Puttur Election Result 2023: ಬಿಜೆಪಿ ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ, ಪುತ್ತೂರು ಕಾಂಗ್ರೆಸ್ ಪಾಲು

By Gowthami K  |  First Published May 13, 2023, 3:20 PM IST

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಶೋಕ್  ರೈ ಗೆಲುವು ಕಂಡಿದ್ದಾರೆ. ಈ ಮೂಲಕ ಪಕ್ಷೇತರ ಮತ್ತು ಬಿಜೆಪಿ ಜಗಳದಲ್ಲಿ ಕ್ಷೇತ್ರ ಮಾತ್ರ ಮೂರನೆಯವನ ಪಾಲಾಗಿದೆ.


ದಕ್ಷಿಣ ಕನ್ನಡ (ಮೇ.13): ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಶೋಕ್  ರೈ ಗೆಲುವು ಕಂಡಿದ್ದಾರೆ. ಈ ಮೂಲಕ ಪಕ್ಷೇತರ ಮತ್ತು ಬಿಜೆಪಿ ಜಗಳದಲ್ಲಿ ಕ್ಷೇತ್ರ ಮಾತ್ರ ಮೂರನೆಯವನ ಪಾಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡ ಉದ್ಯಮಿ ಅಶೋಕ್‌ ಕುಮಾರ್‌ ರೈ  3,352 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಒಟ್ಟು ಶೇ. 79.91 ಮತದಾನವಾಗಿತ್ತು.
ಅಶೋಕ್ ರೈ: 64,687 ಮತಗಳು
ಅರುಣ್ ಪುತ್ತಿಲ: 61,336 ಮತಗಳು
ಆಶಾ ತಿಮ್ಮಪ್ಪ 36,526  ಮತಗಳು

ಈ ಬಾರಿಯ ಅಸೆಂಬ್ಲಿ ಚುನಾವಣೆ ಪೈಕಿ ಕರಾವಳಿ ಜಿಲ್ಲೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದ ಕ್ಷೇತ್ರ ಎಂದರೆ ಅದು ಪುತ್ತೂರು. ಬಿಜೆಪಿ ಭದ್ರಕೋಟೆ ಒಡೆಯುವ ಯತ್ನ ಕಾಂಗ್ರೆಸ್‌ನಿಂದ ನಡೆಯುತ್ತಿತ್ತು. ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ. ಬಿಜೆಪಿ ವಿರುದ್ಧ ಹಿಂದುತ್ವ ನಾಯಕ ಅರುಣ್ ಕುಮಾರ್ ಪುತ್ತಿಲ ಕೋಟೆ ಕಟ್ಟಲು ಪಕ್ಷೇತರ ಅಭ್ಯರ್ಥಿಯಾಗಿ ತೊಡೆ ತಟ್ಟಿದ್ದರು. ಆದರೆ ಇದ್ಯಾವುದೂ ಕೂಡ ಫಲನೀಡಿಲ್ಲ.  ಹಾಗೆ ನೋಡಿದರೆ ಪುತ್ತೂರು ಕ್ಷೇತ್ರದಲ್ಲಿ ಕಣದಲ್ಲಿದ್ದ ಮೂವರು ಅಭ್ಯರ್ಥಿಗಳು ಕೂಡ ಹಿಂದುತ್ವದ ಹಿನ್ನೆಲೆ ಉಳ್ಳವರೇ ಆಗಿದ್ದರು. 

Tap to resize

Latest Videos

2018 ರಲ್ಲಿ ಇಲ್ಲಿ ಸಂಜೀವ ಮಠಂದೂರು ಬಿಜೆಪಿ ಶಾಸಕರಿದ್ದರು. ಈ ಬಾರಿ ಮಠಂದೂರು ಬದಲು ಹೊಸಮುಖ ಆಶಾ ತಿಮ್ಮಪ್ಪರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಪಕ್ಷದ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರಖರ ಹಿಂದುತ್ವವಾದಿ, ಸಂಘಟಕ ಅರುಣ್‌ ಕುಮಾರ್‌ ಕುಮಾರ್‌ ಪುತ್ತಿಲ ಅವರಿಗೆ ಕಾರ್ಯಕರ್ತರ ಬಹುವಾಗಿತ್ತು. ಬಿಜೆಪಿಯೊಳಗೆ ಎದ್ದಿರುವ ಅಸಮಾಧಾನ ಸರಿಪಡಿಸಲು ಸಂಘಪರಿವಾರ ಮತ್ತು ಪಕ್ಷದ ಮುಖಂಡರು ಹಗಲಿರುಳು ಶ್ರಮಿಸಿದ್ದರು ಫಲ ನೀಡಿರಲಿಲ್ಲ. ಆದರೆ ಇಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ಮತ ಹಂಚಿಕೆಯಾಗಿದೆ.

Karnataka Election Results 2023: ಸೋಲಿನ ಸಾಗರದಲ್ಲಿ ಶಿಗ್ಗಾಂವಿಯಲ್ಲಿ ಕಮಲ ಅರಳಿಸಿದ

ಚುನಾವಣೆ ಘೋಷಣೆಗೂ ಮೊದಲು ಕ್ಯಾಂಪ್ಕೋ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದುಹೋಗಿದ್ದರು. ಅದರ ಲಾಭದ ನಿರೀಕ್ಷೆ ಬಿಜೆಪಿಗರಲ್ಲಿತ್ತು.  ರಾಜ್ಯದ ಸಹ ಉಸ್ತುವಾರಿ ಅಣ್ಣಾಮಲೈರನ್ನು ಕರೆಸಿ ಸಮಾವೇಶ ಹಾಗೂ ವಿಟ್ಲದಲ್ಲಿ ರೋಡ್‌ಶೋ ನಡೆಸಿತ್ತು. ಕೊನೇ ಹಂತದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಪುತ್ತೂರಿಗೆ ಕರೆಸಿ ಸಮಾವೇಶ ನಡೆಸಲಾಗಿತ್ತು. ಆದರೆ ಇದ್ಯಾವುದೇ ತಂತ್ರಗಾರಿಕೆಗೆ ಅಲ್ಲಿನ ಜನ ಮಣಿದಿಲ್ಲ.

Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

 

click me!