ನನ್ನ ಆರಾಧ್ಯ ದೈವ ಮಾದಪ್ಪ ಚಾಮರಾಜನಗರಕ್ಕೆ ಕಳುಹಿಸಿದ್ದಾನೆ. ಮತದಾರ ಪ್ರಭುಗಳು ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ. ನಿಮ್ಮ ಸೇವಕನಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.
ಚಾಮರಾಜನಗರ (ಏ.16): ನನ್ನ ಆರಾಧ್ಯ ದೈವ ಮಾದಪ್ಪ ಚಾಮರಾಜನಗರಕ್ಕೆ ಕಳುಹಿಸಿದ್ದಾನೆ. ಮತದಾರ ಪ್ರಭುಗಳು ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ. ನಿಮ್ಮ ಸೇವಕನಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು. ವರುಣಾ ಬಳಿಕ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದ್ದು,ಆಲೂರು ಮತ್ತು ಚಂದಕವಾಡಿ ಕ್ಷೇತ್ರಗಳಲ್ಲಿ ಬಹಿರಂಗ ಸಭೆ ನಡೆಸಿದರು. ಕೂಡ್ಲೂರು ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ ಸೋಮಣ್ಣ, ಆಲೂರು, ಚಂದಕವಾಡಿ, ಅರಕಲವಾಡಿ ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಿ ತಮಗೆ ಒಂದು ಅವಕಾಶ ಕೊಡುವಂತೆ ಕೈ ಮುಗಿದು ಪ್ರಾರ್ಥಿಸಿದರು.
ಚಂದಕವಾಡಿ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ನಾನು ಕೇಳಿಕೊಂಡು ಚಾಮರಾಜನಗರಕ್ಕೆ ಬರಲಿಲ್ಲ, ಮನೆಯಲ್ಲಿ ಮಲಗಿದ್ದರೂ 20 ಸಾವಿರ ಮತಗಳ ಅಂತರದಿಂದ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ, ವರಿಷ್ಠರು ದೂರದೃಷ್ಟಿಇಟ್ಟುಕೊಂಡು ನನ್ನನ್ನು ಇಲ್ಲಿಗೆ ಕಳುಹಿಸಿದ್ದು, ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ ಕಳುಹಿಸಿದರೇ ನಿಮಗೇ ಲಾಸ್ ಎಂದರು. ನಾನು, ನನ್ನ ಮಗನಿಗೆ ಟಿಕೆಟ್ ಕೇಳ್ದೆ. ಆದರೆ, ನಿನಗೇ ಇನ್ನೂ ಶಕ್ತಿ ಇದೆ ಎಂದು ಹೇಳಿ ಎರಡು ಟಿಕೆಟ್ ಕೊಟ್ಟರು. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕಿದ್ದು ಪಕ್ಷಗಳನ್ನೆಲ್ಲಾ ಬದಿಗಿಟ್ಟು ನನಗೆ ಮತ ಕೊಡಿ, ನಿಮ್ಮ ಮತದ ಮೌಲ್ಯವನ್ನು ಅಭಿವೃದ್ಧಿ ಮೂಲಕ ತೋರಿಸುತ್ತೇನೆ, ಮೇ 13ರ ತನಕ ಸೋಮಣ್ಣ ಬಳಿಕ ನಾನು ನಿಮ್ಮೆಲ್ಲರ ಸೇವಕ, 24*7 ನಿಮ್ಮ ಸೇವೆ ಮಾಡುತ್ತೇನೆ, 3 ಸಾರಿ ಅವರಿಗೆ ಅವಕಾಶ ಕೊಟ್ಟಿದ್ದೀರಿ, ಒಂದು ಸಾರಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
undefined
ಮಾಗಡಿಯನ್ನು ಮಾದರಿ ಕ್ಷೇತ್ರ ಮಾಡುವೆ: ಎಚ್.ಸಿ.ಬಾಲಕೃಷ್ಣ
ಟಿಕೆಟ್ ಘೋಷಣೆಗೂ ಮುನ್ನ ಗೋ ಬ್ಯಾಕ್ ಸೋಮಣ್ಣ ಎಂದಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಟಿಕೆಟ್ ಘೋಷಣೆಯಾದ ಬಳಿಕ ಅಸಮಾಧಾನಗೊಂಡಿದ್ದವರು ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು. ಸೋಮಣ್ಣ ಎಂದರೆ ಅಭಿವೃದ್ಧಿ, ಸೋಮಣ್ಣ ಎಂದರೆ ಕಾರ್ಯಕ್ಷಮತೆ ಎಂದು ಬ್ಯಾಟಿಂಗ್ ಬೀಸಿದರು. ವರುಣ ಬಗ್ಗೆ ಹೆಚ್ಚು ಗಮನ ಕೊಡಬೇಕಿರುವುದರಿಂದ ಚಾಮರಾಜನಗರಕ್ಕೆ ಹೆಚ್ಚು ಬರಲಾಗಲ್ಲ, ಇಲ್ಲಿನ ಮುಖಂಡರು, ಕಾರ್ಯಕರ್ತರೇ ಓಡಾಡಿ ಬಿಜೆಪಿ ಸಾಧನೆಗಳನ್ನು ತಿಳಿಸಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ಸೋಮಣ್ಣ ಕೋರಿದರು. ಒಟ್ಟಿನಲ್ಲಿ ಸೋಮಣ್ಣ ಅವರ ಚಾಮರಾಜನಗರದ ಮತಬೇಟೆ ಆರಂಭವಾಗಿದ್ದು ತಮ್ಮದೇ ಸ್ಟೈಲಿನಲ್ಲಿ ಮುಖಂಡರ ಮೂಲಕ ಮತ ಬೇಟೆ ಆರಂಭಿಸಿದ್ದು, ಕಾರ್ಯಕರ್ತರಲ್ಲಿ ಯುದ್ದೋತ್ಸಾಹ ತುಂಬಿದ್ದಾರೆ.
ಚುನಾವಣಾ ಪ್ರಭಾರಿ ಕೋಟೆ ಎಂ. ಶಿವಣ್ಣ, ವಿಧಾನಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ನಿಜಗುಣರಾಜು, ಜಿಪಂ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ರೈತ ಮುಖಂಡ ಅಮ್ಮನಪುರ ಮಲ್ಲೇಶ್, ಡಾ. ಎ.ಆರ್. ಬಾಬು, ಆರ್. ಬಾಲರಾಜು, ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಾನಂದ, ವಿಜಯೇಂದ್ರ, ವೆಂಕಟರಮಣಸ್ವಾಮಿ ಪಾಪು, ಸೋಮನಾಯಕ, ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್, ಉಪಾಧ್ಯಕ್ಷ ವೃಷಬೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಚಾಮುಲ್ ನಿರ್ದೇಶಕ ಬಸವರಾಜಪ್ಪ, ಉಡಿಗಾಲ ಕುಮಾರಸ್ವಾಮಿ, ಪ್ರಭುಸ್ವಾಮಿ.
ಗೋ ಬ್ಯಾಕ್ ಎಂದವರು ಜೊತೆ-ಜೊತೆಯಲಿ, ಡಾ. ಬಾಬು ದೇವರೆಂದ ಸೋಮಣ್ಣ: ಟಿಕೆಟ್ ಘೋಷಣೆಗೂ ಮುನ್ನವೇ ಚಾಮರಾಜನಗರ ಅಭ್ಯರ್ಥಿಯಾಗಿ ಸೋಮಣ್ಣ ಬರಬಾರದೆಂದು ಗೋಬ್ಯಾಕ್ ಸೋಮಣ್ಣ ಎಂದು ಅಬ್ಬರಿಸಿದ್ದವರು ಚಾಮರಾಜನಗರ ಕ್ಷೇತ್ರದಿಂದ ಪ್ರಚಾರ ಆರಂಭಿಸುತ್ತಿದ್ದಂತೆ ಸ್ವಾಗಸಿಸುವ ಮೂಲಕ ಕಹಿ ಘಟನೆ ಮರೆತುಬಿಡಿ ಎನ್ನುವ ಮೂಲಕ ಸಚಿವ ಸೋಮಣ್ಣ ಜೊತೆಗೆ ಹೆಜ್ಜೆಯಾಕಿದರು.ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿರುವ ಸೋಮಣ್ಣ, ಜಾತಿ ಲೆಕ್ಕಾಚಾರ ಹಾಗೂ ಒಳೇಟುಗಳು ಬೀಳದಂತೆ ಜಾಗೃತರಾಗಿದ್ದು ಎಲ್ಲಾ ಸಮುದಾಯದ ಮುಖಂಡರನ್ನು ತಮ್ಮ ಪ್ರಚಾರದ ವೇಳೆ ಕರೆದೊಯ್ಯುತ್ತಿದ್ದಾರೆ. ಅಸಮಾಧಾನಗೊಂಡ ಎಲ್ಲರ ಬಂಡಾಯವನ್ನು ಶಮನಗೊಳಿಸಿ ಹಾದಿ ಸರಳ ಮಾಡಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ: ಸಚಿವ ವಿ.ಸೋಮಣ್ಣ
ವಿವಿಧ ಸಮುದಾಯದ ಎಲ್ಲಾ ಬಿಜೆಪಿ ಮುಖಂಡರು, ಟಿಕೆಟ್ ಆಕಾಂಕ್ಷಿಗಳು, ಮುಖಂಡರನ್ನು ಸೋಮಣ್ಣ ಜೊತೆಯಲ್ಲೇ ಕರೆದು ಮತಬೇಟೆ ನಡೆಸುತ್ತಿದ್ದರೆ. ಸಾಂಪ್ರದಾಯಿಕ ಮತ ಬ್ಯಾಂಕ್ ಆದ ಲಿಂಗಾಯತ ಮತಗಳು ಒಡೆಯದಂತೆ ನೋಡಿಕೊಳ್ಳುವುದು, ನಾಯಕ ಸಮುದಾಯ, ದಲಿತ ಮತಗಳು ಜೊತೆಗೆ ಬಲಗೈ ಮತ ಎಲ್ಲವೂ ಬಿಜೆಪಿಗೆ ಬಂದರೇ ಗೆಲುವು ಸುಲಭ ಎಂಬುದನ್ನು ಅರಿತ ಸೋಮಣ್ಣ ಜಾತಿ ಸಮೀಕರಣ ವರ್ಕೌಟ್ ಮಾಡುತ್ತಿದ್ದಾರೆ. ಬಹಿರಂಗ ಸಭೆ ವೇಳೆ ಡಾ.ಎ.ಆರ್.ಬಾಬು ಅವರನ್ನು ದೇವರು ಎಂದರು. ನಾನು ಗೆದ್ದರೇ ಮಲ್ಲಿಕಾರ್ಜುನಪ್ಪ ಗೆದ್ದಂತೆ ಎನ್ನುವ ಮೂಲಕ ಬಂಡಾಯ ಶಮನಗೊಳಸಿ ಹಾದಿ ಸುಲಭ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.