ಮೋದಿ ಬಂದ ಮೇಲಷ್ಟೇ ದೇಶ ಅಭಿವೃದ್ಧಿ ಆಗಿಲ್ಲ; ನಾನು ಶ್ರಮಿಸಿದ್ದೇನೆ: ಎಚ್‌ಡಿಕೆ

By Ravi JanekalFirst Published Feb 25, 2023, 2:10 PM IST
Highlights

ಹಾಸನ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಹೈವೋಲ್ಟೇಜ್ ಮಾಡಿದ್ದು ಮಾಧ್ಯಮದವರು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಚಿಕ್ಕಮಗಳೂರು (ಫೆ.25): ಹಾಸನ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಹೈವೋಲ್ಟೇಜ್ ಮಾಡಿದ್ದು ಮಾಧ್ಯಮದವರು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಹಾಸನ ಟಿಕೆಟ್ ಗೊಂದಲ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಾಸನ ಬಗ್ಗೆ ರಾಜ್ಯದಲ್ಲಿ ಭಾರೀ ಕುತೂಹಲ. ಇದನ್ನು ಹೈವೋಲ್ಟೇಜ್ ಮಾಡಿದವರು ಮಾಧ್ಯಮದವರು ಕಾರಣ. ನಮ್ಮ ಮಾಧ್ಯಮದವರು, ದಿನಕ್ಕೊಂದು ಸೆಗ್ಮೆಂಟ್ ಫಿಕ್ಸ್ ಮಾಡ್ತಾರೆ. ಆದರೆ ಹಾಸನ ಜಿಲ್ಲೆ ಮತ ಹಾಕೋರು ಬೇರೆ ಯೋಚನೆ ಮಾಡ್ತಿದ್ದಾರೆ ಎಂದರು.

Latest Videos

ಬಿಜೆಪಿ, ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದೀರಿ; ಈ ಬಾರಿ ಜೆಡಿ​ಎ​ಸ್‌ಗೆ ಪೂರ್ಣ ಬಹುಮತ ನೀಡಿ: ಎಚ್‌ಡಿಕೆ

ನಾಳೆ ಪಕ್ಷದ ಕಛೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರ(JDS workers meeting) ಸಭೆ ಕರೆದಿದ್ದೇನೆ. ಪಕ್ಷದ 300 ಕಾರ್ಯಕರ್ತರು ಸಭೆಯಲ್ಲಿ ಬರ್ತಾರೆ. ಹಾಸನ ಟಿಕೆಟ್(Hassan assembly ticket) ವಿಚಾರವಾಗಿ ಕಾರ್ಯಕರ್ತರೊಂದಿ ಮುಕ್ತವಾಗಿ ಚರ್ಚೆ ನಡೆಸುತ್ತೇನೆ. ಅವರು ಓಪನ್ ಆಗಿ ಮಾತಾಡುವುದಕ್ಕೆ ಹೆದರುತ್ತಾರೆ. ಅದಕ್ಕಾಗಿ ಹಾಸನ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸಿ ಗೊಂದಲಗಳು ಬಗೆಹರಿಸಿಕೊಳ್ಳುತ್ತೇವೆ ಎಂದರು.

ನಾಳೆ ನಡೆಯುವ ಸಭೆಯಲ್ಲಿ ನಮ್ಮ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತೇನೆ. ಯಾರಿಗೇ ಟಿಕೆಟ್ ಸಿಕ್ಕರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ.  ಯಾವುದೇ ಕಾರಣಕ್ಕೂ ಹಾಸನ ಜೆಡಿಎಸ್ ಸಂಘಟನೆ ಮೇಲೆ ಎಫೆಕ್ಟ್ ಆಗಬಾರದು ಅಂತ ಸಲಹೆ ನೀಡಿದ್ದೇನೆ ಎಂದರು.

ಬಿಜೆಪಿ ಅಭ್ಯರ್ಥಿ(BJP candidate) ಏನೇ ಹೇಳಲಿ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಎರಡು ವರ್ಷದ ಹಿಂದೆಯೇ ಹೇಳಿದ್ದೇನೆ ಬಿಜೆಪಿ ಅಭ್ಯರ್ಥಿ ವಿರುದ್ಧ ನಮ್ಮ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೇನೆ ಎಂದು. ನಾನು ಇಂದಿಗೂ ಆ ಮಾತಿಗೆ ಬದ್ಧವಾಗಿದ್ದೇನೆ ಎಂದು ಎಚ್‌ಡಿ ಕುಮಾರಸ್ವಾಮಿ(HD Kumaraswamy). ಈ ಬಾರಿ ಸಾಮಾನ್ಯ ಕಾರ್ಯಕರ್ತರನಿಗೆ ಟಿಕೆಟ್ ನೀಡ್ತಾರಾ ಕುಮಾರಸ್ವಾಮಿ? ಹಾಗಾದ್ರೆ ಭವಾನಿಗೆ ಟಿಕೆಟ್ ಸಿಗೋದು ಅನುಮಾನ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಈ ಬಿಜೆಪಿಯವರು ನೂರು ಸುಳ್ಳು ಹೇಳಿ ಮೂರು ಕೆಲಸ ಮಾಡ್ತಾರೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದ ಮೇಲೆ 'ಜನಾರ್ಧನ ರೆಡ್ಡಿ(Janardanareddy)ಯನ್ನ ನಾನು ನೋಡಿಕೊಳ್ಳುತ್ತೇನೆ' ಎಂದು ಅಮಿತ್ ಷಾ(Amit shah) ಯಾಕೆ ಹೇಳಿದ್ದಾರೆ? ಯಾವ ರೀತಿ ನೋಡಿಕೊಳ್ಳುತ್ತಾರೆ ಇಡಿ, ಸಿಬಿಐ ಬಿಟ್ಟು ನೋಡಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ರೈತರು ಕೊಟ್ಟ ಭೂಮಿಯಲ್ಲಿ ವಿಮಾನ ನಿಲ್ದಾಣ:

ಶಿವಮೊಗ್ಗ(Shivamogga)ದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೊಳ್ಳುತ್ತಿರುವ ವಿಮಾನ ನಿಲ್ದಾಣ(Kuvempu Airport inauguration) ವಿಚಾರ ಪ್ರಸ್ತಾಪಿಸಿದ ಎಚ್‌ಡಿ ಕುಮಾರಸ್ವಾಮಿಯವರು,  ಇದು ನಾಡಿನ ರೈತರು ಕೊಟ್ಟ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಇದು ಬಿಜೆಪಿ ಕೊಡುಗೆಯಲ್ಲ ಎಂದರು. 

ಪ್ರಧಾನಿ ಬಂದ ಮೇಲಷ್ಟೇ ದೇಶ ಅಭಿವೃದ್ಧಿ ಆಗಿಲ್ಲ: 

ಮೈಸೂರು-ಬೆಂಗಳೂರು ರಸ್ತೆ(Mysuru-Bengaluru expressway) ಧರ್ಮಕ್ಕೆ ಕೊಟ್ಟಿಲ್ಲ. ನಾನು 14 ತಿಂಗಳಲ್ಲಿ 9ಮೀಟಿಂಗ್ ಮಾಡಿದ್ದೇನೆ. ಈ ರಸ್ತೆ ನಿರ್ಮಾಣಕ್ಕೆ ರೈತರ ಜೊತೆ ನಾನು 9  ಸಭೆ ಮಾಡಿದ್ದೇನೆ. ಆ ರಸ್ತೆ ನಿರ್ಮಾಣಕ್ಕೆ ನಾನು ಸಹ ಶ್ರಮ ಪಟ್ಟಿರುವೆ. ಆಗ ನಾನು ಏನು ಮಾಡಿದೆ ಎಂಬುದು ಜನಕ್ಕೆ ಗೊತ್ತು, ರೇವಣ್ಣನವರ ಕೆಲಸವೂ ಗೊತ್ತು ಎಂದರು.

ಪ್ರಧಾನಿ ಮೋದಿ(PM Narendra Modi) ಬಂದ ಮೇಲಷ್ಟೆ ದೇಶ ಅಭಿವೃದ್ದಿ ಆಗಿಲ್ಲ ನಾವು ಹುಟ್ಟುವ ಮುಂಚೆಯೇ ಅಭಿವೃದ್ದಿ ಆಗಿದೆ. ನೆಹರೂ ಕಾಲದಿಂದಲೂ ದೇಶ ಅಭಿವೃದ್ಧಿ ಯಾಗಿದೆ. ಪಂಚ ವಾರ್ಷಿಕ ಯೋಜನೆಗಳಂಥ ಕೆಲಸಗಳಿಂದ ದೇಶ ಅಭಿವೃದ್ಧಿ ಆಗಿದೆ. ಆದರೆ ಆಗ ಇದು ಸವಾಲಿನದ್ದಾಗಿತ್ತು ಎಂದರು.

ಗುಜರಾತ ಮಾದರಿ ಅಭಿವೃದ್ಧಿ(Gujarat model development) ಮಾಡ್ತೇವೆ ಅಂತಾರೆ. ಗುಜರಾತ್ ಹೋಗಿ ನೋಡಿ ಅಲ್ಲಿನ ಪರಿಸ್ಥಿರಿ ಹೇಗಿದೆ ಅಂತಾ ಗೊತ್ತಾಗುತ್ತೆ. ಗುಜರಾತ್ ಫೈಲ್ಸ್(Gujarat files) ಓದಿದ್ದೇನೆ, ಅವರನ್ನ ಹೇಗೆ ಓಡಿಸಿದರೂ ಅಂತಾ ಗೊತ್ತಿದೆ 

ಶೃಂಗೇರಿ ಶ್ರೀಗಳ ದರ್ಶನ ಮಾಡಿದ ಕುಮಾರಸ್ವಾಮಿ:

ಬ್ರಾಹ್ಮಣ ಸಿಎಂ(Brahmin CM) ಹೇಳಿಕೆ ನೀಡಿದ ಬಳಿಕ ಮೊದಲ ಬಾರಿ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿದ ಎಚ್‌ಡಿ ಕುಮಾರಸ್ವಾಮಿ ಬಳಿಕ ಶ್ರೀಗಳೊಂದಿಗೆ ಹತ್ತು ನಿಮಿಷ ಮಾತುಕತೆ ನಡೆಸಿದರು. ಬಳಿಕ ಚರ್ಚೆ ಬಳಿಕ ವೈಕುಂಠಪುರಕ್ಕೆ ತೆರಳಿದ ಕುಮಾರಸ್ವಾಮಿ

 ಹತ್ತು ನಿಮಿಷದ ಚರ್ಚೆ ವೇಳೆ ಬ್ರಾಹ್ಮಣ ಸಿಎಂ ಹೇಳಿಕೆ ಬಗ್ಗೆ ಸಮಜಾಯಿಷಿ ನೀಡಿದ್ರಾ ಎಚ್‌ಡಿಕೆ?

 ಮುಂದಿನ ಚುನಾವಣೆಯಲ್ಲಿ(Karnataka Assembly election) ಬಿಎಸ್‌ವೈ(BS Yadiyurappa) 120 ಸ್ಥಾನ ಗೆಲ್ಲುತ್ತೇವೆ ಎಂದಿದ್ದಾರೆ. ಕೆಜೆಪಿ ಪಕ್ಷ ಕಟ್ಟಿದಾಗ ಜೀವ ಇರೋ ವರೆಗೂ ಬಿಜೆಪಿ ಹೋಗಲ್ಲಅಂದಿದ್ರು. ಈಗ ಜೀವ ಇರೋವರೆಗೆ ಬಿಜೆಪಿ ಅಂತಿದ್ದಾರೆ. ಈಗ ಜ್ಞಾನೋದಯ ಆಗಿರಬಹುದು ಎಂದು ಲೇವಡಿ ಮಾಡಿದರು.

 

Karnataka Election 2023: ಅಮಿತ್‌ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಜೆಡಿಎಸ್ ಮೊದಲ ಪಟ್ಟಿ ಗೊಂದಲ ಇಲ್ಲ. ಆ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಯುತ್ತಿವೆ. ಬಿಜೆಪಿ-ಕಾಂಗ್ರೆಸ್ ಪಟ್ಟಿಯೇ ಬಿಡುಗಡೆ ಆಗಿಲ್ಲ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪರ ಅಲೆ ಇದೆ. ನಮ್ಮ ಪಕ್ಷದ ಬಗ್ಗೆ ಯಾರು ಏನೇ ಮಾತನಾಡಿದರೂ ಈ ಭಾರಿ‌ ನಡೆಯಲ್ಲ. ಈ ಜನತೆಯ ಬಿ ಟೀಂ ನಾವು. ಮುಂದಿನ ಚುನಾವಣೆಯಲ್ಲಿ 123 ಗುರಿ ಮುಟ್ಟುತ್ತೇವೆ. ಬಹುಮತದಿಂದ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!