ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಕ್ಷೇತ್ರ ಕನಕಪುರದಲ್ಲಿ ಶಕ್ತಿ ಪ್ರದರ್ಶನ ತೋರಿದ್ದಾರೆ. ಈ ವೇಳೆ ತಾವೂ ಕೂಡ ಸಿಎಂ ಅಭ್ಯರ್ಥಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ರಾಮನಗರ (ಮೇ.8): ಕರ್ನಾಟಕ ವಿಧಾನ ಸಭೆ ಚುನಾವಣಾ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಕೊನೆ ದಿನದ ಕಸರತ್ತಿನಲ್ಲಿ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಕ್ಷೇತ್ರ ಕನಕಪುರದಲ್ಲಿ ಶಕ್ತಿ ಪ್ರದರ್ಶನ ತೋರಿದ್ದಾರೆ. ಕನಕಪುರ ಮುನಿಸಿಪಲ್ ಗ್ರೌಂಡ್ ನಡೆದ ಬೃಹತ್ ಸಮಾವೇಶದಲ್ಲಿ ಸುಮಾರು 10 ಸಾವಿರಾರು ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ತಮ್ಮ ಭಾಷಣದಲ್ಲಿ ಕ್ಷೇತ್ರದ ಮಗ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಪಿಜಿ ಆರ್ ಸಿಂದ್ಯಾ ಸೇರಿದಂತೆ ಜೆಡಿಎಸ್ ನಿಂದ ಹೊರಗಡೆ ಬಂದು ನನಗೆ ಬೆಂಬಲ ಕೊಟ್ಟಿದ್ದಾರೆ ಎಂದು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ ಈ ಸಭೆ ನನ್ನ ರಾಜಕಾರಣದ ಬದುಕಿನಲ್ಲಿ, 1985ರಲ್ಲಿ ಅಂದು ದೇವೆಗೌಡರ ವಿರುದ್ಧ ಚುನಾವಣೆಗೆ ನಿಂತಾಗ ನಡೆದ ಸಭೆಯಂತೆಯೇ ಈ ಸಭೆ ಕೂಡ ಐತಿಹಾಸಿಕವಾಗಿರಲಿದೆ ಎಂದು ನಾನು ನಂಬಿದ್ದೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಾ. ಇದು ಒಂದು ಐತಿಹಾಸಿಕ ದಿನ. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಾನು ನಿಮ್ ಹಳ್ಳಿಗಳಿಗೆ ಬರಲು ಆಗಲಿಲ್ಲ. ಕಳೆದ 4 ವರ್ಷಗಳಿಂದ ನಿಮ್ಮ ಹತ್ತಿರ ಬರಲು ಆಗಲಿಲ್ಲ. ಆದರೆ ನನ್ನ ಗುರುತಿಸಿದ್ದೀರಾ. ಇಡೀ ದೇಶದಲ್ಲಿ ಕನಪುರವೆಂಬ ಕ್ಷೇತ್ರವಿದೆ. ಅಲ್ಲಿ ಡಿಕೆಶಿ ಎಂಬ ಶಾಸಕನಿದ್ದಾನೆ. ಒಬ್ಬ ಹೋರಾಟಗಾರ. ಒಬ್ಬ ಛಲಗಾರ ಎಂದು ಗುರುತಿಸುವಂತೆ ಮಾಡಿದ್ದೀರಿ.
ಅಂಬೇಡ್ಕರ್ ಒಂದು ಮಾತು ಹೇಳಿದ್ದಾರೆ ನೀ ಹೋರಾಟ ಮಾಡದಿದ್ದರೂ ಚಿಂತೆ ಇಲ್ಲ. ಆದರೆ ನೀ ಮಾರಾಟ ಆಗಬೇಡ ಎಂದು. ಹಾಗೇಯೇ ನನಗೆ ನಂಬಿಕೆ ಏನಂದರೆ ಹೋರಾಟ ಮಾಡುವವನು ಗೆದ್ದೇ ಗೆಲ್ಲುತ್ತಾನೆ ಎಂದು. ಏಕೆಂದರೆ ಹೋರಾಟ ಮಾಡುವವನಿಗೆ ಸೋಲಿನ ಭಯವಿರುವುದಿಲ್ಲ.
ನೀವು ಕೊಟ್ಟ ಶಕ್ತಿ ಆಶೀರ್ವಾದದಿಂದ ಇಡೀ ರಾಜ್ಯ ನನ್ನನ್ನು ಗುರುತಿಸುತ್ತಿದೆ.
ಮೇಕೆ ದಾಟು ಪಾದಯಾತ್ರೆಯಲ್ಲಿ ಕನಕಪುರ ಜನತೆ ಕೊಟ್ಟ ಸ್ವಾಗತವನ್ನು, ಗೌರವನ್ನು ಎಲ್ಲರೂ ಸ್ಮರಿಸುತ್ತಾರೆ. ಅದಕ್ಕೆ ನಾನು ನಿಮಗೆ ಕೋಟಿ ನಮನ ಸಲ್ಲಿಸುತ್ತೇನೆ. ನನ್ನ ಮೇಲೆ ನಿಮಗೆ ಒಂದು ನಂಬಿಕೆ ಇದೆ. ಡಿಕೆಶಿ ಯಾರಿಗೂ ತೊಂದರೆ ಕೊಟ್ಟಿಲ್ಲ. ಧರ್ಮ ಮಾಡಿಲ್ಲ, ಜಾತಿ ಮಾಡಿಲ್ಲ. ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಹೋಗಿದ್ದೇನೆ. ಇದು ಕನಕಪುರಕ್ಕೆ ಮಾತ್ರ ಹೇಳುತ್ತಿಲ್ಲ ಇಡೀ ಕರ್ನಾಟಕಕ್ಕೆ ಹೇಳುತ್ತಿದ್ದೇನೆ.
ಬಿಜೆಪಿಯಿಂದ ಸಿಎಂ ಬೊಮ್ಮಾಯಿ, ಜೆಡಿಎಸ್ ನಿಂದ ಕುಮಾರಣ್ಣ ಬಂದು ಭಾಷಣ ಮಾಡಿ ಹೋಗಿದ್ದಾರೆ. ಬಹಳ ಸಂತೋಷ. ನಾನು ಅವರ ವಿರುದ್ಧ ಯುದ್ಧ ಮಾಡುತ್ತಿಲ್ಲ. ನಾನು ಈ ರಾಜ್ಯದ ಜನರ ಹೃದಯ ಗೆಲ್ಲಲು ಹೊರಟಿದ್ದೇನೆ. ಅಧಿಕಾರ ಸಿಕ್ಕಿದ ಸಮಯದಲ್ಲಿ ತಾನು ಏನು ಮಾಡುತ್ತೇನೆ ಎಂಬುದು ಮುಖ್ಯವಾಗುತ್ತದೆ. ಎಲ್ಲರಿಗೂ ಅಧಿಕಾರ ಬರುತ್ತದೆ.
ವಿದ್ಯುತ್ ಮಂತ್ರಿಯಾದೆ. ಪ್ರತಿಯೊಬ್ಬರಿಗೂಂದು ಟ್ರಾನ್ಸಫ್ಮರ್ ಹಾಕಿಸಿದೆ. ಇದು ಕನಕಪುರ ತಾಲೂಕು ಬಿಟ್ಟರೆ ಬೇರೆ ಎಲ್ಲೂ ಇರಲಿಲ್ಲ. ಕ್ಷೇತ್ರದ ನೀರಾವರಿ ಯೋಜನೆ ಏನು ಮಾಡಿದ್ದೇವೆ ಗೊತ್ತಿದೆ. ಕೆರೆ ತುಂಬಿಸುವ ಯೋಜನೆ, ಶುದ್ಧ ಕುಡಿಯುವ ನೀರು ಯೋಜನೆ. ಇಡೀ ರಾಜ್ಯಕ್ಕೆ ಹೊಯ್ತು. ಮೆಡಿಕಲ್ ಕಾಲೇಜು ಆಗಬೇಕು ಹೊರಾಟ ಮಾಡಿದೆ. ಮಂಜೂರಾಗಿತ್ತು ಬಿಜೆಪಿ ಬಂದು ಅದನ್ನು ತಗೆದು ಹಾಕಿದ್ರು. ಕಾರ್ಯಕರ್ತ ಓರ್ವ ಅಶೋಕ್ ಅವರನ್ನು ಮೆಡಿಕಲ್ ಕಾಲೇಜು ತೆಗೆದು ಹಾಕಿದ ಬಗ್ಗೆ ಕೇಳಿದನಂತೆ. ಅಶೋಕ್ ಏನೆಂದು ಉತ್ತರ ಕೊಡ್ತಾರೆ?
ರೈತರಿಗೆ ನೀರಿನ ಸೌಲಭ್ಯ ಇಲ್ಲ. ಬೆಳೆದ ಬೆಳೆಗೆ ಬೆಲೆ ಇಲ್ಲ. ಅವರ ಸಮಸ್ಯೆ ಬಗೆಹರಿಸಬೇಕು. ಮೇಕೆದಾಟು ಯೋಜನೆ ಗೆ ಹೋರಾಟ ಮಾಡಿದ್ವಿ. ಮುಖ್ಯಮಂತ್ರಿ ಒಂದು ಸಾವಿರ ಕೊಟ್ಟರು. ಆದ್ರೆ ಇದುವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ನಾವು ಬಂದ್ರೆ ಮೇಕೆ ದಾಟು ಯೋಜನೆ ಮಾಡ್ತೀವಿ ಎಂದು ಡಿಕೆಶಿ ಘೋಷಿಸಿದ್ದಾರೆ.
ಬಿಜೆಪಿ ಸರಕಾರ ಮೆಡಿಕಲ್ ಕಾಲೇಜನ್ನ ಕಿತ್ತುಕೊಂಡು ಬಿಡ್ತು. ಸರ್ಕಾರ ಕೋವಿಡ್ ಸಂದರ್ಭದಲ್ಲಿ ಲಂಚ ಹೊಡೀತು. ಕೋವಿಡ್ ಸಂದರ್ಭದಲ್ಲಿ ಸತ್ತವರಿಗೆ ಹಣ ನೀಡಲಿಲ್ಲ. ಕೋವಿಡ್ ನಿಂದ ಸುರೇಶ್ ಅಂಗಡಿ ನವದೆಹಲಿಯಲ್ಲಿ ಮೃತಪಟ್ಟರು. ಆದ್ರೆ ಪಾಪ ಅವರ ಮೃತದೇಹವನ್ನ ಬೆಳಗಾವಿಗೆ ತರಲಿಲ್ಲ. ಆದ್ರೆ ಕನಕಪುರದಲ್ಲಿ ಡಿಕೆ ಸುರೇಶ್ ಪಿಪಿಇ ಕಿಟ್ ಹಾಕಿಕೊಂಡು ಅಂತ್ಯಸಂಸ್ಕಾರ ಮಾಡಿದ್ರು. ನೀವು ಕೊಟ್ಟ ಶಕ್ತಿಯಿಂದ ಕೋವಿಡ್ ಸಂದರ್ಭದಲ್ಲಿ ನಾವು ಸಹಾಯ ಮಾಡಿದ್ದೇವೆ. ಕ್ಷೇತ್ರದಲ್ಲಿ 50 ಕೋಟಿ ವೆಚ್ಚದ ತಾಯಿ ಮಗು ಆಸ್ಪತ್ರೆ ನಿರ್ಮಾಣ ಮಾಡ್ತಿದ್ದೇವೆ. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಮಾಡಬೇಕಿದೆ.
ರಾಜ್ಯದ ಜನತೆ ನಿಮ್ಮ ತಿರ್ಪು ನೋಡುತ್ತಿದ್ದಾರೆ. ಎಷ್ಟು ಅಂತರದಿಂದ ಗೆಲ್ಲಿಸುತ್ತಾರೆ ಅಂತ ನೋಡುತ್ತಿದ್ದಾರೆ. ಕ್ಷೇತ್ರದ ಮಗ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಪಿಜಿ ಆರ್ ಸಿಂದ್ಯಾ ಸೇರಿದಂತೆ ಜೆಡಿಎಸ್ ನಿಂದ ಹೊರಗಡೆ ಬಂದು ನನಗೆ ಬೆಂಬಲ ಕೊಟ್ಟಿದ್ದಾರೆ. 10 ನೇ ತಾರೀಖು ರಾಜ್ಯದ ಭವಿಷ್ಯವನ್ನ ಬದಲಾಯಿಸುವ ದಿನ. ಇಡೀ ದೇಶಕ್ಕೆ ಒಂದು ಸಂದೇಶವನ್ನ ಕೊಡಬೇಕಿದೆ.
ಬಿಜೆಪಿಯವರು ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಯಾರ ಬಳಿಯಾದ್ರು ಹಣ ಇಸ್ಕೊಂಡಿದ್ದೀನಾ? ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದೇನೆ. ನನ್ನನ್ನು ಜೈಲಿಗೆ ಹಾಕಿದ್ರು, ಇಡಿ ಕರೆದುಕೊಂಡು ಹೋದ್ರು. ಕೇಸ್ ಹಾಕಿದ್ರು. ಆಗ ನೀವು ಕೊಟ್ಟ ಬೆಂಬಲ ಹರಿಕೆ ಎಲ್ಲವೂ ನನಗೆ ಶಕ್ತಿ ತುಂಬಿದೆ. ಬಂಡೆ ಯಾರು ಕನಕಪುರದ ಜನರು. ಏನು ಶಕ್ತಿ ಅನ್ನೋದು ಮೋದಿ ಕುಮಾರಸ್ವಾಮಿಗೆ ತೋರಿಸಬೇಕು.
ಕಾಂಗ್ರೆಸ್‌ನಿಂದ ಹೋಮ-ಹವನ: ಬಿಜೆಪಿ ಸರ್ಕಾರ ತೊಲಗಲೆಂದು ದೇವರ ಮೊರೆ
5 ಕಾಂಗ್ರೆಸ್ ಗ್ಯಾರಂಟಿ ತಗೆದುಕೊಂಡು ಬಂದಿದ್ದೇನೆ. ಸರ್ಕಾರದ ಬಂದ ತಕ್ಷಣ ಮೊದಲ ತಿಂಗಳಿಂದಲ್ಲೇ ಕೊಡ್ತೀವಿ. ಇದನ್ನ ಬೊಮ್ಮಾಯಿ ಕೊಟ್ಟಿದ್ದಾರಾ? ಅಶೋಕ್ ಕೊಟ್ಟಿದ್ದಾರಾ? ಕುಮಾರಸ್ವಾಮಿ ಕೊಟ್ಟಿದ್ದಾರಾ? ಇದನ್ನ ಕೊಟ್ಟಿದ್ದು ಯಾರು ಯಾರು ನಿಮ್ ಕ್ಷೇತ್ರದ ಮಗ. ದಳ ಬಿಜೆಪಿಯಂತ ಯಾರು ಒಡಾಡುತ್ತಿದ್ದಾರೋ ಅವರ ಬಳಿ ಮನವಿ ಮಾಡಿಕೊಳ್ಳಿ. ಇದು ಸ್ವಾಭಿಮಾನ. ನನ್ನ ಕ್ರಮ ಸಂಖ್ಯೆ 5ಕ್ಕೆ ಮತ ಹಾಕಿ ಎಂದು ಡಿಕೆಶಿ ಮತಯಾಚಿಸಿದರು.
ಬೇಳೆ ಬೇಯಿಸಿಕೊಳ್ಳುವ ಜೆಡಿಎಸ್‌ಗೆ ಮತ ಹಾಕಬೇಡಿ: ಕ್ಷೇತ್ರದ ಅಭಿವೃದ್ಧಿ ಆಗೊಲ್ಲ!
ನಂಗೆ ಚನ್ನಪಟ್ಟಣದ ಯುವಕ ಒಂದು ವಾಟ್ಸ್ ಅಪ್ ಮಾಡಿದ್ದ. ಕಮಲ ಕೆರೆಯಲ್ಲಿದ್ರೆ ಚಂದ. ತೆನೆ ಹೊಲದಲ್ಲಿ ಇದ್ರೆ ಚಂದ. ದಾನ ಧರ್ಮದ ಕೈ ಅಧಿಕಾರದಲ್ಲಿದ್ರೆ ಚಂದ. ಕ್ಷೇತ್ರ ಜನ ಕೊಡುವ ತೀರ್ಪು ರಾಷ್ಟ್ರಕ್ಕೆ ಒಂದು ಸಂದೇಶ ಎಂದು ಕ್ಷೇತ್ರದ ಮತದಾರರಲ್ಲಿ ಮತಯಾಚನೆ ನಡೆಸಿ ತಮ್ಮ ಚುನಾವಣಾ ಭಾಷಣಕ್ಕೆ ಡಿಕೆಶಿ ಮುಕ್ತಾಯ ಹಾಡಿದರು.