ಶಾಸಕ ನಿಸರ್ಗ ನಾರಾಯಣಸ್ವಾಮಿ ದೇವನಹಳ್ಳಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಇಲ್ಲಿಗೆ ಆಗಮಿಸಿರುವ ಪ್ರತಿಯೊಬ್ಬ ಮತದಾರರಿಗೂ ಗೊತ್ತಿದ್ದು, ಮನೆ ಮಗನಂತೆ ಕಷ್ಟಸುಖಗಳಲ್ಲಿ ಭಾಗಿಯಾಗುವ ನಿಮ್ಮ ನಾಯಕನನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ಜೆಡಿಎಸ್ ನೇತಾರ ಎಚ್.ಡಿ.ದೇವೇಗೌಡ ಹೇಳಿದರು.
ದೇವನಹಳ್ಳಿ (ಏ.30): ಶಾಸಕ ನಿಸರ್ಗ ನಾರಾಯಣಸ್ವಾಮಿ ದೇವನಹಳ್ಳಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಇಲ್ಲಿಗೆ ಆಗಮಿಸಿರುವ ಪ್ರತಿಯೊಬ್ಬ ಮತದಾರರಿಗೂ ಗೊತ್ತಿದ್ದು, ಮನೆ ಮಗನಂತೆ ಕಷ್ಟಸುಖಗಳಲ್ಲಿ ಭಾಗಿಯಾಗುವ ನಿಮ್ಮ ನಾಯಕನನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ಜೆಡಿಎಸ್ ನೇತಾರ ಎಚ್.ಡಿ.ದೇವೇಗೌಡ ಹೇಳಿದರು. ದೇವನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ತೊಂಬತ್ತನೇ ವಯಸ್ಸಿನಲ್ಲೂ ಬಹಳಷ್ಟುಶಾಸಕರನ್ನು ನೋಡಿದ್ದೇನೆ. ಬಂದಿದ್ದಾರೆ, ಹೋಗಿದ್ದಾರೆ, ನಮ್ಮನ್ನು ಬಳಕೆ ಮಾಡಿಕೊಂಡಿದ್ದಾರೆ,
ಅಧಿಕಾರಕ್ಕಾಗಿ ಬೇರೆ ಪಕ್ಷಗಳಿಗೆ ಹೋಗಿ ಕಚ್ಚಾಡುವುದನ್ನು ಕಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡುವವರನ್ನು ಕಂಡಿದ್ದೇನೆ. ಆದರೆ ಶಾಸಕ ನಿಸರ್ಗ ನಾರಾಯಣಸ್ವಾಮಿ ತೆಗೆದುಕೊಂಡ ದೃಢ ನಿಲುವು ನಮ್ಮೆಲ್ಲರ ಮನಸನ್ನು ಕಲಕುತ್ತಿದೆ. ಜನಸೇವೆ ಮಾಡಲು ಯೋಗ್ಯ ವ್ಯಕ್ತಿ ಎನಿಸಿಕೊಂಡಿರುವ ನಾರಾಯಣಸ್ವಾಮಿ ಅವರನ್ನು ವಿಧಾನಸಭೆಗೆ ಕಳುಹಿಸುವ ಜವಾಬ್ದಾರಿ ಮತದಾರರದ್ದು ಎಂದು ಹೇಳಿದರು.
undefined
ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ನಾನು ನಿಮ್ಮ ಮನೆ ಮಗನಾಗಿ ಕೆಲಸ ಮಾಡಿದ್ದೇನೆ. ನನ್ನ ದೇಹದಲ್ಲಿ ಉಸಿರಿರುವಷ್ಟುದಿನ ಮರೆಯುವುದಿಲ್ಲ. ದೇವೇಗೌಡ ಅಪ್ಪಾಜಿ ನನ್ನನ್ನು ಸ್ವಂತ ಮಗನಂತೆ ಕಂಡಿದ್ದಾರೆ. ನಾನು ದಾರಿ ತಪ್ಪಿ ಇತರ ಪಕ್ಷಗಳಿಗೆ ಹೋಗಿ ಹಣ ಸಂಪಾದಿಸುವ ಅವಶ್ಯಕತೆ ಇಲ್ಲ. ಪಕ್ಷಾಂತರದ ಅವಾಂತರ ನಡೆಯುವ ಸಂದರ್ಭದಲ್ಲಿ ದೇವೇಗೌಡ ಅಪ್ಪಾಜಿಗೆ ಫೋನ್ ಮಾಡಿ ನಾನೆಂದೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ. ನಿಮ್ಮ ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ಲ ಎಂದು ಹೇಳಿದ್ದೇನೆ ಎಂದು ಹೇಳಿದರು.
ರಾಜಕೀಯದಲ್ಲಿ ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ. ಭ್ರಷ್ಟಾಚಾರ ಮಾಡಿ ಹಣ ಗಳಿಸಿದವನಲ್ಲ. ಇಂದು ಈ ಮಟ್ಟಕ್ಕೆ ಬರಬೇಕಾದರೆ ಮತದಾರರೇ ಕಾರಣ. ಕ್ಷೇತ್ರದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಏನಾದರೂ ಮಾಡಿ ಚುನಾವಣೆಯಲ್ಲಿ ಸೋಲಿಸಲು ಏನೆಲ್ಲ ಕಸರತ್ತು ಮಾಡಿ ಅಪ ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಮತದಾರರು ಎಚ್ಚರವಾಗಿರಬೇಕು. ತಿಳಿಸಿ ನಾನೇನು ತಪ್ಪು ಮಾಡಿದ್ದೇನೆ ಹೇಳಿ ಹಿಂದೆ ನಮ್ಮ ಪಕ್ಷದ ಅಧಿಕಾರ ಅನುಭವಿಸಿ ಈಗ ನಮ್ಮ ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಅಂತಹವರನ್ನು ತಿಗಣೆ ಹೊಸಕಿದ ಹಾಗೆ ಹೊಸಕಬೇಕು ಎಂದರು.
ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ
ಈ ಸಂದರ್ಭದಲ್ಲಿ ಬಮೂಲ್ ಮಾಜಿ ಅಧ್ಯಕ್ಷ ಹಾಡೋನಹಳ್ಳಿ ಅಪ್ಪಯ್ಯಣ್ಣ, ಕಗ್ಗಲಹಳ್ಳಿ ಗುರಪ್ಪ, ಕೆ.ಸಿ.ವೆಂಕಟೇಗೌಡ, ಎರ್ತಿಗಾನಹಳ್ಳಿ ಶಿವಣ್ಣ, ಕಾರಹಳ್ಳಿ ಶ್ರೀನಿವಾಸ್, ಕಾಮೇಡನಹಳ್ಳಿ ರಮೇಶ್ ಹಾಗು ಮಹಿಳಾ ಘಟಕ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಕಾರ್ಯದರ್ಶಿ ಜಿ.ಎ.ರವೀಂದ್ರ, ಪಕ್ಷದ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪುರಸಭಾಧ್ಯಕ್ಷೆ ಗೋಪಮ್ಮ, ವಿಜಯಪುರ ಪುರಸಭಾಧ್ಯಕ್ಷೆ ವಿಮಲಾ ಬಸವರಾಜು ಇತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.