
ರಾಮನಗರ (ಏ.30): ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸುವ ಉದ್ದೇಶದಿಂದಲೇ ಅಲ್ಪಸಂಖ್ಯಾತ ಸಮುದಾಯದ ಮುಖಂಡನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟೀಕಿಸಿದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಪ್ರಚಾರಕ್ಕೆ ತೆರಳುವುದಕ್ಕು ಮುನ್ನ ನಗರದ ಪೀರನ್ ಷಾ ವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ರನ್ನು ಸೋಲಿಸಿ ಬಿಜೆಪಿ ಗೆಲ್ಲಿಸಲು ಕಾಂಗ್ರೆಸ್ ಪಕ್ಷ ಷಡ್ಯಂತ್ರ ನಡೆಸಿದೆ. ರಾಮನಗರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಮತ್ತು ಜೆಡಿಎಸ್ ಪಕ್ಷದ ನಡುವೆ ವೈಮನಸ್ಸು ಸೃಷ್ಟಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿದೆ ಎಂದರು.
ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕಾಗಿದ್ದರೆ ಡಿ.ಕೆ.ಶಿವಕುಮಾರ್ ಅವರಿಗೆ ಅಷ್ಟೊಂದು ಧೈರ್ಯ ಇದ್ದಿದ್ದರೆ ತಮ್ಮ ಸಹೋದರ ಡಿ.ಕೆ.ಸುರೇಶ್ ಅಥವಾ ಅಳಿಯನನ್ನು ಅಭ್ಯರ್ಥಿ ಮಾಡಬೇಕಿತ್ತು. ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆಂದು ಗೊತ್ತಿರುವುದರಿಂದಲೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಲಿ ಪಶು ಮಾಡುತ್ತಿದ್ದಾರೆ. ಅಂಗೈ ನೋಡಲಿಕ್ಕೆ ಕನ್ನಡಿ ಬೇಕೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ನಿಖಿಲ್ ಕುಮಾರಸ್ವಾಮಿ ಯುವಕರಾಗಿದ್ದು, ವೈಯಕ್ತಿಕ ವರ್ಚಸ್ಸಿದೆ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಗುಣವೂ ಇದೆ. ಯಾವ ಭೂಮಿ ಕೆಂಗಲ್ ಹನುಂತಯ್ಯ, ದೇವೇಗೌಡ, ಕುಮಾರಸ್ವಾಮಿಗೆ ರಾಜಕೀಯದಲ್ಲಿ ಸ್ಥಾನಮಾನ ಕಲ್ಪಿಸಿತೊ ಅದೇ ಪುಣ್ಯಭೂಮಿ ನಿಖಿಲ್‌ಗೆ ರಾಜಕೀಯ ಅಸ್ತಿತ್ವ ಕಟ್ಟಿಕೊಡಲಿದೆ. ಪಕ್ಷದ ಹೆಸರಿನಲ್ಲಿಯೇ ಜಾತ್ಯತೀತೆ ಇದೆ. ಹಾಗಾಗಿ ಕೇವಲ ಮುಸ್ಲಿಂ ಪ್ರದೇಶದಲ್ಲಿ ಮತಯಾಚನೆ ಮಾಡದೆ. ನಗರದ ಎಲ್ಲೆಡೆ ನಿಖಿಲ್ ಪರ ಮತಯಾಚನೆ ಮಾಡಲಾಗುತ್ತಿದೆ. ಇಬ್ರಾಹಿಂ ಹೇಳಿದರು. ಕಳೆದ ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಮತದಾರರಲ್ಲಿ ಗೊಂದಲ ಇತ್ತು. ಈ ಬಾರಿ ಚುನಾವಣೆಯಲ್ಲಿ ಅಂತಹ ಗೊಂದಲಗಳು ಸಾಕಷ್ಟುಪರಿಹಾರವಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯದ ಮತಗಳು ನಿಖಿಲ್ ಪರವಾಗಿ ಬಂದು ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ವೋಟಿಗಾಗಿ ಫುಟ್‌ಪಾತ್‌ಗೆ ಬಂದ ಮೋದಿ: ಎಲ್ಲರು ಅಂಗಡಿ ಇಟ್ಟಿಕೊಂಡು ಹಣ್ಣು ಮಾರಿದರೆ, ಪ್ರಧಾನಿ ಮೋದಿ ಬಂಡಿನಲ್ಲಿ ಇಟ್ಟುಕೊಂಡು ಹಣ್ಣು ಮಾರುತ್ತಿದ್ದಾರೆ. ವೋಟಿಗಾಗಿ ಅವರು ಫುಟ್‌ಪಾತ್‌ಗೆ ಬಂದಿದ್ದಾರೆ. ಇದು ಒಳ್ಳೆಯ ಸಂಸ್ಕೃತಿ ಅಲ್ಲ. ಪ್ರಧಾನಿ ಈ ರೀತಿಯ ದುರ್ದೈವ ಬರಬಾರದಿತ್ತು. ಗಂಡಿ ನೋಡಿ ಹೆಣ್ಣು ಕೊಡಿ ಎಂದು ಕೇಳಬಹುದು. ಆದರೆ, ಬಿಜೆಪಿಯವರು ಅಭ್ಯರ್ಥಿಯನ್ನು ನೋಡಿ ಮತ ಹಾಕಬೇಡಿ, ಮೋದಿರವರನ್ನು ನೋಡಿ ಮತ ಹಾಕುವಂತೆ ಕೇಳುತ್ತಿದ್ದಾರೆ. ಇದು ಗಂಡಿನ ಬದಲು ಅವರಪ್ಪನನ್ನು ನೋಡಿ ಹೆಣ್ಣು ಕೊಡಿ ಅನ್ನುವಂತಾಗಿದೆ ಎಂದು ಇಬ್ರಾಹಿಂ ಲೇವಡಿ ಮಾಡಿದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ, ಮುಖಂಡರಾದ ಸುಹೇಲ್, ಮುನಾಜಿಲ ಆಗಾ, ಎಂ.ಜಿ.ಪೈರೋಜ್, ಆರಿಫ್ ಖುರೇಷಿ, ಗ್ಯಾಬ್ರಿಯಲ, ಮಹಮದ್, ಮತೀನ್ ಮತ್ತಿತರರು ಹಾಜರಿದ್ದರು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 22,18,055 ಮತದಾರರು: ಡಿಸಿ ಯಶವಂತ ಗುರುಕರ್
ನಿಖಿಲ್ ಪರ ಸಿ.ಎಂ.ಇಬ್ರಾಹಿಂ ಪ್ರಚಾರ: ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಶುಕ್ರವಾರ ಸಂಜೆ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಮತಯಾಚನೆ ಮಾಡಿದರು. ನಗರದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರು ನಂತರ ಬೈಕ್ ರ್ಯಾಲಿ ನಡೆಸಿದರು. ಇದಕ್ಕು ಮುನ್ನಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಗರದಲ್ಲಿ ಸಂಜೆ ಆರಂಭವಾದ ಬೈಕ್ ರಾರಯಲಿ ವಿವಿಧ ಬಡಾವಣೆಯಲ್ಲಿ ಸಂಚಾರ ನಡೆಸಿತು. ಈ ವೇಳೆ ನಗರಸಭೆಯ ಜೆಡಿಎಸ್ ಸದಸ್ಯರು ಹಾಗೂ ಮುಖಂಡರು ಸಾಥ್ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.