ಉಡುಪಿಯಲ್ಲಿ ಕಾಂಗ್ರೆಸ್ -ಎಸ್‌ಡಿಪಿಐ ಬೆಂಬಲ ವದಂತಿ, ಫೊಟೋ ವೈರಲ್ ಬಳಿಕ ಪಕ್ಷಗಳು ಸೈಲೆಂಟ್

By Gowthami K  |  First Published May 8, 2023, 5:22 PM IST

ಉಡುಪಿ ಕಾಂಗ್ರೆಸ್ ಗೆ ಎಸ್ ಡಿಪಿಐ ಗೆ ಬಹಿರಂಗ ಸಹಕಾರ ಎಂದು ಕಳೆದ ಎರಡು ದಿನಗಳಿಂದ ಸುದ್ದಿ ವೈರಲ್ ಆಗುತ್ತಿದೆ. ಆದರೆ ಈ ವಿಚಾರ ದ ಕುರಿತಾಗಿ ಇದುವರೆಗೂ ಎರಡು ಪಕ್ಷ ಗಳು ಅಧಿಕೃತವಾದ ಹೇಳಿಕೆ ಬಿಡುಗಡೆ ಮಾಡಿಲ್ಲ.


ಉಡುಪಿ  (ಮೇ.8): ಉಡುಪಿ ಕಾಂಗ್ರೆಸ್ ಗೆ ಎಸ್ ಡಿಪಿಐ ಗೆ ಬಹಿರಂಗ ಸಹಕಾರ ಎಂದು ಕಳೆದ ಎರಡು ದಿನಗಳಿಂದ ಸುದ್ದಿ ವೈರಲ್ ಆಗುತ್ತಿದೆ. ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಮಸೀದಿಗೆ ಭೇಟಿ ನೀಡಿದ ಬೆನ್ನಲ್ಲೆ ಈ ಸುದ್ದಿ ವೈರಲ್ ಆಗುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಗೆ ಮಣೆ ಹಾಕಿದೆ. ಮೊಗವೀರ ಸಮುದಾಯದ ಪ್ರಸಾದ್ ರಾಜ್ ಕಾಂಚನ್ ಕಾಂಗ್ರೆಸ್ ಅಭ್ಯರ್ಥಿ. ಉದ್ಯಮಿಯಾಗಿರುವ ಪ್ರಸಾದ್ ರಾಜ್ ಕಾಂಚನ್ ಅಭ್ಯರ್ಥಿ ಯಾಗಿ ಆಯ್ಕೆಯಾದಾಗ ಉಡುಪಿ ಕಾಂಗ್ರೆಸ್ ನಲ್ಲಿಯೇ ಸಾಕಷ್ಟು ವಿರೋಧ ಕಂಡು ಬಂದಿತ್ತು. 

ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಂಡಾಯ, ವಿರೋಧ ಶಾಂತವಾಗಿದೆ. ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಉಡುಪಿಯ ಮಸೀದಿಗೆ ಭೇಟಿ ನೀಡಿದ ಸಂದರ್ಭ ತೆಗೆದ ಫೋಟೊ ನಿಂದಾಗಿ ಗಾಳಿ ಸುದ್ದಿ ಜಿಲ್ಲೆಯಲ್ಲಿ ಜೀವ ತಳೆದಿದೆ. ಪ್ರಚಾರದ ಹಿನ್ನಲೆಯಲ್ಲಿ ಶುಕ್ರವಾರದ ನಮಾಜ್ ಸಂದರ್ಭದಲ್ಲಿ ಮತಯಾಚನೆಯಾಗಿ ಪ್ರಸಾದ್ ರಾಜ್ ಕಾಂಚನ್ ತೆರೆಳಿದ್ದರು.

Tap to resize

Latest Videos

undefined

ಒಂದು ಲಿಂಕ್‌ ಕ್ಲಿಕ್‌ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ, ಮತಗಟ್ಟೆಗೆ ಹೋಗಿ..!

ಈ ಸಂದರ್ಭ ಮಸೀದಿಯ ಧರ್ಮ ಗುರುಗಳ ಜೊತೆ ನಿಂತು ಮಾತುಕತೆ ನಡೆಸಿದ್ದ ಪೋಟೊ ತಮ್ಮ ಪ್ರಚಾರ ಸಮಿತಿಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಇದೇ ಪೋಟೊ ವಿಚಾರವಾಗಿ ಕಾಂಗ್ರೆಸ್ ಅಭ್ಯರ್ಥಿ ಗೆ ಎಸ್ ಡಿಪಿಐ ಸಹಕಾರ ನೀಡಲು ಒಪ್ಪಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರಸಾದ್ ರಾಜ್ ಕಾಂಚನ್ ಗೆ ಸಹಕಾರ ನೀಡುವ ಸಲುವಾಗಿಯೇ ಎಸ್ ಡಿಪಿಐ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿಲ್ಲ‌ ಎನ್ನುವ ವಿಚಾರಗಳು ಕೂಡ ಸದ್ಯ ವೈರಲ್ ಆಗುತ್ತಿದೆ.

ಬಿಜೆಪಿ ಸೋತರೆ ಕೇಂದ್ರ ಅನುದಾನ ಸ್ಥಗಿತ, ಅಮಿತ್ ಶಾ ಮಾತಿಗೆ ಕಾಂಗ್ರೆಸ್ ಕಿಡಿ

ಆದರೆ ಈ ವಿಚಾರ ದ ಕುರಿತಾಗಿ ಇದುವರೆಗೂ ಎರಡು ಪಕ್ಷ ಗಳು ಅಧಿಕೃತವಾದ ಹೇಳಿಕೆ ಬಿಡುಗಡೆ ಮಾಡದೆ ಇರುವುದು ಕೂಡು ಗಾಳಿ ಸುದ್ದಿ ನಿಜ ಎನ್ನುವ ಮಟ್ಟಿಗೆ ಪ್ರಚಾರ ಪಡೆಯುತ್ತಿದೆ. ಎಸ್ ಡಿಪಿಐ ಈ ಹಿಂದೆ ಕಾಪು ಮತ್ತು ಉಡುಪಿಯಲ್ಲಿ ಅಭ್ಯರ್ಥಿಗಳನ್ನು ಹಾಕುವ ಹೇಳಿಕೆ ನೀಡಿತ್ತು.‌ ಆದರೆ ಕಾಪುವಿನಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಇನ್ನು ಎರಡು ಪಕ್ಷದವರು ಪ್ರತಿಕ್ರಿಯೆ ನೀಡುವವರೆಗೂ ಸುದ್ದಿ ಕಾಳ್ಗಿಚ್ಚಿನಂತೆ ವೈರಲ್ ಆಗುದಂತು ಸತ್ಯ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!