ನೀತಿ ಸಂಹಿತೆ ಹಿನ್ನೆಲೆ ತರಾತುರಿ ಉದ್ಘಾಟನೆ: ಶಾಸಕ ದಢೇಸೂಗೂರು ಜತೆ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

By Kannadaprabha News  |  First Published Mar 30, 2023, 1:27 PM IST

ಕನಕಗಿರಿ ಸಮೀಪ ಭಾನುವಾರ ರೈಸ್‌ ಟೆಕ್ನಾಲಜಿ ಪಾರ್ಕ್ ಕಚೇರಿಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುವ ವೇಳೆ ಶಾಸಕ ಬಸವರಾಜ ದಢೇಸೂಗೂರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು.


ನವಲಿ (ಮಾ.30) : ಕನಕಗಿರಿ ಸಮೀಪ ಭಾನುವಾರ ರೈಸ್‌ ಟೆಕ್ನಾಲಜಿ ಪಾರ್ಕ್ ಕಚೇರಿಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುವ ವೇಳೆ ಶಾಸಕ ಬಸವರಾಜ ದಢೇಸೂಗೂರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು.

ಜಿಲ್ಲೆಯ ಕನಕಗಿರಿ(Kanakagiri) ತಾಲೂಕಿನ ರೈಸ್‌ ಟೆಕ್ನಾಲಜಿ ಪಾರ್ಕ್(Rice Technology Park) ಕಚೇರಿ ಆವರಣದಲ್ಲಿ ಭಾನುವಾರ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂದಿದ್ದ ವೇಳೆ ಶಾಸಕ ಬಸವರಾಜ ದಢೇಸೂಗೂರು(Basavaraj dadhesuguru MLA) ಹಾಗೂ ಕಾಂಗ್ರೆಸ್‌ ಕಾರ್ಯಕರ್ತ(Congress workers)ರ ನಡುವೆ ಜಟಾಪಟಿ ನಡೆದಿದೆ.

Tap to resize

Latest Videos

undefined

ಹಾಲಪ್ಪ ಆಚಾರ್‌ಗೆ ಮತ್ತೊಮ್ಮೆ ಟಿಕೆಟ್: ಅಶೀರ್ವಾದ ಮಾಡುವಂತೆ ಮತದಾರರಿಗೆ ಮನವಿ ಮಾಡಿದ ಕಾರಜೋಳ

ಕಾಂಗ್ರೆಸ್‌ ಪರಿಶಿಷ್ಟಪಂಗಡ ಘಟಕದ ಅಧ್ಯಕ್ಷ ಬಸವರಾಜ ತಳವಾರ ಹಾಗೂ ಇತರರು ಶಾಸಕರನ್ನು ತರಾಟೆಗೆ ತೆಗೆದುಕೊಂಡ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಸೋಮನಾಳ-ನವಲಿ ರೈಸ್‌ ಟೆಕ್ನಾಲಜಿ ಪಾರ್ಕ್ನಲ್ಲಿ .128 ಕೋಟಿಯಲ್ಲಿ ಮಳಿಗೆಗಳು, ಗೋದಾಮು, ಕಾಂಕ್ರಿಟ್‌ ರಸ್ತೆ ಹಾಗೂ ಆಡಳಿತ ಕಚೇರಿ ಸೇರಿದಂತೆ ವಿವಿಧ ಕಾಮಗಾರಿಗಳು ಅಪೂರ್ಣಗೊಂಡಿವೆ.ಆದರೂ ಇವುಗಳನ್ನು ಉದ್ಘಾಟನೆ ಮಾಡುತ್ತಿರುವುದು ಏಕೆ ಎಂದು ಬಸವರಾಜ ಖಾರವಾಗಿ ಪ್ರಶ್ನಿಸಿದ್ದಾರೆ.

ತಳವಾರ ಪ್ರಶ್ನೆಗೆ ಉತ್ತರಿಸಿರುವ ದಢೇಸೂಗೂರು ಲೋಪವಾಗಿದ್ದರೆ ಅಧಿಕಾರಿಗಳಿಗೆ ಕೇಳಿ ಉದ್ಘಾಟನೆಗೆ ಅಡ್ಡಿ ಪಡಿಸಬೇಡಿ ಎಂದಿದ್ದಾರೆ.

ಮಾತಿನ ಚಕಮಕಿ ನಡುವೆಯೂ ಕಾಮಗಾರಿಗಳಿಗೆ ತರಾತುರಿಯಲ್ಲಿ ಚಾಲನೆ ಕೊಟ್ಟರು.ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ನಾಗರಾಜ ಬಿಲ್ಗಾರ, ಬಸವರಾಜ ಮೇಲುಗಿರಿಯಪ್ಪ ಸೇರಿ ಅನೇಕರು ಪಾಲ್ಗೊಂಡಿದ್ದರು.

ಗಂಗಾವತಿ: ಭೋಗಾಪುರೇಶ ನೂತನ ಕೆರೆಗೆ ಗವಿಶ್ರೀ, ಮಂತ್ರಾಲಯ ಶ್ರೀಗಳಿಂದ ಬಾಗಿನ ಅರ್ಪಣೆ

ಈ ಕುರಿತು ಕನ್ನಡಪ್ರಭ ಪತ್ರಿಕೆಗೆ ಪ್ರತಿಕ್ರಿಯಿಸಿದ ದಢೇಸೂಗೂರು ರೈಸ್‌ ಟೆಕ್ನಾಲಜಿ ಪಾರ್ಕ್ ಅಭಿವೃದ್ಧಿಗೆ ಅನುದಾನ ತಂದಿದ್ದು ನಾನೇ. ಮಾಜಿ ಸಚಿವರು ತಮ್ಮ ಕಾರ್ಯಕರ್ತರನ್ನು ಮುಂದೆ ಬಿಟ್ಟು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಶಿವರಾಜ ತಂಗಡಗಿ ಹೆಸರು ಹೇಳದೆ ಕಿಡಾಕಾರಿದ್ದಾರೆ.

click me!