವಿಧಾನಸೌಧಕ್ಕೆ ಕಳಿಸಿ ಎಂದು ಸವಾಲು ಹಾಕಿದರು.

ಆಶಾ ಕಾರ್ಯಕರ್ತರ ಜವಾಬ್ದಾರಿ ನಮ್ಮದಷ್ಟೇ ಅಲ್ಲ, ಕೇಂದ್ರದ್ದೂ ಇದೆ

ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆಶಾ ಕಾರ್ಯಕರ್ತರಿಗೆ ಮನವಿ ಮಾಡಿದ್ದೇವೆ. ಹೋರಾಟದಿಂದ ಹಿಂದೆ ಸರಿಯುವಂತೆ ಹೇಳಿದ್ದೇವೆ. ಆದ್ರೂ ಅವರು ಮುಷ್ಕರದಿಂದ ಹಿಂದೆ ಸರಿಯುತ್ತಿಲ್ಲಂದ್ರೆ ಏನು ಮಾಡೋಕಾಗುತ್ತೆ? ಆಶಾ ಕಾರ್ಯಕರ್ತೆಯರ ಜವಾಬ್ದಾರಿ ನಮ್ಮದಷ್ಟೇ ಅಲ್ಲ. ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ಅವರು ಕೇಂದ್ರ ಸರ್ಕಾರದ ಯೋಜನೆಯಡಿ ಕೆಲಸ ಮಾಡ್ತಿರೋದು. ನಾವು ಅವರಿಗಿಂತ ಹೆಚ್ಚಿನ ಹಣ ಕೊಡ್ತಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಗ ಬಿಜೆಪಿ, ಈಗ ಕಾಂಗ್ರೆಸ್ ಸಂಬಂಧ: ಸಚಿವ ಬೈರತಿ ಸುರೇಶ್​ ಪುತ್ರಿ- ಕೈ ನಾಯಕನ ಪುತ್ರನ ಅದ್ಧೂರಿ ಮದುವೆ
ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆ: ಕೇಂದ್ರದ ಯೋಜನೆ ಏನು? ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕವೇಕೆ?