ಒಂದಲ್ಲ, ಎರಡಲ್ಲ, ಕಾಂಗ್ರೆಸ್‌ನಿಂದ 91 ಬಾರಿ ಬಗೆಬಗೆಯ ಬೈಗುಳ: ಪ್ರಧಾನಿ ಮೋದಿ ಆರೋಪ

Published : Apr 30, 2023, 03:00 AM IST
ಒಂದಲ್ಲ, ಎರಡಲ್ಲ, ಕಾಂಗ್ರೆಸ್‌ನಿಂದ 91 ಬಾರಿ ಬಗೆಬಗೆಯ ಬೈಗುಳ: ಪ್ರಧಾನಿ ಮೋದಿ ಆರೋಪ

ಸಾರಾಂಶ

ಕಾಂಗ್ರೆಸ್‌ನವರು ಈವರೆಗೆ ನನ್ನ ವಿರುದ್ಧ ಬರೋಬ್ಬರಿ 91 ಬಾರಿ ಬಗೆ​ಬ​ಗೆಯ ಬೈಗುಳ ಶಬ್ದಗಳನ್ನು ಬಳಸಿ, ನನ್ನನ್ನು ತೆಗ​ಳಿ​ದ್ದಾರೆ. ಕಾಂಗ್ರೆ​ಸ್ಸಿ​ಗ​ರಿಗೆ ಚುನಾ​ವ​ಣೆ​ ಸಂದ​ರ್ಭ​ಗ​ಳಲ್ಲಿ ನನ್ನನ್ನು ಬೈಯ್ಯು​ವುದೇ ಕೆಲ​ಸ​ವಾ​ಗಿ​ದೆ. 

ಹುಮ​ನಾ​ಬಾದ್‌/ಬೀದರ್‌ (ಏ.30): ‘ಕಾಂಗ್ರೆಸ್‌ನವರು ಈವರೆಗೆ ನನ್ನ ವಿರುದ್ಧ ಬರೋಬ್ಬರಿ 91 ಬಾರಿ ಬಗೆ​ಬ​ಗೆಯ ಬೈಗುಳ ಶಬ್ದಗಳನ್ನು ಬಳಸಿ, ನನ್ನನ್ನು ತೆಗ​ಳಿ​ದ್ದಾರೆ. ಕಾಂಗ್ರೆ​ಸ್ಸಿ​ಗ​ರಿಗೆ ಚುನಾ​ವ​ಣೆ​ ಸಂದ​ರ್ಭ​ಗ​ಳಲ್ಲಿ ನನ್ನನ್ನು ಬೈಯ್ಯು​ವುದೇ ಕೆಲ​ಸ​ವಾ​ಗಿ​ದೆ. ಆದರೆ, ನಿಮ್ಮೆ​ಲ್ಲರ ಆಶೀ​ರ್ವಾ​ದ​ದಿಂದ ಕಾಂಗ್ರೆಸ್‌ನ ಆ ತೆಗ​ಳಿ​ಕೆ​ಗ​ಳೆಲ್ಲ ಮಣ್ಣು ಪಾಲಾ​ಗು​ವುದು ಗ್ಯಾರಂಟಿ. ಕಾಂಗ್ರೆ​ಸ್‌​ನ​ವರು ಯಾವ ಪ್ರಮಾಣದಲ್ಲಿ ಕೆಸ​ರೆ​ರಚುತ್ತಾರೋ, ಅಷ್ಟೇ ಪ್ರಮಾ​ಣ​ದಲ್ಲಿ ಕಮಲ ಅರಳು​ವುದು ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಮೋದಿ, ಬೆಳಗಾವಿ ಜಿಲ್ಲೆ ರಾಯಬಾಗ, ವಿಜಯಪುರ ಹಾಗೂ ಬೀದರ್‌ ಜಿಲ್ಲೆಯ ಹುಮನಾಬಾದ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಕಳೆದ ಗುರುವಾರ ಗದಗ ತಾಲೂಕಿನ ನರೇಗಲ್‌ನಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮೋದಿ ವಿಷದ ಹಾವು ಇದ್ದ ಹಾಗೆ. ಮೋದಿ ಒಳ್ಳೆಯದನ್ನು ಮಾಡಿದ್ದಾರೆ, ಒಂದು ಸಾರಿ ನೆಕ್ಕಿ ನೋಡೋಣ ಎಂದು ಹೋದರೆ ನೀವು ಸತ್ತ ಹಾಗೆ’ ಎಂದಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. 

ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಅಮಿತ್‌ ಶಾ ಸೇರಿ ಬಿಜೆಪಿಯ ಉನ್ನತ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಈ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದರು. ‘ಕಾಂಗ್ರೆಸ್‌ನವರು ಈ ಹಿಂದೆ ಅಂಬೇಡ್ಕರ್‌ ಅವರನ್ನೇ ದೇಶದ್ರೋಹಿ, ಅಸುರ ಎಂದು ಜರಿ​ದಿ​ದ್ದ​ರು. ಕಾಂಗ್ರೆಸ್‌ ಹೇಗೆ ನೋವು ನೀಡಿತು ಎಂಬುದನ್ನು ಅಂಬೇಡ್ಕರ್‌ ಅವರೇ ಬೆಳಗಾವಿಯಲ್ಲಿ ಹೇಳಿದ್ದರು. ಸಾವರ್ಕರ್‌ ಅವರನ್ನೂ ಕಾಂಗ್ರೆಸ್‌ ಬಿಟ್ಟಿಲ್ಲ. ನನ್ನನ್ನೂ ಅದೇ ರೀತಿ​ಯಾಗಿ ಪದ​ಗ​ಳನ್ನು ಹುಡುಕಿ, ಹುಡುಕಿ ತೆಗ​ಳು​ತ್ತಿ​ರು​ವ​ದನ್ನು ನೋಡಿದರೆ, ನಾನೂ ಆ ಮಹಾತ್ಮರ ಸಾಲಿಗೆ ಸೇರಿದೆ ಎಂಬ ಹೆಮ್ಮೆ ಆಗುತ್ತಿದೆ’ ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯ​ವಾ​ಡಿ​ದ​ರು.

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ‘ಈ ಹಿಂದೆ ನನ​ಗೆ ಚೌಕಿದಾರ್‌ ಚೋರ್‌ ಎಂದರು. ನಂತರದ ಚುನಾವಣೆಯಲ್ಲಿ ಮೋದಿ ಚೋರ್‌ ಎಂದರು. ಈಗ ಲಿಂಗಾಯತ ಭ್ರಷ್ಟಅಂತಿದ್ದಾರೆ. ಇವ​ರಿಗೆ ತಕ್ಕ ಪಾಠ ಕಲಿ​ಸಲೇಬೇಕು. ಕಾಂಗ್ರೆ​ಸ್ಸಿ​ಗ​ರಿಗೆ ಚುನಾ​ವ​ಣೆ​ ಸಂದ​ರ್ಭ​ಗ​ಳಲ್ಲಿ ನನ್ನನ್ನು ಬೈಯ್ಯು​ವುದೇ ಕೆಲ​ಸ​ವಾ​ಗಿ​ದೆ. ಚೌಕಿ​ದಾರ್‌ ಚೋರ್‌ ಎಂದರೂ ಆಟ ನಡೆ​ಯ​ಲಿಲ್ಲ, ಮೋದಿ ಚೋರ್‌ ಎಂದರೂ ಆಟ ನಡೆ​ಯ​ಲಿಲ್ಲ, ಈಗ ಲಿಂಗಾ​ಯತ ಸಿಎಂ ಚೋರ್‌ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನನ್ನನ್ನು ತೆಗ​ಳುವುದರಲ್ಲಿಯೇ ಕಾಲಹರಣ ಮಾಡು​ತ್ತಿ​ರಲಿ, ನಾನು ಮಾತ್ರ ಜನ​ತೆಯ ಸೇವೆ ಮಾಡು​ವುದರಲ್ಲಿಯೇ ಮಗ್ನ​ನಾ​ಗಿ​ರು​ತ್ತೇನೆ. 

ಜನರಿಗಾಗಿ ಹಗಲು-ರಾತ್ರಿ ಕೆಲಸ ಮಾಡು​ತ್ತೇನೆ. ಕಾಂಗ್ರೆಸ್‌ ನನ್ನನ್ನು ಬೈಯಲು ಶಬ್ದ​ಕೋ​ಶ​ಗ​ಳಲ್ಲಿ ಶಬ್ದಗಳನ್ನು ಹುಡುಕಿ, ಹುಡುಕಿ ಸಮಯ ವ್ಯರ್ಥ ಮಾಡಿ​ಕೊ​ಳ್ಳುವ ಬದಲು, ಇಷ್ಟೇ ಶ್ರಮ​ವನ್ನು ಉತ್ತಮ ಆಡ​ಳಿತ, ಕಾಂಗ್ರೆಸ್‌ ಕಾರ್ಯ​ಕ​ರ್ತರ ಉತ್ಸಾಹ ಹೆಚ್ಚಿ​ಸುವುದಕ್ಕೆ ಬಳಸಿದ್ದರೆ ಕಾಂಗ್ರೆ​ಸ್‌ಗೆ ಈ ದು:ಸ್ಥಿತಿ, ದಯ​ನೀ​ಯ ಸ್ಥಿತಿ ಬರು​ತ್ತಿ​ರ​ಲಿಲ್ಲ ಎಂದು ಟೀಕಿಸಿದರು. ಈ ಹಿಂದೆ ಯಾರಾರ‍ಯರ ವಿರುದ್ಧ ಕಾಂಗ್ರೆಸ್‌ ಕಟು ಶಬ್ದ​ಗ​ಳಿಂದ ತೆಗ​ಳಿದೆಯೋ ಅವ​ರಾರ‍ಯರೂ ಇವ​ರನ್ನು ಕ್ಷಮಿ​ಸಿಲ್ಲ, ನೆಲ​ಕ​ಚ್ಚಿ​ಸಿ​​ದ್ದಾರೆ. ಜಗಜ್ಯೋತಿ ಬಸವೇಶ್ವರ, ಭಕ್ತ ಕನಕದಾಸರಂತಹ ಅನೇಕ ಮಹಾನ್‌ ಪುರುಷರು ಜನಿಸಿದ ಪುಣ್ಯಭೂಮಿ ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರಿಗೆ ಇತರರನ್ನು ಅವಮಾನ ಮಾಡುವುದೇ ಕಾಯಕವಾಗಿದೆ. 

ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ

ಕರ್ನಾಟಕದ ಮಾನ ಕಳೆಯುವ ಇಂತವರನ್ನು ನೀವು ಕ್ಷಮಿಸುತ್ತಿರಾ?. ಇಂತಹ ಮಹನೀಯರ ನಾಡಿನಲ್ಲಿ ಲಿಂಗಾಯತರ ಸ್ವಾಭಿ​ಮಾ​ನ​ ಕೆಣ​ಕಿ ಅವಹೇಳನ ಮಾಡಿದ ಕಾಂಗ್ರೆಸ್‌ನವರಿಗೆ ಓಟಿನ ಮೂಲಕ ಉತ್ತರ ಕೊಡಿ. ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ. ಕರ್ನಾಟಕವನ್ನು ರಾಜ್ಯದಲ್ಲಿಯೇ ನಂಬರ್‌ ಒನ್‌ ಮಾಡುತ್ತೇವೆ ಎಂದು ಜನರಿಗೆ ಕರೆ ನೀಡಿ​ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ