ಏ.5ಕ್ಕೆ ಕೋಲಾರದಿಂದ ಕಾಂಗ್ರೆಸ್‌ ಸತ್ಯಮೇವ ಜಯತೇ ಹೋರಾಟ

By Kannadaprabha News  |  First Published Mar 30, 2023, 1:24 PM IST

ಏಪ್ರಿಲ್‌ 5ರಂದು ರಾಹುಲ್‌ ಗಾಂಧಿ ಅವರು ಕೋಲಾರಕ್ಕೆ ಬಂದು ಗಾಂಧೀಜಿ ಅವರ ಮೂಲ ಮಂತ್ರವಾದ ‘ಸತ್ಯಮೇವ ಜಯತೆ’ ಹೋರಾಟ ಆರಂಭಿಸಲಿದ್ದಾರೆ. ದೇಶದ ಉದ್ದಗಲಕ್ಕೂ ನಡೆಯುವ ಈ ಹೋರಾಟವನ್ನು ಕೋಲಾರದಿಂದಲೇ ಆರಂಭಿಸಬೇಕೆಂಬ ನಮ್ಮ ಮನವಿಯಂತೆ ಅವರು ಕೋಲಾರಕ್ಕೆ ಆಗಮಿಸುತ್ತಿದ್ದಾರೆ: ಡಿಕೆಶಿ 


ಬೆಂಗಳೂರು(ಮಾ.30):  ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ‘ಸತ್ಯಮೇವ ಜಯತೆ ಹೋರಾಟ’ ಏ.5ರಂದು ಕೋಲಾರದಿಂದ ಶುರುವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರು ಕೋಲಾರದಲ್ಲಿ ನೀರವ್‌ ಮೋದಿ ಹಾಗೂ ಲಲಿತ್‌ ಮೋದಿಯ ಕಳ್ಳತನ, ಅವರನ್ನು ಬೆಂಬಲಿಸಿದ್ದ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಇದಕ್ಕಾಗಿ ಅವರಿಗೆ ಅನ್ಯಾಯವಾಗಿ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಕಾನೂನು ಬಾಹಿರವಾಗಿ ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ.

Latest Videos

undefined

ಕಾಂಗ್ರೆಸ್ಸಿಗರೇ, ಫೋನಲ್ಲಿ ಮಾತಾಡುವಾಗ ಎಚ್ಚರ: ಬಿಜೆಪಿಗರು ರೆಕಾರ್ಡ್ ಮಾಡಿಕೊಂಡು ಸಿಕ್ಕಿಸ್ತಾರೆ!

ಹೀಗಾಗಿ ಏಪ್ರಿಲ್‌ 5ರಂದು ರಾಹುಲ್‌ ಗಾಂಧಿ ಅವರು ಕೋಲಾರಕ್ಕೆ ಬಂದು ಗಾಂಧೀಜಿ ಅವರ ಮೂಲ ಮಂತ್ರವಾದ ‘ಸತ್ಯಮೇವ ಜಯತೆ’ ಹೋರಾಟ ಆರಂಭಿಸಲಿದ್ದಾರೆ. ದೇಶದ ಉದ್ದಗಲಕ್ಕೂ ನಡೆಯುವ ಈ ಹೋರಾಟವನ್ನು ಕೋಲಾರದಿಂದಲೇ ಆರಂಭಿಸಬೇಕೆಂಬ ನಮ್ಮ ಮನವಿಯಂತೆ ಅವರು ಕೋಲಾರಕ್ಕೆ ಆಗಮಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದ್ದರೋ ಅದೇ ಭೂಮಿಯಿಂದ ಮತ್ತೆ ಪ್ರಜಾಪ್ರಭುತ್ವ ಉಳಿಸುವ, ರಾಜ್ಯ ಹಾಗೂ ದೇಶದಲ್ಲಿ ಹೊಸ ಬದಲಾವಣೆ ಗಾಳಿ ಬೀಸಲು ಹೋರಾಟ ಮಾಡಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ರಾಹುಲ್‌ ಗಾಂಧಿ ಅವರು ದೇಶದಾದ್ಯಂತ ಪಾದಯಾತ್ರೆ ಮಾಡಿ ಜನರ ಮನ ಗೆದ್ದಿರುವುದಕ್ಕೆ ಬಿಜೆಪಿಯವರು ಈ ಸ್ಥಿತಿ ತಂದಿದ್ದಾರೆ. ರಾಹುಲ್‌ಗಾಂಧಿ ಅವರ ಹೋರಾಟದಿಂದ ಬಿಜೆಪಿಯವರು ಭಯಭೀತರಾಗಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರಿಗೆ ಹೋರಾಟದ ಮೂಲಕ ತಕ್ಕ ಪಾಠ ಕಲಿಸಲಾಗುವುದು ಎಂದರು.

click me!