ವರುಣದಲ್ಲಿ ಅಭಿವೃದ್ಧಿ ಇಬ್ಬರೂ ನೋಡೋಣ ಬನ್ನಿ: ಸಿದ್ದುಗೆ ಸೋಮಣ್ಣ ಸವಾಲ್‌

By Kannadaprabha News  |  First Published Apr 30, 2023, 9:01 PM IST

ವರುಣದ ರಸ್ತೆಗಳು, ಕ್ಷೇತ್ರದಲ್ಲಿ ಅವ್ಯವಸ್ಥೆ ಹೇಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ ಎಂದು ವರುಣ ಮತ್ತು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಸವಾಲು ಹಾಕಿದರು. 


ಚಾಮರಾಜನಗರ (ಏ.30): ವರುಣದ ರಸ್ತೆಗಳು, ಕ್ಷೇತ್ರದಲ್ಲಿ ಅವ್ಯವಸ್ಥೆ ಹೇಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ ಎಂದು ವರುಣ ಮತ್ತು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಸವಾಲು ಹಾಕಿದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ರೋಡ್‌ ಶೋ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ, ಅದೆಷ್ಟು ಚೆನ್ನಾಗಿ ರಸ್ತೆಗಳಿವೆ ನೋಡಲಿ. ಯಾವ ರೀತಿ ಅವ್ಯವಸ್ಥೆಯಿದೆ ನೋಡಲಿ,ಯಾವ ರೀತಿ ಜನರು ಒದ್ದಡ್ತಿದ್ದಾರೆ ನೋಡಲಿ. ನಾನು, ಒಬ್ಬನೇ ಅವರ ಜೊತೆಗೆ ಬರ್ತೀನಿ ಹೋಗೋಣ, ಸಿದ್ದರಾಮಯ್ಯ ಕರೆದ್ರೆ ಹೋಗಲೂ ಸಿದ್ದ, ಹೋಗಿ ಸುತ್ತಾಡೋಣ ಎಂದು ಸವಾಲ್‌ ಹಾಕಿದರು.

ಅವರು ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದೆ ಅನ್ಸಿದ್ರೆ, ಅವರಿಗೆ ನಮಸ್ಕಾರ ಮಾಡಿ, ನಾನು ಏನೂ ಮಾತಾಡಲ್ಲ. ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ, ಎಲ್ಲವನ್ನೂ ಜನರು ತೀರ್ಮಾನ ಮಾಡ್ತಾರೆ, ಸಿದ್ದರಾಮಯ್ಯ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ಬಿಟ್ಟು, ವಾಸ್ತಾವಾಂಶಕ್ಕೆ ಗಮನ ಕೊಟ್ರೆ ಒಳ್ಳೆಯದು ಎಂದು ಸಿದ್ದರಾಮಯ್ಯಗೆ ಟಾಂಗ್‌ ಕೊಟ್ಟರು. ವರುಣದಲ್ಲಿ ಪ್ರಚಾರಕ್ಕೆ ಅಡ್ಡಿ ಸಂಬಂಧ ಪ್ರತಿಕ್ರಿಯಿಸಿ, ಒಂದು ದಿನ ಅಲ್ಲ, ದಿನವೂ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ಸಿದ್ದರಾಮಯ್ಯಅವರು ಹತಾಶರಾಗಿದ್ದಾರೆ, ಈ ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ, ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಅಸಮಾಧಾನ ಹೊರಹಾಕಿದರು.

Tap to resize

Latest Videos

undefined

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್‌ ಕುಮಾರಸ್ವಾಮಿ

ಪ್ರತಾಪ್‌ ಸಿಂಹರಿಂದಲೇ ಗಲಾಟೆ ಯಾಗ್ತಿದೆ ಎಂಬ ಹೇಳಿಕೆಗೆ ಸೋಮಣ್ಣ ಉತ್ತರಿಸಿ, ಪ್ರತಾಪ್‌ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನಂಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ, ವಾಸ್ತವಾಂಶ ಇರೋದನ್ನು ಮಾತಾಡ್ತಾರೆ. ನಿಮ್ಮವರೇ ಜಗಳ ಮಾಡಿಸ್ತಿರೋದು, ಅವರು ಬಿಟ್ರೆ ಬೇರೆ ಯಾರೂ ಇಲ್ಲ, ನ್ಯಾಯಸಮ್ಮತ ಚುನಾವಣೆ ನಡೆಯಲಿ, 10ನೇ ತಾರೀಖು ತೀರ್ಮಾನವಾಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ವರುಣಾದಲ್ಲಿ ಗಲಾಟೆ ಮಾಡಿಸಿದ್ದು ಸೊಮಣ್ಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾತನಾಡಿ, ಸಿದ್ದರಾಮಯ್ಯ ಮತ್ತೆ ಯಾಕೆ ಈ ರೀತಿ ಮಾಡಿ ಚಿಕ್ಕವರಾಗ್ತಿದ್ದಾರೆ ಗೊತ್ತಿಲ್ಲ, 

ನಾವೇನೂ ಕಾಲು ಕರೆದುಕೊಂಡು ಹೋಗಿರಲಿಲ್ಲ, ನಾವು ಪ್ರಚಾರಕ್ಕೆ ಹೋದ್ರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ, ಆಚೆಗೆ ಹೋಗಬಾರದು ಅಂತಾರೆ ಇವೆಲ್ಲ ಮಾಡುತ್ತಿರುವುದು ಒಂದೇ ವರ್ಗದ ಜನ ಎಂದು ಕಿಡಿಕಾರಿದರು. ನಮಗೆ ಹುಚ್ಚು ಹಿಡಿದಿದೆಯಾ, ಹತಾಶರಾಗಿ ಈ ರೀತಿ ಮಾತಾಡ್ತಿದ್ದಾರೆ, ನೀವೂ ಗೆಲ್ಲೊದಾದ್ರೆ ಇದೆಲ್ಲಾ ನಿಮಗೆ ಯಾಕೆ ಬೇಕು, ಪೊಲೀಸ್‌ನವರಿಗೆ ಹಿಡಿದುಕೊಟ್ಟರೇ ಅವರು ಬಿಟ್ಟು ಕಳಿಸ್ತಾರೆ, ಗಲಾಟೆ ಮಾಡಿದವರ ಮೇಲೆ 326 ರ ಅಡಿ ಪ್ರಕರಣ ದಾಖಲಿಸಬೇಕು, ಏನಾದ್ರೂ ಪಿತೂರಿ ಮಾಡಲಿ, ಭಗವಂತ, ಚಾಮುಂಡಿ ತಾಯಿ ಇದ್ದಾರೆ, ಅಲ್ಲದೇ ಕ್ಷೇತ್ರದ ಜನರಿದ್ದಾರೆ, ನನ್ನ ಸೇವೆ ಬೇಕು ಅಂದ್ರೆ ಕ್ಷೇತ್ರದ ಜನರು ಸಹಾಯ ಮಾಡ್ತಾರೆ, ಮಾಡ್ದೆ ಇದ್ರೆ ನಂಗೆನೂ ಬೇಜಾರು ಇಲ್ಲ ಎಂದು ಸಿದ್ದುಗೆ ತಿರುಗೇಟು ಕೊಟ್ಟರು. 

ಮೈಸೂರು ಮಹಾರಾಜರ ಸ್ಫೂರ್ತಿಯಿಂದ ವರುಣ ಮಾದರಿ ಕ್ಷೇತ್ರ ಮಾಡುವೆ: ಸಚಿವ ವಿ.ಸೋಮಣ್ಣ

ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ಜಿಪಂ ಮಾಜಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಾಗಶ್ರೀ ಪ್ರತಾಪ್‌, ಯು.ಎಂ. ಪ್ರಭುಸ್ವಾಮಿ, ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಲಯರ್‌ ಚಿನ್ನಸ್ವಾಮಿ, ಕೆ. ವೀರಭದ್ರಸ್ವಾಮಿ, ರೂಪ, ಅರಕಲವಾಡಿ ಮಹೇಶ್‌, ಕಿಲಗೆರೆ ಶಶಿಕುಮಾರ್‌, ಕೊತ್ತಲವಾಡಿ ಕುಮಾರ, ಮಾದಪ್ಪ, ಆನಂದ್‌ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!