ಕಾಂಗ್ರೆಸ್‌ ದ್ವೇಷ ಸೃಷ್ಟಿ​ಸು​ತ್ತಿದೆ, ಎಚ್ಚ​ರಿಕೆ ಇರ​ಲಿ: ​ಹರತಾಳು ಹಾ​ಲಪ್ಪ

By Kannadaprabha News  |  First Published May 8, 2023, 8:10 PM IST

ಕಾಂಗ್ರೆಸ್‌ ಅಭ್ಯರ್ಥಿ ಕ್ಷೇತ್ರದಲ್ಲಿ ಪರಸ್ಪರ ದ್ವೇಷಾಸೂಯೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು ಯಾವುದೇ ಗಲಾಟೆಗೂ ಮುಂದಾಗಬಾರದು ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಚ್‌.ಹಾಲಪ್ಪ ಹೇಳಿ​ದರು.


ಸಾಗರ (ಮೇ.8) : ಕಾಂಗ್ರೆಸ್‌ ಅಭ್ಯರ್ಥಿ ಕ್ಷೇತ್ರದಲ್ಲಿ ಪರಸ್ಪರ ದ್ವೇಷಾಸೂಯೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು ಯಾವುದೇ ಗಲಾಟೆಗೂ ಮುಂದಾಗಬಾರದು ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಚ್‌.ಹಾಲಪ್ಪ ಹೇಳಿ​ದರು.

ಪಟ್ಟಣದಲ್ಲಿ ಸೋಮವಾರ ಬೃಹತ್‌ ರೋಡ್‌ ಶೋ(Roadshow) ನಡೆಸಿ ನಂತರ ಚಾಮರಾಜಪೇಟೆ ರಸ್ತೆಯಲ್ಲಿ ಬಿಜೆಪಿ ಪ್ರಚಾರ ಸಭೆ(BJP election campaign)ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಪರಸ್ಪರ ಜಗಳ ಹಚ್ಚಿಹಾಕಿ ಮೇ 13ರ ನಂತರ ಸೋತು ಬೆಂಗಳೂರು ಸೇರಿಕೊಳ್ಳುತ್ತಾರೆ. ಆಮೇಲೆ ಸಮಸ್ಯೆ ಎದುರಿಸುವವರು ಕಾರ್ಯಕರ್ತರು. ಇಂತಹ ಗಲಾಟೆ ಹಚ್ಚಿಹಾಕುವವರ ವಿರುದ್ಧ ಎರಡೂ ಪಕ್ಷದವರು ಎಚ್ಚರಿಕೆಯಿಂದ ಇರಬೇಕು. ನಮ್ಮ ಕಾರ್ಯಕರ್ತರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

Latest Videos

undefined

ಚಾಕು ದೊಣ್ಣೆ ಹಿಡಿದು ಪೊಲೀಸರ ಸಮ್ಮುಖದಲ್ಲೇ ಫ್ಯಾಮಿಲಿ ಫೈಟಿಂಗ್, ಮಕ್ಕಳ ಕಿರುಚಾಟ!

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಬಜರಂಗದಳ ನಿಷೇದ, ಗೋಹತ್ಯಾ ನಿಷೇಧ ಕಾಯ್ದೆ ವಾಪಾಸ್‌ ಪಡೆಯುವುದು ಕಾಂಗ್ರೆಸ್‌ ಅಜೆಂಡಾವಾಗಿದೆ. ಇದು ‘ವಿನಾಶಕಾಲೇ ವಿಪರೀತ ಬುದ್ಧಿ’ ಎನ್ನುವಂತಾಗಿದೆ. ನಾವು ಯಾವತ್ತೂ ದೇಶಭಕ್ತ, ಧರ್ಮಭಕ್ತ ಸಂಘಟನೆ ಬಜರಂಗದಳದ ಜೊತೆ ಇದ್ದೇವೆ. ಮತದಾರರು ಕಾಂಗ್ರೇಸ್‌ ಪಕ್ಷವನ್ನು ಸೋಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮಹಾಭಾರತದಲ್ಲಿ ಶ್ರೀಕೃಷ್ಣನ ಸೂಚನೆಯನ್ನು ಅರ್ಜುನ ಪಾಲಿಸಿದ್ದರಿಂದ ಪಾಂಡವರಿಗೆ ಗೆಲವಾಯಿತು. ಹಾಗೆಯೇ ಈ ಚುನಾವಣೆಯಲ್ಲಿ ಪಕ್ಷದ ಹಿರಿಯರು ನೀಡಿದ ಸೂಚನೆಯನ್ನು ಪಾಲಿಸಿದರೆ ನಮಗೆ ಗೆಲವು ನಿಶ್ಚಿತ. ಇಡೀ ರಾಜ್ಯದಲ್ಲಿ ಪಕ್ಷದ ಹಿರಿಯರಾದ ಯಡಿಯೂರಪ್ಪ ಅವರು ಶ್ರೀಕೃಷ್ಣನಂತೆ ನೀಡಿದ ಸೂಚನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಅರ್ಜುನನಾಗಿ ಪಾಲಿಸುತ್ತಿದ್ದಾರೆ. ಇಲ್ಲಿಯೂ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್‌ ಅವರು ನೀಡಿದ ಸೂಚನೆಯನ್ನು ನಾವೂ ಪಾಲಿಸಬೇಕು. ಎಲ್ಲರೂ ತಮ್ಮ ತಮ್ಮ ಬೂತ್‌ನಲ್ಲಿ ಗೆಲ್ಲುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ಮಾತನಾಡಿ, ಮತದಾನದ ದಿನದಂದು ಪ್ರತಿಯೊಂದು ಬೂತ್‌ನಲ್ಲಿ ಸಕ್ರಿಯವಾಗಿದ್ದು, ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು. ವಿಶ್ವಗುರುವಾದ ಮೋದಿಯನ್ನು ನಾವೆಲ್ಲ ಬೆಂಬಲಿಸಬೇಕು. ಜಗತ್ತಿನಲ್ಲಿ ಶಾಂತಿ ಕಾಪಾಡುವವರು ಮೋದಿ, ಕೊರೋನಾ ಕಾಟದಿಂದ ದೇಶ​ದ ಜನ​ರನ್ನು ಕಾಪಾಡಿದವರು ಮೋದಿ. ಇಂತಹ ಮೋದಿ ಅವರನ್ನು ಸೋಲಿಸಬೇಕು ಎಂದು ಸಂಚು ನಡೆಯುತ್ತಿದೆ. ಮೋದಿ ಅವರನ್ನು ಬೆಂಬಲಿಸಲು ಹಾಲಪ್ಪ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಬಜರಂಗದಳ ಬ್ಯಾನ್‌ ಮಾಡ್ತೇವೆ ಎಂದು ಕುಣಿತ್ತಿದ್ದ ಕಾಂಗ್ರೆಸ್ ವರಸೆ ಬದಲಿಸಿದೆ: ಓವೈಸಿ ಗರಂ

ಡಾ.ರಾಜನಂದಿನಿ ಕಾಗೋಡು, ರಾಕೇಶ್‌ ನೈನಿತಾಲ್‌, ಮಧುರಾ ಶಿವಾನಂದ್‌, ಲೋಕನಾಥ ಬಿಳಿಸಿರಿ, ಗಣೇಶಪ್ರಸಾದ್‌, ಆರ್‌.ಶ್ರೀನಿವಾಸ್‌ ಮೇಸ್ತಿ್ರ, ಹು.ಭಾ.ಅಶೋಕ್‌, ಸಂತೋಷ್‌ ಶೇಟ್‌, ಸತೀಶ್‌ ಕೆ., ಭರ್ಮಪ್ಪ ಅಂದಾಸುರ, ರೇವಪ್ಪ ಹೊಸಕೊಪ್ಪ ಇನ್ನಿತರರು ಹಾಜರಿದ್ದರು.

click me!