ಯಾವ ಧರ್ಮ ಸಮಾಜಕ್ಕೆ, ಮನುಷ್ಯನಿಗೆ ಸುಖ, ಶಾಂತಿ ನೀಡಬೇಕೋ ಅದರಿಂದಲೇ ಇಂದು ಭಯೋತ್ಪಾದನೆ ನಡೆಯುತ್ತಿದ್ದು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಹೇಳಿದರು.
ಬಾಳೆಹೊನ್ನೂರು (ಮಾ.24): ಯಾವ ಧರ್ಮ ಸಮಾಜಕ್ಕೆ, ಮನುಷ್ಯನಿಗೆ ಸುಖ, ಶಾಂತಿ ನೀಡಬೇಕೋ ಅದರಿಂದಲೇ ಇಂದು ಭಯೋತ್ಪಾದನೆ ನಡೆಯುತ್ತಿದ್ದು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಹೇಳಿದರು. ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ನಡೆದ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರ ಪ್ರಜ್ಞೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಎಲ್ಲ ಕಡೆಗಳಲ್ಲಿ ಭಯೋತ್ಪಾದನೆ ನಿರಂತರವಾಗಿ ನಡೆಯುತ್ತಿದೆ.
ಭಯೋತ್ಪಾದನೆ ಮನಃ ಪರಿವರ್ತನೆಯಿಂದ ಮಾತ್ರ ನಿಲ್ಲಿಸಲು ಸಾಧ್ಯ. ಧರ್ಮದ ಹಾದಿಯಲ್ಲಿ ನಿಷ್ಠೆಯಿಂದ ನಡೆದರೆ ಮಾತ್ರ ಭಯೋತ್ಪಾದನೆಗೆ ಕಡಿವಾಣ ಹಾಕಲು ಸಾಧ್ಯವಿದೆ. ನಮ್ಮ ನಡುವೆ ಇಂದು ಇರುವುದು ನಾಗರಿಕತೆ, ನಾವು ಏನಾಗಿದ್ದೇವೋ ಅದು ಸಂಸ್ಕೃತಿಯಾಗಿದೆ. ಆತ್ಮಸಾಕ್ಷಿ ಹಾಗೂ ಮುಗ್ಧತೆಯಿಂದ ನಡೆದುಕೊಳ್ಳುವುದು ಬಹಳ ಕಷ್ಟ. ಇವು ಎರಡನ್ನು ಯಾರು ಅಳವಡಿಸಿಕೊಂಡು ಸಾಧನೆ ಮಾಡುತ್ತಾರೋ ಅವರೇ ನಿಜವಾದ ಮಾನವನಾಗಲಿದ್ದಾನೆ. ಇದನ್ನು ಮನಗಂಡೇ ಜಗದ್ಗುರು ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶಾಂತಿ ಮಂತ್ರ ಹೇಳಿದ್ದಾರೆ.
undefined
33 ವರ್ಷಗಳ ನಂತರ ಅಪ್ಪನ ಬದಲು ಮಗನ ಸ್ಪರ್ಧೆ: ಸುನಿಲ್ ಬೋಸ್‌ಗೆ ಕಾಂಗ್ರೆಸ್ ಟಿಕೆಟ್
ರಂಭಾಪುರಿ ಜಗದ್ಗುರುಗಳ ನುಡಿಯಂತೆ ಸಾಹಿತ್ಯವಿಲ್ಲದೇ ಸಂಸ್ಕೃತಿಯಿಲ್ಲ. ನಮ್ಮನ್ನು ಎಚ್ಚರಿಸುವ ಸಾಹಿತ್ಯ ಹೆಚ್ಚು ರಚನೆ ಯಾಗಬೇಕಿದ್ದು, ತಂತ್ರಜ್ಞಾನ, ವಿಜ್ಞಾನದ ಮೂಲ ಜ್ಞಾನವಾಗಿದೆ. ಧ್ಯಾನ-ಜ್ಞಾನ ಇವುಗಳನ್ನು ಗುರುಗಳು ನಮಗೆ ಹೇಳಿ ಕೊಟ್ಟಿದ್ದು, ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಹಿತ್ಯ, ಸಂಸ್ಕೃತಿ ಬೆಳೆಯಲು ಸಾಧ್ಯವಿದೆ ಎಂದರು. ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ವೀರಶೈವರ ವೈಶಿಷ್ಟ್ಟತೆಯಾಗಿದ್ದು ಇದಾವುದು ಇಲ್ಲದೇ ವೀರಶೈವರು ಇಲ್ಲ. ವೀರಶೈವ ಎಂದರೆ ಭಕ್ತಿಯಲ್ಲಿ, ಬದುಕಿನಲ್ಲಿ ವೀರರಾಗಿರುವುದು. ವೀರಶೈವ ನಿತ್ಯ ಬದುಕಿನಲ್ಲಿ ನಮ್ಮ ಧರ್ಮದ ಕ್ರಮ ಗಳನ್ನು ಇಟ್ಟುಕೊಳ್ಳುತ್ತಾರೆ. ಇದರಿಂದಾಗಿ ವೀರಶೈವ ಶ್ರೇಷ್ಠ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು. ಹುಟ್ಟಿದ ಎಲ್ಲರೂ ಸಮಾನರು.
Lok Sabha Election 2024: ಮೋದಿಯವರು ಸುಭದ್ರ ದೇಶವನ್ನಾಗಿ ಕಟ್ಟುವ ಶಕ್ತಿ ಪಡೆದಿದ್ದಾರೆ: ಎಸ್.ಬಾಲರಾಜ್
ಜಾತಿ, ಮತ, ಪಂಥ ಬೇಧವಿಲ್ಲ. ಸಾವಿನ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ, ಖಚಿತತೆ ಯಾರಿಗೂ ಇರುವುದಿಲ್ಲ. ನಮ್ಮ ಕೈಯಲ್ಲಿ ಕೇವಲ ಬದುಕು ಮಾತ್ರವಿದ್ದು ಇದರ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಕೇವಲ ಕಾಮ, ಕ್ರೋಧ, ಮದ, ಮತ್ಸರಗಳ ನಡುವೆ ಇರುವ ಮನುಷ್ಯರು. ಪ್ರೀತಿ, ವಿಶ್ವಾಸ, ಕರುಣೆ ಬೆಳೆಸಿಕೊಂಡರೆ ಅವರೇ ನಿಜವಾದ ಮಾನವರಾಗಲಿದ್ದಾರೆ. ಮಾನವ ಬದುಕಿನಲ್ಲಿ ಸಾಧನೆ ಮಾಡಲು ತತ್ವ, ನೀತಿ ಇಟ್ಟುಕೊಂಡು ಹೋಗಬೇಕು. ತತ್ವ, ನೀತಿಗೆ ಕೇವಲ ಗುರುವಿನಿಂದ ಸಂಸ್ಕಾರ ದೊರೆಯಲು ಸಾಧ್ಯವಿದೆ. ಸಂಸ್ಕಾರ ಪಡೆಯಲು ಪರಿಶುದ್ಧ ಭಕ್ತಿ ಮಾರ್ಗ ಬೇಕಿದೆ. ಗುರುವಿನಲ್ಲಿ ನಿಜವಾದ ಭಕ್ತಿ ಹೊಂದಿದಾಗ ಮಾತ್ರ ಆಶೀರ್ವಾದ ದೊರೆಯಲಿದೆ. ಇದು ದೇಶದ ಆಧಾರ. ಸಂಸ್ಕಾರಯುತವಾದ ಶಕ್ತಿ ನಮ್ಮ ದೇಶದಲ್ಲಿದೆ. ಸಂಸ್ಕೃತಿ, ಸಂಸ್ಕಾರದಿಂದ ಹಿರಿಯರಲ್ಲಿ ಗೌರವ, ಅನುಕಂಪ, ಪ್ರೀತಿ, ವಿಶ್ವಾಸ ಬರಲಿದೆ ಎಂದರು.