ಜನರಿಗೆ ಕಿರುಕುಳ ನೀಡುವ ಬಜರಂಗ ದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿ (ಮೇ.5) : ಜನರಿಗೆ ಕಿರುಕುಳ ನೀಡುವ ಬಜರಂಗ ದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿ(Madikeri)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗ ದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ. ಜನರಿಗೆ ಪಾರ್ಕಲ್ಲಿ ಒಟ್ಟಿಗೆ ಓಡಾಡಲು ಬಿಡುವುದಿಲ್ಲ. ಇವರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ಆಂಜನೇಯ ಯಾವತ್ತೂ ಕಿರುಕುಳ ಕೊಟ್ಟವನಲ್ಲ. ಆದರೆ ಬಜರಂಗ ದಳದವರು ಕಾನೂನು ಕೈಗೆ ತೆಗೆದುಕೊಂಡು ಎಷ್ಟೋ ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
undefined
ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮ ಜನ್ಮಸ್ಥಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ!
ಬಿಜೆಪಿ ನಾಯಕರ ಹೆಣ್ಣು ಮಕ್ಕಳು ಬೇರೆ ಧರ್ಮದವರನ್ನು ಮದುವೆ ಆಗಿಲ್ಲವೇ? ಲವ್ ಮಾಡಿಲ್ಲವೇ? ಪ್ರತಿ ಮಾತಿಗೂ ಆಂಜನೇಯ ಎಂದು ಹೇಳುವುದು ಸರಿಯಲ್ಲ. ಬಜರಂಗ ದಳ ಒಂದು ಸಂಘಟನೆ ಮಾತ್ರ. ನಾನು ಹಿಂದೂ, ಆಂಜನೇಯನ ಭಕ್ತ, ನನ್ನ ರಾಮ ವಿರಾಟ್ ಅಲ್ಲ ಶಾಂತಿ ಸೌಹಾರ್ದತೆಯ ರಾಮ. ಗಾಂಧಿ ಹೇಳಿಕೊಟ್ಟರಾಮ ಎಂದು ವಿಶ್ವನಾಥ್ ಪ್ರತಿಪಾದಿಸಿದರು.
ವಿಶ್ವ ಗುರು ಪ್ರಧಾನಿ ಮೋದಿ(Narendra Modi)ಯನ್ನು ಗೌರವಿಸುತ್ತೇನೆ. ಆದರೆ ಚುನಾವಣೆಯ ಸಮಯದಲ್ಲಿ ಇಷ್ಟುಬಾರಿ ಒಂದು ರಾಜ್ಯಕ್ಕೆ ಬರಬೇಕಾ..? ಒಂದು ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಪದೇ ಪದೇ ಬರುವುದು ಚುನಾವಣೆಯ ಮೇಲಿನ ಭಯದಿಂದಲಾ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಪ್ರಶ್ನಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಷೇಧದ ಭರವಸೆ, ದೇಶದ ಬಲ 'ಭಜರಂಗದಳ' ಟ್ವಿಟರ್‌ನಲ್ಲಿ ಟ್ರೆಂಡ್!
ನಿಮ್ಮ ಮೇಲೆ ಕರ್ನಾಟಕದ ಜನತೆಗೆ ನಂಬಿಕೆ ಹಾಳಾಗಿದೆಯೇ. ಕರ್ನಾಟಕದ ಜನ ಪ್ರಧಾನಮಂತ್ರಿ ಮೋದಿ ಹಾಗೂ ಬಿಜೆಪಿ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ನಂಬಿಕೆಯನ್ನು ಮೂಡಿಸಲು ಪದೇ ಪದೇ ಬರುತ್ತಾ ಇದ್ದೀನಿ ಎಂದು ನೀವೇ ಜಗಜ್ಜಾಹೀರು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.