ಹಾಸನದಲ್ಲಿ ಭವಾನಿಗೆ ಟಕೆಟ್‌ ಸಿಗೋದು ಡೌಟು: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಎಂದ ಕುಮಾರಸ್ವಾಮಿ

Published : Feb 25, 2023, 01:09 PM ISTUpdated : Feb 25, 2023, 01:10 PM IST
ಹಾಸನದಲ್ಲಿ ಭವಾನಿಗೆ ಟಕೆಟ್‌ ಸಿಗೋದು ಡೌಟು: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಎಂದ ಕುಮಾರಸ್ವಾಮಿ

ಸಾರಾಂಶ

ಹಾಸನದಲ್ಲಿ ಜೆಡಿಎಸ್‌ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದಾಗು 2 ವರ್ಷದ ಹಿಂದೆಯೇ ಸವಾಲು ಹಾಕಿದ್ದೇನೆ. ಈ ಮಾತಿಗೆ ನಾನು ಬದ್ಧವಾಗಿದ್ದೇನೆ. ಹೀಗಾಗಿ, ಭವಾನಿಗೆ ಟಿಕೆಟ್‌ ಸಿಗುವುದು ಡೌಟು.

ಚಿಕ್ಕಮಗಳೂರು (ಫೆ.25): ಹಾಸನದಲ್ಲಿ ಜೆಡಿಎಸ್‌ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದಾಗು 2 ವರ್ಷದ ಹಿಂದೆಯೇ ಸವಾಲು ಹಾಕಿದ್ದೇನೆ. ಈ ಮಾತಿಗೆ ನಾನು ಬದ್ಧವಾಗಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಭವಾನಿ ಅವರಿಗೆ ಸಿಗುವುದು ಡೌಟ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾಧ್ಯಮಗಳು ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ದಿನ್ಕೊಂದು ಸೇಗ್ಮೆಂಟ್‌ ಇಟ್ಟುಕೊಂಡು ಜನರಿಗೆ ಸುದ್ದಿ ಪ್ರಸಾರ ಮಾಡುವ ಮೂಲಕ ಭಾರಿ ಹೋಲ್ಟೇಜ್‌ ವಿಧಾನಸಭಾ ಕ್ಚೇತ್ರವನ್ನಾಗಿ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮತದಾರರು ಬೇರೊಂದು ಯೋಚನೆಯನ್ನು ಆರಂಭಿಸಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿದ್ದಾರೆ. ಅವರು ಏನೇ ಹೇಳಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡು ವರ್ಷಗಳ ಹಿಂದೆಯೇ ಸವಾಲು ಹಾಕಿದಂತ ಜೆಡಿಎಸ್ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವುದಾಗಿ ಹೇಳಿದ್ದೇನೆ. ಈ ಮಾತಿಗೆ ನಾನು ಬದ್ಧವಾಗಿದ್ದೇನೆ ಎಂದು ಹೇಳಿದರು.

ಸಿಂ'ಹಾಸನ' ಅಖಾಡಕ್ಕೆ ಭವಾನಿ ರೇವಣ್ಣ ಎಂಟ್ರಿ: ಟಿಕೆಟ್‌ ಫೈನಲ್‌'ಗೂ ಮುನ್ನ ಭರ್ಜರಿ ಪ್ರಚಾರ

ಜಿಲ್ಲಾ ಕಾರ್ಯಕರ್ತರೊಂದಿಗೆ ಚರ್ಚೆ: ಹಾಸನದ ಬಗ್ಗೆ ಟಿಕೆಟ್‌ ನೀಡುವ ವಿಚಾರವಾಗಿ ನಾಳೆ ಜಿಲ್ಲೆಯ 300ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದೇನೆ. ಆದರೆ, ಕಾರ್ಯಕರ್ತರು ಹೆದರಿಕೆಯಿಂದ ಮಾತನಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಾಳೆ ಮುಕ್ತವಾಗಿ ಪ್ರಮುಖರನ್ನು ಮಾತ್ರ ಚರ್ಚೆಗೆ ಕರೆದಿದ್ದು, ಟಿಕೆಟ್‌ ನೀಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ನಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವ ಮೂಲಕ ಹಾಸನದಲ್ಲಿ ಪಕ್ಷದ ಸಂಘಟನೆ ಬಗ್ಗೆ ಎಫೆಕ್ಟ್‌ ಆಗಬಾರದು ಎಂದು ಸಲಹೆಯನ್ನೂ ಮನೆಯಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ಎಕ್ಸ್‌ಪ್ರೆಸ್‌ ವೇ ಅಭಿವೃದ್ಧಿಯಲ್ಲಿ ನನ್ನ ಶ್ರಮವೂ ಇದೆ:  ಕೇಂದ್ರ ಸರ್ಕಾರ ಮೈಸೂರು-ಬೆಂಗಳೂರು ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ. ಈ ಎಕ್ಸ್‌ಪ್ರೆಸ್‌ ವೇ ಕುರಿತಾಗಿ ನಾನು 14 ತಿಂಗಲ್ಲಿ ರೈತರೊಂದಿಗೆ 9ಮೀಟಿಂಗ್ ಮಾಡಿದ್ದೇನೆ. ಆಗ ನಾನು ಏನು ಮಾಡಿದೆ ಜನಕ್ಕೆ ಗೊತ್ತು. ರೇವಣ್ಣನ ಕೆಲಸವೂ ಗೊತ್ತು. ರಸ್ತೆಯ ಅಭಿವೃದ್ಧಿಯಲ್ಲಿ ನನ್ನ ಶ್ರಮವೂ ಅಗಾಧವಾಗಿದೆ. ಪ್ರಧಾನಿ ಮೋದಿ ಬಂದ ಮೇಲಷ್ಟೆ ದೇಶ ಅಭಿವೃದ್ದಿ ಆಗಿಲ್ಲ. ನಾವು ಹುಟ್ಟುವ ಮುಂಚೆಯೇ ಅಭಿವೃದ್ದಿ ಆಗಿದೆ. ನೆಹರೂ ಕಾಲದಲ್ಲಿ ದೇಶದ ಅಭಿವೃದ್ಧಿ ಸವಾಲಾಗಿತ್ತು. ಗುಜರಾತ್ ಹೋಗಿ ನೋಡಿ. ಅಲ್ಲಿನಪರಿಸ್ಥಿರಿ ಹೇಗಿದೆ ಎಂದು ತಿಳಿಯುತ್ತದೆ. ನಾನು ಕೂಡ ಗುಜರಾತ್ ಫೈಲ್ಸ್ ಓದಿದ್ದೇನೆ. ಅಲ್ಲಿ ಅವರನ್ನ ಹೇಗೆ ಓಡಿಸಿದ್ದಾರೆ ಎಂಬುದು ನನಗೂ ಗೊತ್ತು ಎಂದು ಹೇಳಿದರು.

ಜನಾರ್ಧನರೆಡ್ಡಿಯನ್ನು ಅಮಿತ್ ಶಾ ಯಾವ ರೀತಿ ನೋಡ್ಕೋತಾರೆ? : ದೇಶದಲ್ಲಿ ಬಿಜೆಪಿಯರು 100 ಸುಳ್ಳು ಹೇಳಿ 3 ಕೆಲಸ ಮಾಡುತ್ತಾರೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದ ಮೇಲೆ ಅದನ್ನು ಮಾಡದೇ ಕಮೀಷನ್‌ ಪಡೆಯುತ್ತಿದ್ದಾರೆ. ಇನ್ನು ಜನಾರ್ಧನ ರೆಡ್ಡಿಯನ್ನ ನಾನು ನೋಡಿಕೊಳ್ಳುತ್ತೇನೆ ಎಂದು ಅಮಿತ್ ಷಾ ಹೇಳಿದ್ದಾರೆ. ಯಾವ ರೀತಿ ನೋಡಿಕೊಳ್ಳುತ್ತಾರೆ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರ ಅಪರಾಧ ವಿಭಾಗ (ಸಿಬಿಐ) ಬಿಟ್ಟು ನೋಡಿಕೊಳ್ಳುತ್ತಾರೆ ಎಂದು ಹೇಳಲಿ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಾಗುತ್ತಿದೆ. ಆದರೆ, ಇದು ನಾಡಿನ ರೈತರು ಕೊಟ್ಟ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆಯೇ ಹೊರತು ಬಿಜೆಪಿ ಕೊಡುಗೆಯಲ್ಲ.

ಹಾಸನದಲ್ಲಿ ಭವಾನಿ ರೇವಣ್ಣ ಪ್ರಚಾರ: ಮನೆ ದೇವರಿಗೆ ವಿಶೇಷ ಪೂಜೆ

ಅಮಿತ್ ಶಾ ವಸ್ತುಸ್ಥಿತಿ ಆಧಾರದಲ್ಲಿ ಮಾತನಾಡಬೇಕು: ಅಮಿತ್ ಶಾ ರಾಜ್ಯಕ್ಕೆ ಪದೇ ಪದೆ ರಾಜ್ಯ ಭೇಟಿ ನೀಡುತ್ತಿದ್ದು, ರಾಜ್ಯದ ವಸ್ತುಸ್ಥಿತಿಯ ಆಧಾರದಲ್ಲಿ ಮಾತನಾಡಬೇಕು. ಕರ್ನಾಟಕದ ರಾಜಕೀಯವೇ ಬೇರೆಯಾಗಿದೆ. ಕನ್ನಡಿಗರನ್ನು ಮೆಚ್ವಿಸೋದು ಕಷ್ಟ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡ್ತೀವಿ ಅಂತಾರೆ. ಕಳೆದ 3 ವರ್ಷದ ಸರ್ಕಾರ ಭ್ರಷ್ಟಚಾರದಿಂದ ಕೂಡಿತ್ತಾ.? ಕಾಂಗ್ರೆಸ್ -ಜೆಡಿಎಸ್ ಮೈತ್ತಿ ಸರ್ಕಾರದಲ್ಲಿ ಭ್ರಷ್ಟಚಾರ ಎಂದಿದ್ದಾರೆ. ಸರ್ಕಾರ ತೆಗೆದಾಗ ಯಾವ ಹಣ ಉಪಯೋಗ ಮಾಡಿದ್ದೀರಿ.? ಬೈ ಎಲೆಕ್ಷನ್ ಮಾಡುದ್ರಲ್ಲಾ ಎಲ್ಲಿಯಾ ದುಡ್ಡು ಅದು.? ಆ ಉಪಚುನಾಬಣೆ ಹೇಗೆ ನಡೆಯಿತು ಅನ್ನೋದು ಜಗಜ್ಜಾಹೀರು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!