ಬೇಳೆ ಬೇಯಿಸಿಕೊಳ್ಳುವ ಜೆಡಿಎಸ್‌ಗೆ ಮತ ಹಾಕಬೇಡಿ: ಕ್ಷೇತ್ರದ ಅಭಿವೃದ್ಧಿ ಆಗೊಲ್ಲ!

By Sathish Kumar KH  |  First Published May 8, 2023, 6:09 PM IST

ಜೆಡಿಎಸ್‌ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ. ಯಾವ ವರ್ಷ ಬಹುಮತ ಬರದಿದ್ದರೆ ನಮ್ಮ ಬೇಳೆ ಬೇಯಿಸಿಕೊಳ್ಳಲು ಕಾಯ್ತಾರೆ. ಜೆಡಿಎಸ್‌ಗೆ ಮತ ಕೊಟ್ರೆ ಸಮ್ಮಿಶ್ರ ಸರ್ಕಾರ ಬರುತ್ತದೆ. 


ಮೈಸೂರು (ಮೇ 08): ಜೆಡಿಎಸ್‌ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ. ಯಾವ ವರ್ಷ ಬಹುಮತ ಬರದಿದ್ದರೆ ನಮ್ಮ ಬೇಳೆ ಬೇಯಿಸಿಕೊಳ್ಳಲು ಕಾಯ್ತಾರೆ. ಜೆಡಿಎಸ್‌ಗೆ ಮತ ಕೊಟ್ರೆ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದೇಗೌಡ ಪರ ಪ್ರಚಾರ ಮಾಡಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಯ ದಿನದ ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದೇಗೌಡ ಪರವಾಗಿ ಪ್ರಚಾರ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಜೆಡಿಎಸ್‌ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ. ಯಾವ ವರ್ಷ ಬಹುಮತ ಬರದಿದ್ದರೆ ನಮ್ಮ ಬೇಳೆ ಬೇಯಿಸಿಕೊಳ್ಳಲು ಕಾಯ್ತಾರೆ. ಜೆಡಿಎಸ್‌ಗೆ ಮತ ಕೊಟ್ರೆ ಸಮ್ಮಿಶ್ರ ಸರ್ಕಾರ ಬರುತ್ತದೆ. ಈ ಕ್ಷೇತ್ರದಲ್ಲಿ ಎಲ್ಲೂ ಅಭಿವೃದ್ಧಿ ಆಗಿಲ್ಲ. ನಾನು ಅಧಿಕಾರದಲ್ಲಿ ಇದ್ದ ಕಾರ್ಯಕ್ರಮವೇ ಇವೆ ಎಂದು ಟೀಕೆ ಮಾಡಿದರು.

Tap to resize

Latest Videos

ಸಿದ್ದರಾಮಯ್ಯನ ಬ್ರಹ್ಮಾಂಡ ಭ್ರಷ್ಟಾಚಾರ ಬಿಚ್ಚಿಟ್ಟ ಬಿಜೆಪಿ! ಮುಡಾದಲ್ಲಿ ಭಾರಿ ಅವ್ಯವಹಾರ!

ಜೆಡಿಎಸ್‌ ಅಭ್ಯರ್ಥಿ ಏನೂ ಅಭಿವೃದ್ಧಿ ಮಾಡಿಲ್ಲ:  ಈಗಾಗಲೇ ಜೆಡಿಎಸ್‌ ನಿಂದ ಗೆದ್ದ ಅಭ್ಯರ್ಥಿ ಏನೂ ಮಾಡಿಲ್ಲ. ಪರಿಶಿಷ್ಟ ಜಾತಿ, ಸಮುದಾಯಕ್ಕೆ ಸಿಗುತ್ತಿರುವ ಸೌಲಭ್ಯಕ್ಕೆ ನಾವು ತಂದ ಕಾನೂನು ಕಾರಣ. ನಾನಿದ್ದಾಗ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ 5 ಸಾವಿರ ಮನೆ ಕೊಟ್ಟಿದ್ದೆ. ಈಗ ಒಂದೂ ಮನೆಯನ್ನು ಕೊಟ್ಟಿಲ್ಲ. ಕುಮಾರಸ್ವಾಮಿ ಅಧಿಕಾರ ಇದ್ದಾಗ ಏನೂ ಕೊಟ್ಟಿಲ್ಲ. ಈಗ ಪಂಚರತ್ನ ಯಾತ್ರೆ ಮಾಡಿಕೊಂಡು ಅಧಿಕಾರದ ಕನಸು ಕಾಣುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಸ್ಥಾಪಿಸುವ ಕನಸು ಈಡೇರಲು ಸಾಧ್ಯವಿಲ್ಲ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟವಾಗಿದೆ: ಉದ್ಭೂರು ಮೈಸೂರು ತಾಲೂಕಿನಲ್ಲಿ ದೊಡ್ಡ ಗ್ರಾಮವಾಗಿದೆ. ಇಲ್ಲಿ ಬಹುಮತ ಬಂದವರು ಗೆಲ್ಲುತ್ತಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 8 ಬಾರಿ ಸ್ಪರ್ಧಿಸಿ, 5 ಬಾರಿ ಗೆದ್ದಿದ್ದೇನೆ. ನಗರಕ್ಕೆ ಹತ್ತಿರ ಇರೋದ್ರಿಂದ ಇಲ್ಲಿನ ಮತದಾರರು ಪ್ರಬುದ್ಧರಿದ್ದೀರಿ. ಯಾವ ಪಕ್ಷಕ್ಕೆ ಮತ ಕೊಟ್ರೆ ಬಡವರ, ಮಹಿಳೆಯರ ಉದ್ದಾರ ಆಗುತ್ತಾ ಯೋಚಿಸಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ವರ್ಗದ ಬಡವರಿಗಾಗಿ ಅನೇಕ ಕಾರ್ಯಕ್ರಮ ನೀಡಿದ್ದೆನು. ಅದರಿಂದ ಬಡವರಿಗೆ ಅನುಕೂಲ ಆಗುತ್ತಿತ್ತು. ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟ ಆಗಿದೆ. ಬಡವರಿಗೆ ಸಹಾಯ ಮಾಡಲು 5 ಗ್ಯಾರಂಟಿ ಕೊಟ್ಟಿದ್ದೇವೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿ ಎಂದು ಹೇಳಿದರು.

ಸಿದ್ದೇಗೌಡ ಗೆದ್ದರೆ ನಾನೇ ಗೆದ್ದಂತೆ: ನಾನು ಮಾವಿನಹಳ್ಳಿ ಸಿದ್ದೇಗೌಡನನ್ನು ಅಭ್ಯರ್ಥಿ ಮಾಡಿದ್ದೇನೆ. ಸಿದ್ದೇಗೌಡ ಗೆದ್ದರೆ ನಾನೇ ಗೆದ್ದಂತೆ. ಹಸ್ತಕ್ಕೆ ಮತ ಹಾಕಿ ಆತನನ್ನು ಗೆಲ್ಲಿಸಿ ಕಳುಹೊಸಿಕೊಡಿ ಎಂದು ಮತಯಾಚನೆ ಮಾಡಿದರು. ನಂತರ ಮೈಸೂರು ತಾಲೂಕು ಉದ್ಬೂರಿನಲ್ಲಿ ರ್ಯಾಲಿ ಮಾಡಿದರು. ಸಿದ್ದರಾಮಯ್ಯ ಕಾರಿನ ಬಾಗಿಲ ಮೇಲೆ ನಿಂತು ಮತ ಪ್ರಚಾರ ನಡೆಸಿದರು. ಉದ್ಬೂರಿನಲ್ಲಿ ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ ನೀಡಿದರು. ಕ್ರೇನ್‌ ಮೂಲಕ ಸೇಬು, ಕಿತ್ತಳೆ ಮತ್ತು ಮೋಸಂಬಿ ಹಣ್ಣುಗಳ ಮಿಶ್ರಿತ ಹಾರವನ್ನು ಹಾಕಿ ಸ್ವಾಗತಿಸಿದರು.

ಒಂದು ಲಿಂಕ್‌ ಕ್ಲಿಕ್‌ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ, ಮತಗಟ್ಟೆಗೆ ಹೋಗಿ..!

ನಿಮ್ಮ ಪಾದಕ್ಕೆ ನಮಸ್ಕಾರ ಮಾಡುವೆ ಮತ ನೀಡಿ ಗೆಲ್ಲಿಸಿ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿದ್ದೇಗೌಡ ಮಾತನಾಡಿ, ಒಬ್ಬ ರೈತನ ಮಗನಿಗೆ ಟಿಕೇಟ್ ಸಿಗಲು‌ ಸಿದ್ದರಾಮಯ್ಯ ಕಾರಣ. ನಿಮ್ಮ ಮನೆಯ ಮಗ ಮಾವಿನಹಳ್ಳಿ ಸಿದ್ದೇಗೌಡ, ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕಾಂಗ್ರೆಸ್‌ನ ಹಸ್ತದ ಗುರುತಿಗೆ ಮತ ಹಾಕಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡುವೆ ಮತ ನೀಡಿ ಗೆಲ್ಲಿಸಿ ಎಂದು ಉದ್ಭೂರು ಗ್ರಾಮದಲ್ಲಿ ಅಭ್ಯರ್ಥಿ ಸಿದ್ದೇಗೌಡ ಮನವಿ ಮಾಡಿದರು. 

click me!