ಇದು ನನಗೆ ಕೊನೆ ಚುನಾವಣೆ ಇನ್ನೊಂದು ಅವಕಾಶ ಕೊಡಿ: ಎನ್‌.ಮಹೇಶ್‌

By Kannadaprabha NewsFirst Published Apr 30, 2023, 9:22 PM IST
Highlights

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಾದರೆ ಇನ್ನೊಂದು ಅವಕಾಶ ಕೊಡಿ ಎಂದು ಎನ್‌.ಮಹೇಶ್‌ ಹೇಳಿದರು. ಕ್ಷೇತ್ರದ ಕೆಂಪನಪುರ, ನಡುಕಲ ಮೋಳೆ, ಹೊಸಮೋಳೆ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು. 

ಯಳಂದೂರು (ಏ.30): ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಾದರೆ ಇನ್ನೊಂದು ಅವಕಾಶ ಕೊಡಿ ಎಂದು ಎನ್‌.ಮಹೇಶ್‌ ಹೇಳಿದರು. ಕ್ಷೇತ್ರದ ಕೆಂಪನಪುರ, ನಡುಕಲ ಮೋಳೆ, ಹೊಸಮೋಳೆ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದು, ಕೆಲವು ಕೆಲಸಗಳು ಅಪೂರ್ಣವಾಗಿರುವುದರಿಂದ ಕಾಮಗಾರಿ ಪೂರ್ಣಗೊಳಿಸಲು ನನಗೆ ಇನ್ನೊಂದು ಅವಕಾಶ ನೀಡುವ ಮೂಲಕ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌.ಕೃಷ್ಣಮೂರ್ತಿ ಮತಯಾಚನೆ ಸಂದರ್ಭದಲ್ಲಿ ನಾನು ಆರು ಬಾರಿ ಸೋಲು ಕಂಡಿದ್ದೇನೆ ಎಂದು ಜನರಲ್ಲಿ ಅನುಕಂಪ ಗಿಟ್ಟಿಸಿಕೊಂಡು ಮತಯಾಚಿಸುತ್ತಿದ್ದಾರೆ. ಆದರೆ ಅವರು ಸಹ ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಭಾರಿ ಶಾಸಕರಾಗಿದ್ದ ವ್ಯಕ್ತಿ ಅವರು ಸಂತೆಮರಹಳ್ಳಿ ಕ್ಷೇತ್ರದಲ್ಲಿ ಅವರ ಅಭಿವೃದ್ಧಿ ಸಾಧನೆ ಶೂನ್ಯ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್‌.ಬಾಲರಾಜು, ನಿದೇರ್ಶಕ ಮಹೇಂದರ್‌, ಚಾಮುಲ್‌ ಅಧ್ಯಕ್ಷ ಯರಗಂಬಳ್ಳಿ ನಾಗೇಂದ್ರ, ಸೋಮಣ್ಣ ಉಪ್ಪಾರ್‌, ಕೆಂಪನಪುರ ಗ್ರಾಪಂ ಮಾಜಿ ಅಧ್ಯಕ್ಷ ಗುರುಸಿದ್ದಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ರವೀಶ್‌ ಇದ್ದರು. 

ಪಂಚ​ರತ್ನ ಯೋಜ​ನೆ​ಗಳ ಅನುಷ್ಠಾನಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು: ಎಚ್‌.ಡಿ.​ದೇ​ವೇ​ಗೌಡ

ಕ್ಷೇತ್ರ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ: ಪರಿಶಿಷ್ಟ ಜಾತಿ-ಪಂಗಡ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಾಕಷ್ಟುಹೋರಾಟಗಳನ್ನು ಹಲವು ವರ್ಷಗಳಿಂದ ಮಾಡಲಾಯಿತು. ಆದರೂ, ಕಾಂಗ್ರೆಸ್‌ ಹೆಚ್ಚಿಸಲಿಲ್ಲ. ಬಿಜೆಪಿ ಸರ್ಕಾರವು ಪರಿಶಿಷ್ಟಜಾತಿ-ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸಿದೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಎನ್‌.ಮಹೇಶ್‌ ತಿಳಿಸಿದರು ಗುಂಬಳ್ಳಿ, ಯರಗಂಬಳ್ಳಿ, ಗಂಗವಾಡಿ, ಕುಮಾರನಪುರ ಸೇರಿದಂತೆ ಮತಯಾಚಿಸಿ ಮಾತನಾಡಿ, ಜನರು ಈ ಬಾರಿ ಪರಿಶಿಷ್ಟಜಾತಿ-ಪಂಗಡ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು.

ಜತೆಗೆ ತಳವಾರ, ಪರಿವಾರವು ಹಿಂದುಳಿದ ಜಾತಿಗೆ ಸೇರಿತ್ತು, ಈ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಈ ವಿಷಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ಅವರಿಗೆ ಗಮನ ಸೆಳೆಯಿತು. ವಿಧಾನ ಸಭೆಯಲ್ಲಿ ನಾನು ಕೂಡ ಗಮನ ಸೆಳೆದು ತಳವಾರ, ಪರಿವಾರ ಹಿಂದುಳಿದ ಜಾತಿ ಸೇರಿದನ್ನು ಪರಿಶಿಷ್ಟ-ಪಂಗಡಕ್ಕೆ ಪಟ್ಟಿಗೆ ಸೇರಿಸುವ ಮೂಲಕ ಸಾಕಷ್ಟುಜನರಿಗೆ ಅನುಕೂಲ ಕಲ್ಪಿಸಿದೆ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್‌ ಕುಮಾರಸ್ವಾಮಿ

ಬಿಜೆಪಿ ಪಕ್ಷದ ಮುಖಂಡ ಹಾಗೂ ಚಲನಚಿತ್ರ ನಿರ್ದೇಶಕ ಎಸ್‌.ಮಹೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಕನ್ನಡ ಖಾತ್ಯ ನಟ ಸುದೀಪ್‌ ಅವರು ಕ್ಷೇತ್ರಕ್ಕೆ ಆಗಮಿಸಿ ಮಹೇಶ್‌ ಅವರ ಪರ ಪ್ರಚಾರಕ್ಕೆ ಆಗಮಿಸಲಿದ್ದಾರೆ, ಈ ಬಾರಿ ಸುದೀಪ್‌ ಬಿಜೆಪಿ ಪಕ್ಷವನ್ನು ಬೆಂಬಲ ಸೂಚಿಸಿರುವುದರಿಂದ ಪರಿಶಿಷ್ಟಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!