ಮುಸ್ಲಿಂರ ಓಲೈಕೆಗೆ ಕಾಂಗ್ರೆಸ್ ಬಜರಂಗದಳ ನಿಷೇಧ ಘೋಷಣೆ: ಕುಯಿಲಾಡಿ ಸುರೇಶ್ ನಾಯಕ್

Published : May 05, 2023, 05:31 PM IST
ಮುಸ್ಲಿಂರ ಓಲೈಕೆಗೆ ಕಾಂಗ್ರೆಸ್ ಬಜರಂಗದಳ ನಿಷೇಧ ಘೋಷಣೆ: ಕುಯಿಲಾಡಿ ಸುರೇಶ್ ನಾಯಕ್

ಸಾರಾಂಶ

ಮುಸ್ಲಿಮರ ತುಷ್ಟೀಕರಣಕ್ಕಾಗಿ ಬಜರಂಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್‌ ಪಕ್ಷದ ಮಾನಸಿಕತೆ ಜನರಿಗೆ ಅರಿವಾಗಿದ್ದು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಟೀಕಿಸಿದರು.

ಉಡುಪಿ (ಮೇ.5) : ಮುಸ್ಲಿಮರ ತುಷ್ಟೀಕರಣಕ್ಕಾಗಿ ಬಜರಂಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್‌ ಪಕ್ಷದ ಮಾನಸಿಕತೆ ಜನರಿಗೆ ಅರಿವಾಗಿದ್ದು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಟೀಕಿಸಿದರು.

ಗುರುವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿ, ಕಾಂಗ್ರೆಸ್‌(Congress)ಗೆ ತಾಕತ್ತು ಇದ್ದರೆ ಮದರಸಾಗಳನ್ನು ನಿಷೇಧಿಸಲಿ, ಲವ್ ಜಿಹಾದ್(Love jihad) ಬಗ್ಗೆ ಪ್ರಶ್ನೆ ಮಾಡಲಿ, ರಸ್ತೆ ಮಧ್ಯೆ ನಮಾಜ್ ಮಾಡಬೇಡಿ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನಿಷೇಧದ ಭರವಸೆ, ದೇಶದ ಬಲ 'ಭಜರಂಗದಳ' ಟ್ವಿಟರ್‌ನಲ್ಲಿ ಟ್ರೆಂಡ್‌!

ಸೀಟು ಹಂಚಿಕೆಯಲ್ಲಿ ಎಸ್‌ಡಿಪಿಐ(SDPI) ಜತೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್‌ ದೇಶಭಕ್ತರ ಜತೆಗಿದೆಯೇ ಅಥವಾ ದೇಶ ವಿರೋಧಿಗಳ ಜತೆಗಿದೆಯೇ ಸ್ಪಷ್ಟಪಡಿಸಬೇಕು. ಮುಸ್ಲಿಮರ ಮತ ಪಡೆಯಲು ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ವಿರೋಧಿ ನಿಲುವು ತೆಗೆದುಕೊಂಡ ಕಾಂಗ್ರೆಸ್‌ ಈಗ ಬಜರಂಗದಳ(Bajrangadala)ವನ್ನು ನಿಷೇಧಿಸುವ ಮಾತನಾಡಿರುವುದು ಖಂಡನೀಯ ಎಂದರು.

ಕಾಂಗ್ರೆಸ್‌ನ ಒಂದು ವರ್ಗದ ಓಲೈಕೆ ರಾಜಕಾರಣವನ್ನು ಹಿಂದೂ ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸಿದ್ದು ಮೇ 10ರಂದು ಉತ್ತರ ಕೊಡಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 50 ಸೀಟುಗಳು ಬರುವುದಿಲ್ಲ ಎಂದು ಲೇವಡಿ ಮಾಡಿದರು.

ಮೇ 6ರಂದು ಕಾರ್ಕಳ ವಿಧಾನಸಭಾ ಕ್ಷೇತ್ರ(Karkal assembly constituency)ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi adityanath) ಪ್ರಚಾರ ಮಾಡಲಿದ್ದಾರೆ. ಅಂದು ಮಧ್ಯಾಹ್ನ 2.30ಕ್ಕೆ ರೋಡ್ ಶೋ(Roadshow) ನಡೆಸಲಿದ್ದು 30000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದರು.

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ(Yashpal suvarna) ಮೇ 5ರಂದು ಮಧ್ಯಾಹ್ನ ಕಲ್ಮಾಡಿಯ ಏಳೂರು ಮೊಗವೀರರ ಸಮುದಾಯ ಭವನದಿಂದ ರೋಡ್ ಶೋ ಮೂಲಕ ಮತ ಯಾಚನೆ ಮಾಡಲಿದ್ದಾರೆ. ಮೀನುಗಾರರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮ ಜನ್ಮಸ್ಥಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ!

ಈ ಸಂದರ್ಭ ಮುಖಂಡರಾದ ರಾಘವೇಂದ್ರ ಕಿಣಿ, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ