Bidar Election Result 2023: ಬೀದರ್‌ನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಮಪಾಲು, ಸಮಬಾಳು!

By Govindaraj S  |  First Published May 13, 2023, 3:48 PM IST

ಬೀದರ್‌ ಜಾತಿ, ಮತ, ಪಂಥಗಳನ್ನು ಧಿಕ್ಕರಿಸಿ ಸಮಾನತೆ ಸಾರಿರುವ ಬಸವಾದಿ ಶರಣರ ನಾಡಾಗಿದ್ದರೂ ಇಲ್ಲಿ ಜಾತಿಯದ್ದೇ ಲೆಕ್ಕಾಚಾರ. ಪಕ್ಷ ವರ್ಚಸ್ಸಿಗಿಂತ ವ್ಯಕ್ತಿ ವರ್ಚಸ್ಸಿನದ್ದೇ ವಿಚಾರ. ಒಂದು ಎಸ್ಸಿ ಮೀಸಲು ಸೇರಿ 6 ಕ್ಷೇತ್ರಗಳನ್ನು ಹೊಂದಿದ್ದು, ಮೂರರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ.


ಬೀದರ್‌ (ಮೇ.13): ಬೀದರ್‌ ಜಾತಿ, ಮತ, ಪಂಥಗಳನ್ನು ಧಿಕ್ಕರಿಸಿ ಸಮಾನತೆ ಸಾರಿರುವ ಬಸವಾದಿ ಶರಣರ ನಾಡಾಗಿದ್ದರೂ ಇಲ್ಲಿ ಜಾತಿಯದ್ದೇ ಲೆಕ್ಕಾಚಾರ. ಪಕ್ಷ ವರ್ಚಸ್ಸಿಗಿಂತ ವ್ಯಕ್ತಿ ವರ್ಚಸ್ಸಿನದ್ದೇ ವಿಚಾರ. ಒಂದು ಎಸ್ಸಿ ಮೀಸಲು ಸೇರಿ 6 ಕ್ಷೇತ್ರಗಳನ್ನು ಹೊಂದಿದ್ದು, ಮೂರರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ.

ಬೀದರ್‌ ಕ್ಷೇತ್ರ: ಕಾಂಗ್ರೆಸ್‌ನ ರಹೀಂ ಖಾನ್ ಗೆಲುವು
ಬೀದರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನೇರ ಹಣಾಹಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ವಿರುದ್ಧ ಕಾಂಗ್ರೆಸ್‌ನ ರಹೀಂ ಖಾನ್ 69165 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಕಳೆದ ಚುನಾವಣೆ ನಂತರ ಕ್ಷೇತ್ರದ ಉದ್ದಗಲಕ್ಕೂ ಸರ್ಕಾರಿ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ, ಕೋವಿಡ್‌ನಲ್ಲಿ ಮನೆ ಮಾತಾಗಿದ್ದ ಸೂರ್ಯಕಾಂತ ನಾಗಮಾರಪಳ್ಳಿ ಅಲ್ಪಸಂಖ್ಯಾತರು ಮತ್ತು ಒಬಿಸಿ ಮತದಾರರ ಫೆವರೇಟ್‌ ಆಗಿದ್ದರು. ಆದರೆ ಮತದಾರ ಪ್ರಭುಗಳು ಮತ್ತೆ ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ. 2018 ರಲ್ಲಿ ರಹೀಂ ಖಾನ್ ಅವರು ಕಾಂಗ್ರೆಸ್‌ನಿಂದ 1,39,933 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

Latest Videos

undefined

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಈಶ್ವರ್ ಸಿಂಗ್ ಠಾಕೂರ್ (Eshawar Singh Thakur)-17779
ಕಾಂಗ್ರೆಸ್‌-ರಹೀಂ ಖಾನ್ (Rahim Khan)-69165
ಜೆಡಿಎಸ್-ಸೂರ್ಯಕಾಂತ್ (Suryakanth)-58385    

ಪುರುಷ ಮತದಾರರು-109861
ಮಹಿಳಾ ಮತದಾರರು-104721
ಇತರೆ-26
ಒಟ್ಟು-214608

ಬೀದರ್ ನಗರ (Bidar City Assembly Constituency) ಜಾತಿ ಲೆಕ್ಕಾಚಾರ
ಲಿಂಗಾಯತ    65,000
ಮುಸ್ಲಿಂ    45,000
ಎಸ್ಸಿ 35,000
ಎಸ್ಟಿ 11,000
ಜೈನ    6,000
ಬ್ರಾಹ್ಮಣ    11,000
ಮರಾಠ    10,000
ಇತರೆ    25,000

ಭಾಲ್ಕಿ ಕ್ಷೇತ್ರ (Balki Assembly Constituency): ಕಾಂಗ್ರೆಸ್‌ನ ಈಶ್ವರ ಖಂಡ್ರೆ ಗೆಲುವು
ಭಾಲ್ಕಿ ಕ್ಷೇತ್ರವು ಖಂಡ್ರೆ ಕಾಳಗದ ಕುಟುಂಬ ರಾಜಕಾರಣಕ್ಕೆ ಹೇಳಿ ಮಾಡಿಸಿದ ಕ್ಷೇತ್ರದಲ್ಲಿ ಮತ್ತೆ ಈಶ್ವರ ಖಂಡ್ರೆ 99451 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಈಶ್ವರ ಖಂಡ್ರೆಗೆ ಸೋದರ ಸಂಬಂಧಿ ಬಿಜೆಪಿಯ ಪ್ರಕಾಶ ಖಂಡ್ರೆ ಮತ್ತೊಮ್ಮೆ ಎದುರಾಳಿಯಾಗಿ ಸ್ಫರ್ಧಿಸಿ 71745 ಮತಗಳನ್ನು ಗಳಿಸಿ ಸೋತಿದ್ದಾರೆ. ಇನ್ನು 2018 ರಲ್ಲಿ ಈಶ್ವರ್ ಖಂಡ್ರೆ ಅವರು  ಕಾಂಗ್ರೆಸ್‌ನಿಂದ  1,66,016 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ -ಪ್ರಕಾಶ್ ಖಂಡ್ರೆ (Prakash Khandre)-71745    
ಕಾಂಗ್ರೆಸ್‌-ಈಶ್ವರ ಖಂಡ್ರೆ (Eshwar Khandre)-99451
ಜೆಡಿಎಸ್-ರೌಫ್‌ ಪಟೇಲ್ (Rouf Patel)-636

ಪುರುಷ ಮತದಾರರು-116904
ಮಹಿಳಾ ಮತದಾರರು-105560
ಇತರೆ-8
ಒಟ್ಟು-222472

ಭಾಲ್ಕಿ ಜಾತಿ ಲೆಕ್ಕಾಚಾರ
ಲಿಂಗಾಯತ    65,000
ಮರಾಠ    55,000
ಕುರುಬ-ಗೊಂಡ 25,000
ಎಸ್ಸಿ 40,000
ಮುಸ್ಲಿಂ    27,000
ಇತರೆ    25,000

ಬೀದರ್‌ ದಕ್ಷಿಣ ಕ್ಷೇತ್ರ (Bidar South Assembly Constituency): ಕಾಂಗ್ರೆಸ್‌ನ ಅಶೋಕ್ ಖೇಣಿ ಗೆಲುವು
ಬೀದರ್‌ ಕ್ಷೇತ್ರ ಪುನರ್‌ ವಿಂಗಡನೆ ನಂತರ ಮೊದಲ ಬಾರಿ ರಾಜ್ಯ ಮಕ್ಕಳ ಪಕ್ಷವನ್ನು ಕಾಣುವಂತೆ ಮಾಡಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಖೇಣಿ 44948 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಶೈಲೇಂದ್ರ ಬೆಲ್ದಾಳೆ 44589 ಮತಗಳನ್ನು ಗಳಿಸಿ ಕೆಲವೆ ಮತಗಳ  ಅಂತರದಿಂದ ಸೋತಿದ್ದಾರೆ. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ ಮತ್ತು ಗೊಂಡ ಕುರುಬ ಮತದಾರರದ್ದೇ ಇಲ್ಲಿ ಪ್ರಾಬಲ್ಯವಿದ್ದು, 2018 ರಲ್ಲಿ ಬಂಡೆಪ್ಪ ಕಾಶೆಂಪೂರ್ ಜೆಡಿಎಸ್‌ನಿಂದ 1,37,930  ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಡಾ.ಶೈಲೇಂದ್ರ ಬೆಲ್ದಾಳೆ (Dr Shilendra Belddale)-44589
ಕಾಂಗ್ರೆಸ್‌- ಅಶೋಕ್ ಖೇಣಿ (Ashok Kheni)-44948
ಜೆಡಿಎಸ್-ಬಂಡೆಪ್ಪ ಕಾಶೆಂಪೂರ್ (Bandeppa Kashempur)-28950

ಪುರುಷ ಮತದಾರರು-101920
ಮಹಿಳಾ ಮತದಾರರು-94700
ಇತರೆ-3
ಒಟ್ಟು-196623

ಬೀದರ್ ದಕ್ಷಿಣ ಜಾತಿ ಲೆಕ್ಕಾಚಾರ
ಲಿಂಗಾಯತ    50,000
ಮುಸ್ಲಿಂ    58,000
ಎಸ್ಸಿ 45,000
ಕುರುಬ    20,000
ಕೋಳಿ    18,000
ಇತರೆ    32,000

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಔರಾದ್‌ ಕ್ಷೇತ್ರ (Aurad Assembly Constituency): ಬಿಜೆಪಿಯ ಪ್ರಭು ಚವ್ಹಾಣ್ ಗೆಲುವು
ಔರಾದ್‌ ಎಸ್ಸಿ ಮೀಸಲು ಕ್ಷೇತ್ರ. ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿರುವ ಪ್ರಭು ಚವ್ಹಾಣ್‌ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿ ಡಾ.ಶಿಂಧೆ ಭೀಮಸೇನರಾವ್ ವಿರುದ್ದ 71993 ಮತಗಳನ್ನು ಗಳಿಸುವ ಮೂಲಕ ಮತ್ತೊಮ್ಮೆ ಜಯಭೇರಿ ಬಾರಿಸಿದ್ದಾರೆ. ಇನ್ನು 2018 ರಲ್ಲಿ ಪ್ರಭು ಚವ್ಹಾಣ್ ಬಿಜೆಪಿಯಿಂದ 1,46,445 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಪ್ರಭು ಚವ್ಹಾಣ್ (Prabhu Chuhan)-71993    
ಕಾಂಗ್ರೆಸ್‌-ಡಾ.ಶಿಂಧೆ ಭೀಮಸೇನರಾವ್ (Dr Shindhe Bhimasenarao)-63066
ಜೆಡಿಎಸ್-ಜಯಸಿಂಗ್ ರಾಥೋಡ್ (Jayasingh Rathod)-557    

ಪುರುಷ ಮತದಾರರು-111027
ಮಹಿಳಾ ಮತದಾರರು-102167
ಇತರೆ-0
ಒಟ್ಟು-213194

ಔರಾದ್ ಜಾತಿ ಲೆಕ್ಕಾಚಾರ
ಲಿಂಗಾಯತ    58,000
ಮರಾಠ    45,000
ಎಸ್ಸಿ 56,000
ಎಸ್ಟಿ 10,000
ಲಂಬಾಣಿ    20,000
ಮುಸ್ಲಿಂ    12,000
ಇತರೆ    15,000

ಹುಮನಾಬಾದ್‌ ಕ್ಷೇತ್ರ (Humnabad Assembly Constituency): ಬಿಜೆಪಿಯ ಸಿದ್ದು ಪಾಟೀಲ್ ಗೆಲುವು
ಹುಮನಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದು ಪಾಟೀಲ್, ಕಾಂಗ್ರೆಸ್‌ನ ರಾಜಶೇಖರ ಬಿ.ಪಾಟೀಲ್ ವಿರುದ್ದ 75515 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಹುಮನಾಬಾದ್‌ ಕ್ಷೇತ್ರದಲ್ಲಿ ಜಾತಿ, ಮತ ವಿಭಜನೆಗಿಂತ ಇಲ್ಲಿ ವ್ಯಕ್ತಿ ವರ್ಚಸ್ಸು ಮತದಾರರಿಗೆ ಮುಖ್ಯ. ಕಾಂಗ್ರೆಸ್‌ ಹಾಗೂ ಬಿಜೆಪಿಯೊಂದಿಗೆ ಜೆಡಿಎಸ್‌ ಕೂಡ ಇಲ್ಲಿ ಪ್ರಬಲ. ಹೀಗಾಗಿ ತ್ರಿಕೋನ ಸ್ಪರ್ಧೆ ಇಲ್ಲಿನ ವಿಶೇಷ. ಮೂರು ಬಾರಿ ಶಾಸಕರಾಗಿರುವ ರಾಜಶೇಖರ ಪಾಟೀಲ್‌ ನಾಲ್ಕನೇ ಬಾರಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿದ್ದರು ಶಾಸಕ ಪಾಟೀಲ್‌ ಸಹೋದರ ಸಂಬಂಧಿ ಡಾ.ಸಿದ್ದು ಪಾಟೀಲ್‌ ಬಿಜೆಪಿ ಅಭ್ಯರ್ಥಿ. ಇನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಫೈಝ್‌ ಸಿಎಂ ಇಬ್ರಾಹಿಂ ದಳದಿಂದ ಕಣಕ್ಕಿಳಿದಿದ್ದರು. ಇನ್ನು 2018 ರಲ್ಲಿ ರಾಜಶೇಖರ್ ಪಾಟೀಲ್ ಕಾಂಗ್ರೆಸ್‌ನಿಂದ ಮತಗಳನ್ನು 1,58,162 ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಸಿದ್ದು ಪಾಟೀಲ್ (Siddu Patil)-75515
ಕಾಂಗ್ರೆಸ್‌-ರಾಜಶೇಖರ ಬಿ.ಪಾಟೀಲ್ (Rajshekhar B Patil)-73921
ಜೆಡಿಎಸ್-ಯಾಜ್ ಮೊಹಮದ್ (Yaz Mohammed)-25900

ಪುರುಷ ಮತದಾರರು-121884
ಮಹಿಳಾ ಮತದಾರರು-111681
ಇತರೆ-12
ಒಟ್ಟು-233577

ಹುಮ್ನಾಬಾದ್ ಜಾತಿ ಲೆಕ್ಕಾಚಾರ
ಲಿಂಗಾಯತ    75,000
ಮುಸ್ಲಿಂ    60,000
ಎಸ್ಸಿ 50,000
ಎಸ್ಟಿ 35,000
ಮರಾಠ    10,000
ರೆಡ್ಡಿ    8,000
ಇತರೆ    25,000

ಬಸವಕಲ್ಯಾಣ ಕ್ಷೇತ್ರ (Basavakalyana Assembly Constituency): ಬಿಜೆಪಿಯ ಶರಣು ಸಲಗಾರ್ ಗೆಲುವು
ಅಣ್ಣ ಬಸವಣ್ಣ ನಡೆದಾಡಿರುವ, ಇಡೀ ವಿಶ್ವಕ್ಕೆ ಸಮಾನತೆ ಸಾರಿದ ಬಸವಾದಿ ಶರಣರ ಕಾರ್ಯಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ 92920 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಕೋವಿಡ್‌ನಿಂದ ಅಕಾಲಿಕವಾಗಿ ನಿಧನ ಹೊಂದಿದ ಶಾಸಕ ಬಿ.ನಾರಾಯಣರಾವ್‌ ಅವರ ಸ್ಥಾನ ತುಂಬಲು ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯ ಶರಣು ಸಲಗರ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. ಉಪಚುನಾವಣೆಯಲ್ಲೇ ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರೀ ಪ್ರಯತ್ನ ನಡೆಸಿ ವಿಫಲರಾಗಿದ್ದ ಮಾಜಿ ಸಿಎಂ ಧರಂಸಿಂಗ್‌ ಪುತ್ರ ವಿಜಯಸಿಂಗ್‌ ಕಾಂಗ್ರೆಸ್‌ನಿಂದ ಕಣದಲ್ಲಿದ್ದರು. ಇನ್ನು 2018 ರಲ್ಲಿ ಬಿ.ನಾರಾಯಣ ರಾವ್ ಕಾಂಗ್ರೆಸ್‌ನಿಂದ ಮತಗಳನ್ನು 1,43,916 ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಶರಣು ಸಲಗಾರ್ (Sharanu Salagar)-92920
ಕಾಂಗ್ರೆಸ್‌-ವಿಜಯ್ ಧರ್ಮಸಿಂಗ್ (Vijay Dharma Singh)-78505
ಜೆಡಿಎಸ್-ಸಂಜೀವ್ ಕುಮಾರ್ (Sanjeev Kumar)-1526

ಪುರುಷ ಮತದಾರರು-116825
ಮಹಿಳಾ ಮತದಾರರು-104232
ಇತರೆ-15
ಒಟ್ಟು-221072

ಬಸವಕಲ್ಯಾಣ ಜಾತಿ ಲೆಕ್ಕಾಚಾರ
ಲಿಂಗಾಯತ    60,000
ಮರಾಠ    55,000
ಮುಸ್ಲಿಂ    50,000
ಎಸ್ಸಿ 35,000
ಎಸ್ಟಿ 15,000
ಕೋಳಿ ಸಮಾಜ    18,000
ಇತರೆ    15,000

click me!