ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಡೆ ರೀತಿ ಅವರ ಜೊತೆ ನಿಂತಿದ್ದ ಆ ದಿನಗಳನ್ನು ನೆನೆದ ಡಿಕೆ ಶಿವಕುಮಾರ, ಹೇಳಿದ್ದೇನು?

Kannadaprabha News   | Kannada Prabha
Published : Nov 28, 2026, 06:17 AM IST
DK Shivakumar political statement

ಸಾರಾಂಶ

DK Shivakumar political statement ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಬಂಡೆಯಂತೆ ನಿಂತಿದ್ದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಹಾಕಿದ ಹಾದಿಯಲ್ಲೇ ಈಗಿನ ಸರ್ಕಾರ ನಡೆಯುತ್ತಿದೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಹಾವೇರಿ (ನ.28): ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿ(Chief Minister) ಆಗಿದ್ದಾಗ ಅವರೊಂದಿಗೆ ನಾನು ಬಂಡೆಯಂತೆ ನಿಂತಿದ್ದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(CM DK Shivakumar) ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಹಾಕಿದ ಹಾದೀಲೆ ಈಗಿನ ಸರ್ಕಾರ ನಡೆಯುತ್ತಿದೆ

ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತಿ(Kanakadas jayanti) ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸಿದ್ದರಾಮಯ್ಯ ಅವರ ಜತೆ ನಾನು ಒಂದು ಬಂಡೆಯಂತೆ ನಿಂತಿದ್ದು ನಿಮಗೆ ಅರಿವು ಇದೆ. ನಮ್ಮ ಪಕ್ಷದ ಆದೇಶದಂತೆ ನನಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಹಾಕಿದ ಹಾದಿಯಲ್ಲಿ ಈಗಿನ ಕಾಂಗ್ರೆಸ್‌ ಸರ್ಕಾರ ನಡೆಯುತ್ತಿದೆ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.

ನಾನು ನಿಮ್ಮ ಪ್ರಜಾ ಸೇವಕನಾಗಿ ಆಡಳಿತ ಮುಂದುವರಿಸುತ್ತೇನೆ. ನಿಮ್ಮೆಲ್ಲರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡುವೆ. ನಾನು‌ ಕೂಡ ನಿಮ್ಮವನೇ, ನಿಮ್ಮ ಆರ್ಶಿವಾದ ಸದಾ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಯಾರೂ ಹಸಿವಿನಿಂದ ಇರಬಾರದು ಅಂದರು. ಅದರಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಬೆಲೆ ಏರಿಕೆ ಗಗನಕ್ಕೆ ಏರಿದೆ. ಆದಾಯ ಪಾತಾಳಕ್ಕೆ ಕುಸಿದಿದೆ‌. ಜಿಲ್ಲೆಯಲ್ಲಿ 7 ಜನರ ಶಾಸಕರನ್ನು ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದೀರಿ ಎಂದು ಹೇಳಿದರು.

ದೊರೆ ಎನ್ನುವ ಬದಲು ಪ್ರಜಾಸೇವಕ ಅನ್ನಿ: ಡಿಕೆ

ನನ್ನನ್ನು ನಾಡಿನ ದೊರೆ, ರಾಜ ಎಂದು ಕರೆಯುವುದಕ್ಕಿಂತ ಪ್ರಜಾ ಸೇವಕ ಎಂದು ಕರೆಯಬೇಕು. ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮುಂದುವರಿಸುವೆ ಎಂದು ಸಿಎಂ ಹೇಳಿದರು. ಹಾವೇರಿಯಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆ ರಚಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ನೀಡಿದ್ದಾರೆ. ಸಮಾಜ ಸೇವೆಗೆ ಅವರದೇ ಆದ ಸಂದೇಶ ನೀಡಿದ್ದು, ಇದೇ ಕಾಂಗ್ರೆಸ್ ಸರ್ಕಾರದ ಧ್ಯೇಯವಾಗಿದೆ ಎಂದರು.

ಅಕ್ಷರಗಳ ಮೂಲಕ ಅರಿವು ನೀಡಿ, ಕೀರ್ತನೆಗಳ ಮೂಲಕ ಭಕ್ತಿ ಬೆಳೆಸಿ, ವಿಚಾರಗಳ ಮೂಲಕ ಸಮಾಲೋಚನೆ ಜಾಗೃತಿ ಮೂಡಿಸಿದ ಮಹಾನ್ ಚೇತನ ಕನಕದಾಸರು ಎಂದು ಸ್ಮರಿಸಿದರು.

ಪ್ರಜಾಸೇವಕನಾಗಿ ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕೊಂಡೊಯ್ಯುವ ಕೆಲಸ ಮಾಡಲಾಗುವುದು. ನನ್ನನ್ನು ನಾಡಿನ ದೊರೆ, ರಾಜ ಎಂದು ಕರೆಯುವುದಕ್ಕಿಂತ ಪ್ರಜಾ ಸೇವಕ ಎಂದು ಕರೆಯಬೇಕು. ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮುಂದುವರಿಸುಕೊಂಡು ಹೋಗುವೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇವರಿಗೆ ಲಿಖಿತ ಭರವಸೆ ಕೊಟ್ರೆ ನಾಳೆ ಎಲ್ರೂ ಕೇಳ್ತಾರೆ, ಸರ್ಕಾರ ನಡೆಸೋಕೆ ಆಗುತ್ತಾ? ಆಶಾ ಕಾರ್ಯಕರ್ತೆಯರ ಬಗ್ಗೆ ಸಚಿವ ಬಾಲಕೃಷ್ಣ ಹೇಳಿಕೆ ಸಂಚಲನ!
ನಾವು ಓದುತ್ತಿರುವ ಸಂವಿಧಾನ ಪೀಠಿಕೆ ಅಂಬೇಡ್ಕರ್ ಬರೆದಿದ್ದಾ? ಇಂದಿರಾಗಾಂಧಿ ಬರೆಸಿದ್ದಾ? ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಸಿಂಹ ವಾಗ್ದಾಳಿ