ಬಾಗಲಕೋಟೆ ನಗರದಲ್ಲಿ ಮಂಗಳವಾರ ನಟ ಕಿಚ್ಚ ಸುದೀಪ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.
ಬಾಗಲಕೋಟೆ (ಮೇ.03): ಬಾಗಲಕೋಟೆ ನಗರದಲ್ಲಿ ಮಂಗಳವಾರ ನಟ ಕಿಚ್ಚ ಸುದೀಪ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಪರ ಭರ್ಜರಿ ಪ್ರಚಾರ ನಡೆಸಿದರು. ನಗರದ ಬಿವಿವಿ ಸಂಘದ ಆವರಣಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರನ್ನು ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ಸ್ವಾಗತಿಸಿದರು. ನಟ ಸುದೀಪ್ ಅವರು ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ, ದಲಿತ ಮುಖಂಡ ಚಲವಾದಿ ನಾರಾಯಣಸ್ವಾಮಿ ಅವರೊಂದಿಗೆ ತೆರೆದ ವಾಹನ ಏರುತ್ತಿದ್ದಂತೆ ಕಿಕ್ಕಿರಿದು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು.
ನಂತರ ಶ್ರೀಬೀಳೂರು ಗುರುಬಸವ ಸ್ವಾಮೀಜಿ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ರಾರಯಲಿಯು ನಗರದ ಟೀಕಿನಮಠ, ಅಡತ ಬಜಾರ, ಪೊಲೀಸ್ ಚೌಕ್, ಮಹಾತ್ಮ ಗಾಂಧಿ ರಸ್ತೆ ಮೂಲಕ ತೆರೆದ ವಾಹನದ ಮೂಲಕ ನಗರದ ಹೃದಯ ಭಾಗ ಬಸವೇಶ್ವರ ಸರ್ಕಲ್‌ಗೆ ತಲುಪಿ ಬೃಹತ್ ರೋಡ್ ಶೋ ಆಗಿ ಸಮಾಪ್ತಿಗೊಂಡಿತು.
undefined
ಬಿಜೆಪಿದು ಡಬಲ್ ಎಂಜಿನ್, ಕಾಂಗ್ರೆಸ್‌ದು ಟ್ರಬಲ್ ಎಂಜಿನ್: ಸಚಿವ ಸುಧಾಕರ್
ಬಾಗಲಕೋಟೆ ಕ್ಷೇತ್ರ ಉಸ್ತುವಾರಿ, ಬಿಹಾರ ಶಾಸಕ ಸಂಜಯಕುಮಾರ ಸಿಂಗ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಮುದೇನೂರ, ರಾಜು ನಾಯ್ಕರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ನಗರ ಮಂಡಳ ಅಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಕೊಣ್ಣೂರ, ಪ್ರಧಾನ ಕಾರ್ಯದರ್ಶಿ ಮಲ್ಲೇಶ ವಿಜಾಪೂರ, ಕಲ್ಲಪ್ಪ ಭಗವತಿ, ಹಿರಿಯರಾದ ಜಿ.ಎಲ್. ಪಾಟೀಲ, ಸತ್ಯನಾರಾಯಣ ಹೇಮಾದ್ರಿ, ಬಸವರಾಜ ಯಂಕಂಚಿ, ಬಸವಲಿಂಗಪ್ಪ ನಾವಲಗಿ, ಕುಮಾರ ಯಳ್ಳಿಗುತ್ತಿ, ಮುರಿಗೆಪ್ಪ ನಾರಾ, ಮಹೇಶ ಅಥಣಿ, ಮಹಾಂತೇಶ ಶೆಟ್ಟರ, ಅಶೋಕ ಸಜ್ಜನ ಸಂಗಪ್ಪ ಹಿತ್ತಲಮನಿ, ರಾಜು ಗಾಣಿಗೇರ, ರಾಜು ಸಿಂತ್ರೆ, ಅಶೋಕ ಪವಾರ, ಕಪ್ಪಯ್ಯ ಮುತ್ತಿನಮಠ, ಪ್ರದೀಪ ರಾಯ್ಕರ್ ಸೇರಿದಂತೆ ಅನೇಕರು ಇದ್ದರು.
ಚರಂತಿಮಠರಿಗೆ ಆಶೀರ್ವಾದ ಮಾಡಿ: ಉತ್ತಮ ಕೆಲಸಗಾರರು ಎಂದು ಖ್ಯಾತಿಯಾಗಿರುವ ಬಾಗಲಕೋಟೆಯ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿಸಬೇಕು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಮನವಿ ಮಾಡಿದರು. ನಗರದ ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ವೀರಣ್ಣ ಅವರಿಗೆ ಈಗಾಗಲೇ ಮೂರು ಬಾರಿ ಆಶೀರ್ವಾದ ಮಾಡಿದ್ದೀರಿ. ಈಗ ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡಿ ಅವರನ್ನು ಬಹಳಷ್ಟುಅಂತರದ ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ: ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಎಚ್‌ಡಿಕೆ ವ್ಯಂಗ್ಯ
ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ವೀರಣ್ಣನವರು ಈಗಾಗಲೇ ಅವರು ನಿಮ್ಮ ಮನಸ್ಸನ್ನು ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಅವರಿಗೆ ಈಗಾಗಲೇ ನೀವು ಮೂರು ಬಾರಿ ಅಶೀರ್ವಾದ ಮಾಡಿದ್ದೀರಿ. ಒಳ್ಳೆಯ ಕೆಲಸಗಾರ ಎನ್ನುವ ಖ್ಯಾತಿ ಅವರಿಗಿದೆ. ವೀರಣ್ಣ ಅವರು ತುಂಬಾ ಸರಳ ವ್ಯಕ್ತಿತ್ವದವರಾಗಿದ್ದಾರೆ. ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.