Karnataka election 2023: ಇಲ್ಲಿದೆ ಉಡುಪಿ ವಿಧಾನಸಭಾ ಚುನಾವಣಾ ವಿವರ

By Ravi Janekal  |  First Published Mar 30, 2023, 3:58 PM IST

ಜಿಲ್ಲೆಯಲ್ಲಿ ಒಟ್ಟು 10,29,678 ಮತದಾರರಿದ್ದು, ಅದರಲ್ಲಿ 18 ಮತ್ತು 19 ವರ್ಷದ 17,927 ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಲು ಉತ್ಸುಕರಾಗಿದ್ದಾರೆ. 


ಉಡುಪಿ (ಮಾ.30) : ಜಿಲ್ಲೆಯಲ್ಲಿ ಒಟ್ಟು 10,29,678 ಮತದಾರರಿದ್ದು, ಅದರಲ್ಲಿ 18 ಮತ್ತು 19 ವರ್ಷದ 17,927 ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಲು ಉತ್ಸುಕರಾಗಿದ್ದಾರೆ. 

ಬುಧವಾರ ಸಂಜೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಈ ಬಗ್ಗೆ ಮಾಹಿತಿಯನ್ನು ವಿವರಿಸಿದರು. 
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯವಸ್ಥಿತ ಮತದಾನಕ್ಕೆ ಸಿದ್ದತೆ ನಡೆಸಲಾಗಿದ್ದು, ಐದು ಕ್ಷೇತ್ರಗಳ ತಾಲೂಕು ಆಡಳಿತ ಸೌಧದಲ್ಲಿ ನಾಮಪತ್ರ ಸ್ವೀಕರಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣಾಧಿಕಾರಿಗಳಾಗಿ ಬೈಂದೂರು ಜಗದೀಶ್ ಗಂಗಣ್ಣನವರ್, ಕುಂದಾಪುರ ರಶ್ಮಿ.ಎಸ್.ಆರ್, ಉಡುಪಿ ಸೀತಾ ಎಮ್.ಸಿ, ಕಾಪು ಪಿ.ಕೆ.ಬಿನೋಯಿ, ಕಾರ್ಕಳ ಮದನ್ ಮೋಹನ್ ಸಿ ಅವರನ್ನು ನೇಮಿಸಲಾಗಿದೆ. 

Tap to resize

Latest Videos

undefined

ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ; ಮುಂದಿನ ದಿನಗಳಲ್ಲಿ ಹೆಚ್ಚಿನ ನ್ಯಾಯ ಸಿಗಲಿದೆ : ಪೂಜಾರಿ

ಪ್ರತಿ ವಿಧಾನ ಸಭಾ ಕ್ಷೇತ್ರ(Assembly constituency)ವಾರು ಫ್ಲೈಯಿಂಗ್ ಸ್ಕ್ಯಾಡ್, ಸ್ಟ್ಯಾಟಿಕ್ ಸರ್ವೈವಲೆನ್ಸ್ ಟೀಮ್, ವಿಡಿಯೋ ಸರ್ವೈವಲೆನ್ಸ್ ಟೀಮ್ ಗಳನ್ನು ರಚಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ತಂಡಗಳು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ಸಾರ್ವಜನರು ದೂರು ನೀಡಿದರೇ, ತಕ್ಷಣ ಕ್ರಮ ವಹಿಸುತ್ತದೆ. 

ಜಿಲ್ಲಾ ಮಟ್ಟದ ಎಮ್.ಸಿ.ಸಿ ನೋಡೆಲ್ ಅಧಿಕಾರಿ ಜಿ.ಪಂ ಸಿಇಓ ಪ್ರಸನ್ನ ಹೆಚ್ ಕಾರ್ಯನಿರ್ವಹಿಸಲಿದ್ದು, ಐದು ವಿಧಾನಸಭಾ ಕ್ಷೇತ್ರದ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಯಾ ವಿಧಾನಸಭಾಕ್ಷೇತ್ರದ ಎಮ್.ಸಿ.ಸಿ ನೋಡೆಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬೈಂದೂರು ಭಾರತಿ, ಕುಂದಾಪುರ ಮಹೇಶ್, ಉಡುಪಿ ವಿಜಯಾ, ಕಾಪು ನವೀನ್, ಕಾರ್ಕಳ ಗುರುದತ್ ಎಮ್.ಎನ್ ನೊಡೆಲ್ ಅಧಿಕಾರಿಗಳಾಗಿದ್ದಾರೆ. 

ಚುನಾವಣೆಯ ಕುರಿತಾಗಿ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, 1950 ಟೋಲ್ ಫ್ರೀ ನಂಬರ್ ಅಥವಾ ( 0820 - 2574991) ಗೆ ಕರೆ ಮಾಡಿ ದೂರು ನೀಡಬಹುದು. ಇದು ದಿನದ 24 ಗಂಟೆಯೂ ಕಾರ್ಯಚರಿಸುತ್ತಿರುತ್ತದೆ. ಚುನಾವಣೆಗೆ ಸಂಭಂದಿಸಿದ ಮಾಹಿತಿಯನ್ನು ಈ ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿದೆ. 

80 ವರ್ಷ ಮೇಲ್ಪಟ್ಟ ಮತದಾರರು ಬೈಂದೂರು 5,865, ಕುಂದಾಪುರ 6,209, ಉಡುಪಿ 7,827, ಕಾಪು 5,778, ಕಾರ್ಕಳ 5,589 ಒಟ್ಟು 31,268 ಇದ್ದಾರೆ. ಇವರಿಗೆ ಅಂಚೆ ಮೂಲಕ ಮತದಾನ ನಡೆಸಲು ಅವಕಾಶವನ್ನು ಕಲ್ಪಿಸಲಾಗಿದೆ. ಬಿ.ಎಲ್.ಓ ಅವರ ಮುಖಾಂತರ 80 ವರ್ಷ ಮೇಲ್ಪಟ್ಟ ಎಲ್ಲರಿಗೂ ಫಾರ್ಮ್ 12 ಅನ್ನು ನೀಡುತ್ತೇವೆ. ಅಂಚೆ ಮತದಾನ ಇಚ್ಚಿಸುವವರು ಅರ್ಜಿಯನ್ನು ಭರ್ತಿ ಮಾಡಿ ನೀಡಬೇಕು. ಅಥವಾ ಮತದಾನಕ್ಕೆ ಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸುವುದಾದರೇ ಅದಕ್ಕೂ ವ್ಯವಸ್ಥೆಯನ್ನು ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. 

ಮತಗಟ್ಟೆಗಳ ವಿವರ 

  • ಬೈಂದೂರು 246 
  • ಕುಂದಾಪುರ 222
  • ಉಡುಪಿ 226
  • ಕಾಪು 208
  • ಕಾರ್ಕಳ 209

ಒಟ್ಟು 1,111 ಮತಗಟ್ಟೆಗಳಿವೆ. 

ಸಂಪೂರ್ಣ ಯುವಕರ ಮತಗಟ್ಟೆ, ಮಹಿಳಾ ಮತಗಟ್ಟೆ ಹೀಗೆ ವಿಶೇಷ ಮತಗಟ್ಟೆಗಳನ್ನು ತೆರೆಯಲು ಸಿದ್ದತೆ ನಡೆಸಿದ್ದು, ಯೋಜನೆ ರೂಪುರೇಷೆ ಪೂರ್ಣಗೊಂಡ ನಂತರ ಮಾಹಿತಿ ನೀಡುತ್ತೇವೆ ಎಂದರು. 

 

ಯುವಕರು ಪ್ರಜ್ಞಾಪ್ರಭುತ್ವದಲ್ಲಿ ನಂಬಿಕೆ ಬೆಳೆಸಿಕೊಂಡು ಹಕ್ಕು ಚಲಾಯಿಸಬೇಕು: ಅಣ್ಣಾಮಲೈ

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾತನಾಡಿ, ಚುನಾವಣಾ ಸಂಭಂದ ಜಿಲ್ಲೆಯಾದ್ಯಂತ ಒಟ್ಟು 17 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಕೆಲವು ಬಾರಿ ವಿಶೇಷ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ತಪಾಸಣೆ ನಡೆಸಲು ಇಲಾಖೆ ಸಿದ್ದವಾಗಿದೆ. ಕಳೆದ ಎರಡು ವಾರಗಳಿಂದ ಒಟ್ಟು ನಾಲ್ಕು ಪ್ರಕರಣ ದಾಖಲಿಸಿ 42 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿದ್ದೇವೆ. 5,500 ಕ್ಕು ಹೆಚ್ಚು ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಓ ಪ್ರಸನ್ನ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಉಪಸ್ಥಿತರಿದ್ದರು. 

ಮತದಾರರ ವಿವರ 

ಬೈಂದೂರು

ಪುರುಷ 1,13,758

ಮಹಿಳೆ 1,18,962

ಒಟ್ಟು 2,32,723


ಕುಂದಾಪುರ 

ಪುರುಷ 99,577
ಮಹಿಳೆ 1,07,625
ಒಟ್ಟು 2,07,204


ಉಡುಪಿ

ಪುರುಷ 1,03,704
ಮಹಿಳೆ 1,10,945
ಒಟ್ಟು 2,14,650

ಕಾಪು

ಪುರುಷ  89,444
ಮಹಿಳೆ 97,233
ಒಟ್ಟು 1,86,681

ಕಾರ್ಕಳ

ಪುರುಷ 90,380
ಮಹಿಳೆ 98,030
ಒಟ್ಟು 1,88,410


ಜಿಲ್ಲೆಯಲ್ಲಿ ಒಟ್ಟು ಮತದಾರರು 

ಪುರುಷ 4,96,863
ಮಹಿಳೆ 5,32,795
ಒಟ್ಟು 10,29,678

ಯುವ ಮತದಾರರು (18-19 ವರ್ಷದವರು)

ಬೈಂದೂರು 3,672
ಕುಂದಾಪುರ 3,277
ಉಡುಪಿ 3,437
ಕಾಪು 3,560
ಕಾರ್ಕಳ 3,981
ಜಿಲ್ಲೆಯಲ್ಲಿ ಒಟ್ಟು 17,927

click me!