Modi Bengaluru Roadshow: ಮೋದಿ ರೋಡ್‌ ಶೋ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

By Gowthami K  |  First Published May 5, 2023, 4:44 PM IST

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ  36 ಕಿ. ಮೀ ರೋಡ್ ಶೋ  ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ರೋಡ್ ಶೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.


ಬೆಂಗಳೂರು (ಮೇ.5): ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ  36 ಕಿ. ಮೀ ರೋಡ್ ಶೋ  ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ರೋಡ್ ಶೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಹೈಕೋರ್ಟ್ ವಿಭಾಘೀಯ ಪೀಠದಿಂದ ಈ ಆದೇಶ ಹೊರಬಿದ್ದಿದೆ.  ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಮೇ 6 ಮತ್ತು 7 ರಂದು ನಡೆಯುತ್ತಿರುವ ರೋಡ್ ಶೋ ಗೆ ತಡೆಯಾಜ್ಞೆ ನೀಡುವಂತೆ ಹಿರಿಯ ವಕೀಲ ಅಮೃತೇಶ್ ರಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ರೋಡ್ ಶೋ ನಿಂದ ತುಂಬಾ ಟ್ರಾಫಿಕ್ ಜಾಮ್ ಆಗುತ್ತೆ. ಈಗಾಗಲೇ ಬಿಜೆಪಿ ಹೇಳಿರುವಂತೆ 10 ಲಕ್ಷ ಜನ ಸೇರಲಿದ್ದಾರೆ. ಹೀಗಾಗಿ ಪರಿಸರ ನಾಶಕ್ಕೆ ಕಾರಣವಾಗಲಿದೆ. ಬೆಂಗಳೂರಿನ ಹಿರಿಯ ನಾಗರೀಕರಿಗೆ ತೊಂದರೆಯಾಗಲಿದೆ. ಚುನಾವಣಾ ಆಯೋಗ ಅವೈಜ್ಞಾನಿಕ ರೀತಿಯಲ್ಲಿ ಅನುಮತಿ ನೀಡಿದೆ. ನಾಗರೀಕರ ನಡೆದಾಡುವ ಹಕ್ಕು ಕಸಿದುಕೊಂಡಂತೆ ಆಗಲಿದೆ ಹೀಗಾಗಿ ಮೋದಿ ರೋಡ್ ಶೋಗೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಹೈಕೋರ್ಟ್  ಅರ್ಜಿ ವಿಚಾರಣೆ ನಡೆಸಿದ್ದು, ಅರ್ಜಿದಾರ ಅಮೃತೇಶ್  ವಾದ ಮಂಡಿಸಿದ್ದರು. ಚುನಾವಣಾ ಆಯೋಗ ಪರ ವಕೀಲ ಶರತ್ ವಾದ ಮಂಡಿಸಿದ್ದಾರೆ.

Tap to resize

Latest Videos

ನ್ಯಾಯಾಧೀಶ: ಚುನಾವಣಾ ಪ್ರಕ್ರಿಯೆ ಯಾವಾಗಿನಿಂದ ಆರಂಭವಾಗಿದೆ? ಎಲ್ಲಿಯವರೆಗೆ ಬಹಿರಂಗ ಪ್ರಚಾರಕ್ಕೆ ಅವಕಾಶ ಇದೆ? ಯಾವೆಲ್ಲಾ ಪಕ್ಷಗಳು ರೋಡ್ ಶೋಗಳನ್ನ ನಡೆಸಿವೆ? ಯಾವ ಯಾವ ಡೇಟಲ್ಲಿ ರೋಡ್ ಶೋಗಳನ್ನ ನಡೆಸಲಾಗಿದೆ?  
ವಕೀಲ ಶರತ್: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರೋಡ್ ಗಳನ್ನ‌ ನಡೆಸಿವೆ. ಎಲ್ಲಾ ಪಕ್ಷಗಳು ಆರ್.ಓ ಗಳ ಅನುಮತಿ ಪಡೆದು ರೋಡ್ ಶೋ ನಡೆಸಿವೆ.
ನ್ಯಾಯಾಧೀಶ: ರೋಡ್ ಷೋ ಚುನಾವಣೆ ‌ವೇಳೆ ಮಾಡೋದು ಸಾಮಾನ್ಯ ಪ್ರಕ್ರಿಯೆನಾ? 
ಸರ್ಕಾರದ ಪರ ವಕೀಲ: ಹೌದು ಎಂದು ಎತ್ತರಿಸಿದ ಸರ್ಕಾರದ ಪರ ವಕೀಲರು
ನ್ಯಾಯಾಧೀಶ: ರ್ಯಾಲಿ ಸಮಯದಲ್ಲಿ ರೋಡ್ ಪಕ್ಕದಲ್ಲಿ ಬಳಕೆಗೆ ಅವಕಾಶ ಇದೆಯಾ.?  
ವಕೀಲ: ಡಬಲ್ ರೋಡ್‌ಗಳಲ್ಲಿ ಒಂದು ಕಡೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ತುಷಾರ ಗಿರಿನಾಥ್ : ಪಿಎಂ ಸಂಚಾರ ನಡೆಸುತ್ತಿರುವುದರಿಂದ ಭದ್ರತಾ ದೃಷ್ಟಿಯಿಂದ ಸಂಚಾರಕ್ಕೆ ಅನುಮತಿ ಇಲ್ಲ.
ನ್ಯಾಯಾಧೀಶ: ನಾಳೆ‌ ಇರುವ ಎಕ್ಸಾಂ ಯಾವುದು.? 
ವಕೀಲ: ನೀಟ್ ಪರೀಕ್ಷೆ 30 ಕೇಂದ್ರಗಳಲ್ಲಿ ನಡೆಯುತ್ತಿದೆ. ರಾಜ್ಯಾದ್ಯಂತ 499 ಕೇಂದ್ರಗಳಲ್ಲಿ ಕೇಂದ್ರ ಪರೀಕ್ಷೆ ನಡೀತಾ ಇದೆ?
ನ್ಯಾಯಾಧೀಶ: ಯಾವ ಕ್ಷೇತ್ರಗಳಲ್ಲಿ ರೋಡ್ ಷೋ ನಡೀತಾ ಇದೆ? ಪರೀಕ್ಷೆ ಯಾವ ಸಮಯಕ್ಕೆ ಆರಂಭ ಆಗುತ್ತೆ.? 
ತುಷಾರ್ ಗಿರಿನಾಥ್: ಮಧ್ಯಾಹ್ನ 2 ರಿಂದ‌5.30 ರವರೆಗೆ ಪರೀಕ್ಷೆ ಇದೆ.
ನ್ಯಾಯಾಧೀಶ: ನಾಳೆ ಯಾವುದೂ ಸಾರ್ವಜನಿಕ ಪರೀಕ್ಷೆ ಗಳು ಇಲ್ವಾ.?  
ತುಷಾರ್ ಗಿರಿನಾಥ್: ಇಡೀ ರಾಜ್ಯಾದ್ಯಂತ ನಡೆಯುತ್ತಿರುವ ಪರೀಕ್ಷೆ ಗಳ ಬಗ್ಗೆ ಮಾಹಿತಿ ಇಲ್ಲ. ಕೇವಲ ನೀಟ್ ಪರೀಕ್ಷೆ ಬಗ್ಗೆ ಮಾತ್ರ ಮಾಹಿತಿ ಇದೆ. 

ಪರೀಕ್ಷಾ ಪ್ರಾಧಿಕಾರದ ಬಳಿ ಮಾಹಿತಿ ಪಡೆಯಲು ಸೂಚನೆ ನೀಡಿದ ನ್ಯಾಯಮೂರ್ತಿಗಳು.
ನ್ಯಾಯಾಧೀಶ: ರೋಡ್ ಷೋ ಗೆ ಅನುಮತಿ ನೀಡುವ ಬಗ್ಗೆ ಏನ್ ನಿರ್ಧಾರ ಮಾಡಿದ್ದಿರೀ? 
ತುಷಾರ್ ಗಿರಿನಾಥ್: ನಾಳೆ 9 ರಿಂದ 1.30, ನಾಡಿದ್ದು 9ರಿಂದ 11.30 ವರೆಗೆ ಅನುಮತಿ ನೀಡಲು ಅನುಮತಿ ನೀಡಲು ನಿರ್ಧರಿಸಿದ್ದೇವೆ.. 
ನ್ಯಾಯಾಧೀಶ: ಈ ರೋಡ್ ಷೋ ಮಾತ್ರವಲ್ಲದೆ ಬೇರೆ ರೋಡ್ ಗಳು ಇವೆಯೇ.?  
ತುಷಾರ್ ಗಿರಿನಾಥ್: ಕೆಲವೆಡೆ ಆರ್.ಓಗಳು ಅನುಮತಿ ನೀಡಿದ್ದಾರೆ. 
ನ್ಯಾಯಾಧೀಶ: ಮೊದಲು ಯಾವ ರೋಡ್ ಷೋ ಆರಂಭ ವಾಗಿದ್ದು.? ಎಷ್ಟು ರೋಡ್‌ಷೋ ನಡೆಸಲಾಗಿದೆ..?  
ತುಷಾರ್ ಗಿರಿನಾಥ್: ಈ ಬಗ್ಗೆ ಸದ್ಯ ಮಾಹಿತಿ ಇಲ್ಲ (ಮಾಹಿತಿ ಸಂಗ್ರಹಿಸಿ‌ ತಿಳಿಸಲು ನ್ಯಾಯಧೀಶ  ಕೃಷ್ಣ ದೀಕ್ಷಿತ್   ಸೂಚನೆ)

ಅರ್ಜಿದಾರ ಅಮೃತೇಶ್ ಅವರಿಗೆ  ನ್ಯಾ.ಕೃಷ್ಣ ದೀಕ್ಷೀತ್ ಪ್ರಶ್ನೆ 
ನ್ಯಾಯಾಧೀಶ: ಯಾವಾಗಿನಿಂದ ರೋಡ್ ಶೋ ಆರಂಭ ಆಗಿದೆ. 
ಅಮೃತೇಶ್: ಏಪ್ರಿಲ್ 2 ನೇ ವಾರದಿಂದ ರಾಜ್ಯದ ಹಲವೆಡೆ ರೋಷ್ ಷೋ ಆರಂಭವಾಗಿದೆ.
ನ್ಯಾಯಾಧೀಶ: ಯಾಕೆ ನೀವು ಮೊದಲು ಅರ್ಜಿ ಸಲ್ಲಿಸದೇ ಈ ರೋಡ್‌ಷೋ ಮಾತ್ರ ಪ್ರಶ್ನಿಸುತ್ತಿದ್ದಿರಿ.? 
ಅಮೃತೇಶ್: ಮೊದಲು ಕೇಲವ 3ರಿಂದ 5 ಕಿಲೋಮೀಟರ್ ಮಾತ್ರ ರೋಡ್ ಇರುತ್ತಿದ್ದವು. ಈ ಬಾರಿ 36 ಕಿ.ಮೀ ರೋಡ್ ಇದೆ ಎಂದು ಮಾದ್ಯಮಗಳ ವರದಿ ಮಾಡಿವೆ. ನಿನ್ಮೆ ಈ ಬಗ್ಗೆ ವರದಿ ಮಾಡಿವೆ ಹೀಗಾಗಿ ನಿನ್ನೆ ಅರ್ಜಿ ಸಲ್ಲಿಸಿದ್ದೇನೆ. 
ನ್ಯಾಯಾಧೀಶ: ಈ ಬಗ್ಗೆ ಪಿಐಎಲ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಿ? 
ಅಮೃತೇಶ್: ಅರ್ಜಿಯಲ್ಲಿ ಪತ್ರಿಕೆಗಳ ಕಟ್ಟಿಂಗ್ ಗಳನ್ನ ಹಾಕಲಾಗಿದೆ. ರೋಡ್ ಷೋ ವೇಳೆ ಸಂಪೂರ್ಣ ವಾಗಿ ರೋಡ್ ಬಂದ್ ಮಾಡಲಾಗುತ್ತೆ.
ನ್ಯಾಯಾಧೀಶ: ಯಾವುದೇ ಪರ್ಯಾಯ ಮಾರ್ಗ ನೀಡಿಲ್ಲವೇ.? 
ಅಮೃತೇಶ್: 36 ಕಿಲೋಮೀಟರ್ ನಲ್ಲಿ 10 ಲಕ್ಷ ಜನ ಸೇರಿದ್ರೆ ಸಾಕಷ್ಟು ಸಮಸ್ಯೆ ಆಗಲಿದೆ. ಪರಿಸರ ಹಾಳು, ಹಿರಿಯರ ಆರೋಗ್ಯದ ಮೇಲೆ‌ ಸಮಸ್ಯೆ ಆಗಲಿದೆ.
ನ್ಯಾಯಾಧೀಶ: ಈವರೆಗೆ ಯಾವುದಾದರೂ ಹೈಕೋರ್ಟ್ ರೋಡ್ ಷೋಗೆ ತಡೆ ನೀಡಿದ ಉದಾಹರಣೆ ಇದೆಯಾ.?  
ಅಮೃತೇಶ್: ಇದು ಕೇವಲ ನನ್ನ ಧ್ವನಿ ಅಲ್ಲ, ಬೀದಿ ವ್ಯಾಪಾರಿಗಳು, ಕಾರ್ಮಿಕರ ಧ್ವನಿ.
ನ್ಯಾಯಾಧೀಶ: 1 ಕೀ.ಮಿ ಅಥವಾ 6 ಕಿ.ಮಿ ರೋಡ್ ಷೋ ಮಾಡಿದ್ರೆ ನಿಮ್ಮ‌ ತಕರಾರು ಇಲ್ವಾ.? 
ಅಮೃತೇಶ್: ಇಲ್ಲ. ಹೆಚ್ಚು ಸಮಯ ಹಾಗೂ ಹೆಚ್ಚು ದೂರದಿಂದ ಸಮಸ್ಯೆ ಆಗಲಿದೆ.
ನ್ಯಾಯಾಧೀಶ: ಜಡ್ಜ್, ಕೋರ್ಟ್ ಗಿಂತ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಅನುಭವಿಗಳು ಆಗಿರ್ತಾರೆ ಅಲ್ವಾ? ಅಧಿಕಾರಿಗಳು ಕಿಂಡರ್‌ ಗಾರ್ಡನ್ ನಿಂದ ಬಂದಿರಲ್ಲ, ಅವರೂ ಅನುಭವಿಗಳು ಇದ್ದಾರೆ. ಅಧಿಕಾರಿಗಳು ರಿಸ್ಕ್ ತಗೆದುಕೊಂಡು ಹೊಣೆ ವಹಿಸಿಕೊಂಡಿರುತ್ತಾರೆ.

ನ್ಯಾಯಾಧೀಶ: ರ್ಯಾಲಿಯಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳನ್ನ ಯಾವ ರೀತಿ ನಿಭಾಯಿಸುತ್ತೀರಿ.? 
ಸರ್ಕಾರದ ಪರ ವಕೀಲ: ಎಲ್ಲದಕ್ಕೂ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ.
ನ್ಯಾಯಾಧೀಶ: ರ್ಯಾಲಿಗಳನ್ನ ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ನಿಯಮಗಳಿವ್ಯಾ.? 
ಸರ್ಕಾರದ ಪರ ವಕೀಲ: ರ್ಯಾಲಿಗನ್ನ ಪ್ರತ್ಯೇಕ ವಿಷಯಗಳ ಮೇಲೆ ಕ್ರಮಕೊಳ್ಳಲಾಗುವುದು.

ನಾಳೆ ಪ್ರಧಾನಿ ಮೋದಿ ರೋಡ್‌ ಶೋ ಹಿನ್ನೆಲೆ: ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಪೊಲೀಸರಿಂದ

ಚುನಾವಣಾ ರ್ಯಾಲಿಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಹಾಗೂ ಸರ್ಕಾರ ಸೇರಿ ನಿಯಮ‌ ಮಾಡಿಕೊಳ್ಳಲು ಜಡ್ಜ್ ಕಿವಿಮಾತು ಹೇಳಿದರು. ರಾಜ್ಯಗಳಲ್ಲಿ 2517, ಬೆಂಗಳೂರಿನ ಲ್ಲಿ 371 ರ್ಯಾಲಿಗಳನ್ನ ನಡೆಲಾಗಿದೆ ಎಂದು  ಚುನಾವಣಾ ಆಯೋಗ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ರ್ಯಾಲಿ ವೇಳೆ ಎಲ್ಲಿಯೂ ಯಾವುದೇ ಅಹಿತಕರ ಘಟನೆ‌ ನಡೆದಿದೆಯೇ ಅಂತ ಘಟನೆಗಳು ನಡೆದರೆ ರಾಜ್ಯ ಯಾವ ರೀತಿ ರೆಡಿಯಾಗಿದೆ ಎಂದು ನ್ಯಾಯಾಲಯ ಕೇಳಿರುವ ಪ್ರಶ್ನೆಗೆ ಖುದ್ದು ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಉತ್ತರ ನೀಡಿ, ರ್ಯಾಲಿಗಳ ಸಂದರ್ಭದಲ್ಲಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ. ಯಾವುದೇ ಶಸ್ತ್ರಾಸ್ತ್ರ ಸೇರಜ ಆಯುಧ ಸಗಾಣೆ ಮಾಡುವಂತಿಲ್ಲ. ಪರ್ಯಾಯ ಮಾರ್ಗಗಳ ಸೂಚಿಸಲಾಗುವುದು, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಮಾಧ್ಯಮಗಳ ಮೂಲಕ ಜನರಿಗೆ ಜಾಗೃತಿ ನೀಡಲಾಗಿದೆ ಎಂದು ಕೋರ್ಟ್ ಗೆ ತಿಳಿಸಿದ್ದಾರೆ.

ಸಿದ್ದು ಪರ ಪ್ರಚಾರ ಚೆನ್ನಾಗಿ ಆಗಿದೆ; ಆದರೆ ಪ್ರಾಮೀಸ್ ಸೋಮಣ್ಣ ಸ್ಪರ್ಧಿಸಿರೋದು

ಒಂದು ವೇಳೆ ಅಹಿತಕರ ಘಟನೆ ನಡೆದರೆ ಹೇಗೆ ಪ್ರತ್ಯೇಕಿಸುತ್ತೀರಿ?  ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಎಲ್ಲಾ ರೀತಿಯಲ್ಲಿ ನಮ್ಮ ಇಲಾಖೆ ಸಮರ್ಥ ವಾಗಿದೆ ಎಂದು ಪ್ರತಾಪ್ ರೆಡ್ಡಿ ಉತ್ತರಿಸಿದ್ದಾರೆ. ಈ ವೇಳೆ ಕೋವಿಡ್ ಸಮಯದಲ್ಲಿ ಪೊಲೀಸ್ ಇಲಾಖೆ ಮಾಡಿದ ಕೆಲಸವನ್ನೂ  ನ್ಯಾ.ದೀಕ್ಷೀತ್ ಉಲ್ಲೆಖಿಸಿ ಪ್ರಶಂಶಿಸಿದ್ದಾರೆ. ಶಾಂತಿ ಕದಡಿದರೆ ಆಯೋಜಕರ ನೀಡಿದ್ದ ಬಾಂಡ್ ಸೀಜ್ ಮಾಡ್ತೀವಿ. ಸಫೀಷಿಯೆಂಟ್ ಪೋರ್ಸ್ ಇದೆ ಎಂದು ಉತ್ತರಿಸಿದ ಪ್ರತಾಪ್ ರೆಡ್ಡಿ

click me!