karnataka election results 2023: ಗೂಗಲ್‌ ಸರ್ಚ್‌ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಟಾಪ್‌ ಟ್ರೆಂಡಿಂಗ್‌

By Sathish Kumar KH  |  First Published May 13, 2023, 10:51 AM IST

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಮುನ್ಸೂಚನೆಯಿದ್ದು, ಸಿಎಂ ಅಭ್ಯರ್ಥಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಹೆಸರುಗಳು ಗೂಗಲ್‌ ಸರ್ಚ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಪಡೆದುಕೊಂಡಿವೆ.


ಬೆಂಗಳೂರು (ಮೇ 13): ರಾಜ್ಯ ವಿಧಾನಸಭಾ ಚುನಾವಣೆ 2023ರ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ 113 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಾಗೂ ಜಾಗತಿಕ ಪಟ್ಟದಲ್ಲಿ ಗೂಗಲ್‌ ಸರ್ಚ್‌ನಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಹೇಳಲಾಗುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೆಸರನ್ನು ಸರ್ಚ್‌ ಮಾಡಲಾಗುತ್ತಿದೆ.

ಜಾಗತಿಕವಾಗಿ ಎಲ್ಲ ಆರ್ಥಿಕವಾಗಿ ಪ್ರಭಲವಾಗಿರುವ ಹಾಗೂ ಮುಂಚೂಣಿ ರಾಷ್ಟ್ರಗಳಿಂದ ಕರ್ನಾಟಕದಲ್ಲಿ ಭಾರಿ ಪ್ರಮಾಣದ ಹೂಡಿಕೆಯಿದೆ. ಜಾಗತಿಕ ಮಟ್ಟದಲ್ಲಿನ ವಿವಿಧ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಶಾಖೆಗಳನ್ನು ಹೊಂದಿವೆ. ಹೀಗಾಗಿ, ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ಹುಡುಕುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನು ಇಂದು ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯಗಳು ನಡೆಯುತ್ತಿದ್ದು, ಕಾಂಗ್ರೆಸ್‌ 110ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ದೊಡ್ಡ ಕ್ಷೇತ್ರವಾಗಿ ಮುನ್ನಡೆ ಸಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಗಳೆಂದೇ ಹೇಳಲಾಗುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೆಸರು ಹಾಗೂ ಫೋಟೋಗಳನ್ನು ಹುಡುಕುವವರ ಸಂಖ್ಯೆ ಹೆಚ್ಚಾಗಿದೆ.

Tap to resize

Latest Videos

Karnataka Election 2023 Live: ನಾಳೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ...

ಜಾಗತಿಕವಾಗಿ ಇಂದು ಗೂಗಲ್‌ ಸರ್ಚ್‌ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶ (karnataka assembly election results 2023 live news updates)ವನ್ನು ಗೂಗಲ್‌ ಸರ್ಚ್‌ನಲ್ಲಿ ಟಾಪ್‌ ಟ್ರೆಂಡಿಂಗ್: ವೀಕ್ಷಣೆ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಇನ್ನು ಕಳೆದ ಮೂರು ದಿನಗಳ ಹಿಂದೆ ನಡೆದ ಎಕ್ಸಿಟ್‌ ಪೋಲ್‌ ಸಮೀಕ್ಷೆಯಲ್ಲಿಯೂ ಕೂಡ ಕಾಂಗ್ರೆಸ್‌ ಬಹುಮತ ಗಳಿಸಲಿದೆ ಎಂದು ವರದಿಗಳು ಬಂದಿವೆ. ಜೊತೆಗೆ, ಇಂದಿನ ಮತ ಎಣಿಕೆ ಹಾಗೂ ಫಲಿತಾಂಶಗಳಲ್ಲಿಯೂ ಕೂಡ ಕಾಂಗ್ರೆಸ್‌ ಬಹುಮತ ಗಳಿಸುವಷ್ಟು (ಮ್ಯಾಜಿಕ್‌ ಸಂಖ್ಯೆ 113 ಸ್ಥಾನ) 110ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವತ್ತ ದಾಪುಗಾಲಿಟ್ಟಿದೆ. ಹೀಗಾಗಿ, ಗೂಗಲ್‌ ಸರ್ಚ್‌ನಲ್ಲಿ ಯಾರಾಗಲಿದ್ದಾರೆ ಕರ್ನಾಟಕದ ಮುಂದಿನ ಕಾಂಗ್ರೆಸ್‌ ಮುಖ್ಯಮಂತ್ರಿ ಎಂಬ ಸರ್ಚ್‌ ಮಾಡಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಹೆಸರುಗಳು ಸರ್ಚ್‌ ಆಗುತ್ತಿವೆ. ಆದ್ದರಿಂದ ಗೂಗಲ್‌ ಸರ್ಚ್‌ನಲ್ಲಿ ಇವರೀರ್ವರ ಹೆಸರುಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ.

ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ:  ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನು ಬಿಜೆಪಿಯ ವಿ ಸೋಮಣ್ಣ, ರಾಜ್ಯ ಸಚಿವ ಮತ್ತು ಜೆಡಿ (ಎಸ್) ನ ಭಾರತಿ ಶಂಕರ್ ಇವರ ವಿರುದ್ಧ ಕಣಕ್ಕಿಳಿದಿದ್ದರೂ ಅವರನ್ನು ಒಂದು ಸುತ್ತಿನ ಮತ ಎಣಿಕೆಯಲ್ಲಿಯೂ ಹಿಂದಕ್ಕೆ ತಳ್ಳಲಾಗಿಲ್ಲ. 2008ರಿಂದಲೂ ಈ ಕ್ಷೇತ್ರದಲ್ಲಿ ಗೆಲುವಿನ ಓಟ ಮುಂದುವರಿದ್ದಾರೆ. ಆದರೆ, ಕಳೆದ 2018ರಲ್ಲಿ ವರುಣಾ ವಿಧಾನಸಭಾ ಕ್ಷೇತ್ರ ಬಿಟ್ಟು ಬಾದಾಮಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 

karnataka election results 2023: ಮೂರೂ ಪಕ್ಷಗಳಿಂದ ಪ್ಲ್ಯಾನ್‌ 'ಎ', 'ಬಿ' ಸಿದ್ಧ

ಶೇ.60 ಮತಗಳನ್ನು ಪಡೆಯುತ್ತೇವೆ: 
ಮತದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶೇ.60ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇನೆ. ಕಾಂಗ್ರೆಸ್ ಸ್ವಂತ ಬಲದಿಂದ ಸರ್ಕಾರ ರಚಿಸುತ್ತದೆ. ನಾನು ನಿವೃತ್ತಿಯಾಗುವುದಿಲ್ಲ ಆದರೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆಯಾಗಿದೆ.
- ಸಿದ್ದರಾಮಯ್ಯ, ಮಾಜಿ ಸಿಎಂ

click me!