Karnataka Election Result 2023: ಪೇಸಿಎಂ, ಸರ್ವೇ, ಡಿಜಿಟಲ್‌ ಐಡಿಯಾ.. ಕಾಂಗ್ರೆಸ್‌ ಮಾಸ್ಟರ್‌ ಮೈಂಡ್‌ ಸುನೀಲ್‌ ಕುನಗೋಳು!

By Santosh Naik  |  First Published May 13, 2023, 3:19 PM IST

ಕಾಂಗ್ರೆಸ್‌ ಪಕ್ಷದ ಅತೀದೊಡ್ಡ ಅಭಿಯಾನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ಪೇಸಿಎಂ ಅಭಿಯಾನದಲ್ಲಿ. ಬಿಜೆಪಿಯನ್ನು 40% ಕಮೀಷನ್‌ ಸರ್ಕಾರ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್‌ ಅದನ್ನು ಜನರಿಗೆ ಸೂಕ್ತವಾದ ರೀತಿಯಲ್ಲಿ ಮುಟ್ಟಿಸುವಲ್ಲಿ ನೆರವಾಗಿದ್ದು ಪೇಸಿಎಂ ಅಭಿಯಾನದಿಂದ. ಇಡೀ ಅಭಿಯಾನದ ಹಿಂದೆ ಇದ್ದಿದ್ದು ಸುನೀಲ್‌ ಕುನಗೋಳು.
 


ಬೆಂಗಳೂರು (ಸೆ.23): ತೀರಾ ಕೆಲವೊಂದು ಸೀಟ್‌ಗಳನ್ನು ಬಿಟ್ಟರೆ, ಕರ್ನಾಟಕ ಕಾಂಗ್ರೆಸ್‌ ಈ ಬಾರಿ ಬಹುತೇಕವಾಗಿ ಸುನೀಲ್‌ ಕುನಗೋಳು ಟೀಮ್‌ ಮಾಡಿದ್ದ ಸರ್ವೇಯ ಆಧಾರದಲ್ಲಿಯೇ ಅಭ್ಯರ್ಥಿಗಳನ್ನು ಅಂತಿಮ ಮಾಡಿತ್ತು. ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡದಂತೆ, ಹಿಂದು-ಮುಸ್ಲಿಂ ಕುರಿತಾದ ವಿಚಾರ ಮುನ್ನಲೆಗೆ ತರದಂತೆ ಈ ಟೀಮ್‌ ಸಲಹೆಯನ್ನೂ ನೀಡಿತ್ತು. ಅದರೊಂದಿಗೆ ಕೆಲವೊಂದು 70 ಸೀಟ್‌ಗಳಲ್ಲಿ ಕಾಂಗ್ರೆಸ್‌ನ ಸ್ಪರ್ಧೆ ನೆಪಮಾತ್ರ ಎನ್ನುವುದನ್ನೂ ಈ ಟೀಮ್‌ ತಿಳಿಸಿಬಿಟ್ಟಿತ್ತು. ಈ ಎಲ್ಲದರ ಯಶಸ್ಸು ಈಗ ಸಿಕ್ಕಿದೆ. ಇಡೀ ರಾಜ್ಯ ಕಾಂಗ್ರೆಸ್‌ ಸಂಭ್ರಮ ಪಡುವಂತೆ ಸುನೀಲ್‌ ಕುನಗೋಳು ಅವರ ಮಾಸ್ಟರ್‌ ಮೈಂಡ್‌ ರಾಜ್ಯ ರಾಜಕಾರಣದಲ್ಲಿ ವರ್ಕ್‌ ಆಗಿದೆ. ರಾಜಕೀಯದಲ್ಲಿ ಯಶಸ್ಸು ಕಾಣಲು ನೂರಾರು ಮಾರ್ಗಗಳಿವೆ. ಸಮಾವೇಶ, ಪಾದಯಾತ್ರೆಗಳದ್ದು ಒಂದು ಮುಖವಾದರೆ, ಡಿಜಿಟಲ್‌ ವಲಯ ಇನ್ನೊಂದು ಮುಖ. ಬಿಜೆಪಿ ಐಟಿ ಸೆಲ್‌ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕ್ಯಾಂಪೇನ್‌ಗಳನ್ನು ಮಾಡಿದೆ. ಇಲ್ಲಿಯವರೆಗೂ ಬಿಜೆಪಿ ತಂತ್ರಗಾರಿಕೆಗೆ ಟಕ್ಕರ್‌ ಕೊಡಲು ಒದ್ದಾಡುತ್ತಿದ್ದ ರಾಜ್ಯ ಕಾಂಗ್ರೆಸ್‌, ಪೇಸಿಎಂ ಕ್ಯಾಂಪೇನ್‌ ಮೂಲಕ ಜಿಗಿದೆದ್ದಿತ್ತು. ಇಡೀ ಕಾಂಗ್ರೆಸ್‌ ಪಕ್ಷದ ಚುನಾವಣೆ ಪ್ರಚಾರ ಈ ಅಭಿಯಾನದ ಮೂಲಕವೇ ಆರಂಭವಾಗಿತ್ತು ಎಂದರೆ ತಪ್ಪಾಗಲಾರದು.

ಐಟಿ ಹಬ್‌ ಬೆಂಗಳೂರಿಗೆ ಐಟಿ ರೀತಿಯಲ್ಲೇ ಯೋಚನೆ ಮಾಡಿ ಕಾಂಗ್ರೆಸ್‌ ಸರ್ಕಾರವನ್ನು ತಿವಿದಿರುವ ಅಭಿಯಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಖ್ಯಾತ ಡಿಜಿಟಲ್ ವ್ಯಾಲೆಟ್‌ ಕಂಪನಿಯ ಹೆಸರನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿತ್ತು. ರಾಜ್ಯ ಸರ್ಕಾರದ ಕಮಿಷನ್‌ ಆರೋಪದ ಜನರಿಗೆ ರೀಚ್‌ ಮಾಡುವಲ್ಲಿ ಸೋಲುತ್ತಿದ್ದ ಕಾಂಗ್ರೆಸ್‌, ಪೇಸಿಎಂ ಮೂಲಕ ಅದರಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.  

ಅದಕ್ಕೂ ಮುನ್ನ ನಿಮ್ಮಹತ್ರ ಇದ್ಯಾ ಉತ್ತರ ಅನ್ನೋ ಕ್ಯಾಂಪೇನ್‌ಅನ್ನು ಕಾಂಗ್ರೆಸ್‌ ಪಕ್ಷ ಮಾಡಿತ್ತು. ಅದಾದ ನಂತರ 40% ಸರ್ಕಾರ ಅನ್ನೋ ಕ್ಯಾಂಪೇನ್‌ ಅನ್ನು ಕಾಂಗ್ರೆಸ್‌ ಮಾಡಿತ್ತು. ಇದಾದ ಬಳಿಕ, ಈ ವಿಚಾರ ಜನರಿಗೆ ಇನ್ನಷ್ಟು ಡೀಪ್‌ ಆಗಿ ವಿಚಾರ ತಲುಪಬೇಕು ಎನ್ನುವ ಗುರಿಯಲ್ಲಿ ಪೇಸಿಎಂ ಕ್ಯಾಂಪೇನ್‌ ಮಾಡಿದ ಯಶಸ್ಸು ಕಂಡಿತ್ತು.

ಇನ್ನು ಸರ್ವೇಗಳ ಲೆಕ್ಕಾಚಾರಕ್ಕೆ ಬರೋದಾದರೆ, ಕಳೆದ ಎಂಟು ತಿಂಗಳಲ್ಲಿ ಕುನಗೋಳು ಟೀಮ್‌ ಒಟ್ಟು ಐದು ಸರ್ವೇಗಳನ್ನು ಮಾಡಿತ್ತು. ಈ ಸರ್ವೇಯ ಮೂಲಕ ಕನಿಷ್ಠ 70ಕ್ಕೂ ಅಧಿಕ ಹಾಟ್‌ ಸೀಟ್‌ಗಳನ್ನು ಕಾಂಗ್ರೆಸ್‌ ಪರಿಗಣನೆ ಮಾಡಿತ್ತು. ಆ ಮೂಲಕಸ ಎಐಸಿಸಿ ಅಬ್ಸರ್ವರ್‌ಗಳನ್ನು ಈ ಕ್ಷೇತ್ರಗಳಲ್ಲಿ ಮೀಸಲು ಮಾಡಿಟ್ಟಿತ್ತು ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ. ಕಳೆದ ಮೇನಲ್ಲಿ, ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕನುಗೋಲು ಅವರನ್ನು ಪಕ್ಷದ 2024 ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರನ್ನಾಗಿ ಹೆಸರಿಸಿದ್ದರು, ಇದರಲ್ಲಿ ಹಿರಿಯ ನಾಯಕರಾದ ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಣದೀಪ್ ಸಿಂಗ್ ಇದ್ದಾರೆ. ಕರ್ನಾಟಕ ಉಸ್ತುವಾರಿ ಎಐಸಿಸಿ ನಾಯಕರಾಗಿದ್ದ ಸುರ್ಜೇವಾಲಾ ಕೂಡ ಈ ಸಮಿತಿಯಲ್ಲಿದ್ದಾರೆ.

Tap to resize

Latest Videos

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಪೇಸಿಎಂ ಯಶ್ಸಸಿನ ಬಗ್ಗೆ ಕಾಂಗ್ರೆಸ್‌ ಹೇಳೋದೇನು: ಬಿಜೆಪಿ (BJP) ಕಳೆದ ಚುನಾವಣೆಗಳಲ್ಲಿ ಡಿಜಿಟಲ್‌ಅಲ್ಲಿ ಉತ್ತಮವಾಗಿ ಬಳಸಿಕೊಂಡಿತ್ತು. ಅದೇ ಸ್ಟ್ರ್ಯಾಟಜಿಯನ್ನು ನಾವು ಬಳಸಿಕೊಂಡಿದ್ದೇವೆ. ಪೇಟಿಎಂ ಎನ್ನುವ ಡಿಜಿಟಲ್‌ ವ್ಯಾಲೆಟ್‌ ಕಂಪನಿ ನಮ್ಮಲ್ಲಿ ತುಂಬಾ ಹಳೆಯದು. ಗೂಗಲ್‌ ಪೇ, ಫೋನ್‌ ಪೇ ಮೂಲಕ ಪಾವತಿಯನ್ನೂ ಕೆಲವೆಡೆ ಪೇಟಿಎಂ ಮಾಡು ಎಂದೇ ಹೇಳ್ತಾರೆ. ಪೇಟಿಎಂ ಎನ್ನುವ ಹೆಸರು ಸಿಎಂ ಎನ್ನುವ ಶಬ್ದಕ್ಕೆ ಒಳ್ಳೆಯ ಪ್ರಾಸವಾಗಿ ಕೂಡುತ್ತದೆ. ಹಾಗಾಗಿ ಪೇಸಿಎಂ ಎನ್ನುವುದನ್ನು ಬಳಸಿಕೊಂಡೆವು. ಟೀಮ್‌ನ ಒಬ್ಬ ವ್ಯಕ್ತಿ ಈ ಹೆಸರನ್ನು ಸೂಚಿಸಿದರು. ಒಟ್ಟಾರೆ ಜನರಿಗೆ ಅಷ್ಟು ಸುಲಭವಾಗಿ ತಲುಪೋದು ಹೇಗೆ ಎಂದಾಗ ಹುಟ್ಟಿದ್ದು ಈ ಐಡಿಯಾ.  ಬಹುಶಃ 2017ರಿಂದ ಜನ ತಮ್ಮ ಕೈಯಲ್ಲಿ ಕ್ಯಾಶ್‌ ಇಡೋದನ್ನೇ ಬಿಟ್ಟುಬಿಟ್ಟಿದ್ದಾರೆ. ಎಲ್ಲೇ ಹೋಗ್ಲಿ ಆನ್‌ಲೈನ್‌ ಪೇ ಮಾಡೋದೇ ಆಗಿದೆ. ಡಿಜಿಟಲ್‌ ಪೇಯಲ್ಲಿ ಆರಂಭಿಕವಾಗಿ ಇದ್ದಿದ್ದು ಪೇಟಿಎಂ (PayTM). ಜನರ ಬಾಯಲ್ಲಿ ಈ ಶಬ್ದವಿದೆ. ಆ ಕಾರಣಕ್ಕಾಗಿ ಇದೇ ಹೆಸರನ್ನ ಸ್ವಲ್ಪ ಬದಲಾಯಿಸಿ ಉಳಿಸಿಕೊಂಡೆವು. ಈ ಅಭಿಯಾನ ಖಂಡಿತವಾಗಿ ಯಶಸ್ಸು ಆಗುತ್ತೆ ಅನ್ನೋದು ಗೊತ್ತಿತ್ತು ಎಂದು ಸುನೀಲ್‌ ಕುನಗೋಳು ಟೀಮ್‌ನ ಸದಸ್ಯರೊಬ್ಬರು ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಹೇಳಿದ್ದರು.

ಸ್ಪಷ್ಟ ಬಹುಮತದತ್ತ ಕಾಂಗ್ರೆಸ್: ಭಜರಂಗ್ ಬಲಿ ಘೋಷಣೆ ಮೂಲಕ ಬಿಜೆಪಿಗೆ ಟಾಂಗ್‌

click me!