ಬಿಜೆಪಿದು ಡಬಲ್‌ ಎಂಜಿನ್‌, ಕಾಂಗ್ರೆಸ್‌ದು ಟ್ರಬಲ್‌ ಎಂಜಿನ್‌: ಸಚಿವ ಸುಧಾಕರ್‌

Published : May 03, 2023, 11:44 AM IST
ಬಿಜೆಪಿದು ಡಬಲ್‌ ಎಂಜಿನ್‌, ಕಾಂಗ್ರೆಸ್‌ದು ಟ್ರಬಲ್‌ ಎಂಜಿನ್‌: ಸಚಿವ ಸುಧಾಕರ್‌

ಸಾರಾಂಶ

ಬಿಜೆಪಿಯದು ಡಬಲ್‌ ಎಂಜಿನ್‌ ಸರ್ಕಾರವಾಗಿದ್ದು, ಡಬಲ್‌ ಸ್ಪೀಡ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರದು ಟ್ರಬಲ್‌ ಎಂಜಿನ್‌ ಆಗಿರುವುದರಿಂದ ಅಭಿವೃದ್ಧಿ ಕುಂಠಿತವಾಗಲಿದೆ. ಹಾಗಾಗಿ ಜನ ಡಬಲ್‌ ಎಂಜಿನ್‌ ಸರ್ಕಾರಕ್ಕೆ ಮನ್ನಣೆ ನೀಡಲಿದ್ದಾರೆ ಎಂದು ಡಾ.ಕೆ.ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು.   

ಚಿಕ್ಕಬಳ್ಳಾಪುರ (ಮೇ.03): ಬಿಜೆಪಿಯದು ಡಬಲ್‌ ಎಂಜಿನ್‌ ಸರ್ಕಾರವಾಗಿದ್ದು, ಡಬಲ್‌ ಸ್ಪೀಡ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರದು ಟ್ರಬಲ್‌ ಎಂಜಿನ್‌ ಆಗಿರುವುದರಿಂದ ಅಭಿವೃದ್ಧಿ ಕುಂಠಿತವಾಗಲಿದೆ. ಹಾಗಾಗಿ ಜನ ಡಬಲ್‌ ಎಂಜಿನ್‌ ಸರ್ಕಾರಕ್ಕೆ ಮನ್ನಣೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರ ಜಿಲ್ಲೆಯ ಪೋಶೆಟ್ಟಿ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 60 ವರ್ಷದಿಂದ ದಲಿತ ಸಮುದಾಯಗಳು, ಶೋಷಿತ ವರ್ಗದವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌ ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. 

ಅಕ್ಕಿ ಮಾತ್ರ ನೀಡಿದರೆ ಸಕ್ಕರೆ ಕಾಯಿಲೆ ಇನ್ನಷ್ಟು ಹೆಚ್ಚಾಗಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಅನ್ನ ಮಾತ್ರ ತಿನ್ನುತ್ತಾರಾ, ನೀವು ಮಾತ್ರ ಆರೋಗ್ಯಕರ ಆಹಾರ ಸೇವನೆ ಮಾಡಿ. ಬಡವರಿಗೆ ಅನ್ನ ಕೊಟ್ಟು ಆರೋಗ್ಯ ಕೆಡಿಸಲು ತೀರ್ಮಾನಿಸಿದ್ದೀರಾ ಎಂದು ಪ್ರಶ್ನಿಸಿದ ಸುಧಾಕರ್‌ ಅವರು, ಪ್ರತಿಯೊಂದು ಕುಟುಂಬವೂ ಆರೋಗ್ಯಕರವಾಗಿರಲು ತೀರ್ಮಾನಿಸಿರುವ ಬಿಜೆಪಿ ಹಾಲು, ಸಿರಿ ಧಾನ್ಯ ಮತ್ತು ಅಕ್ಕಿಯನ್ನು ನೀಡುತ್ತಿದೆ ಎಂದರು.

Congress Manifesto: ಮೀಸಲಾತಿ ಏರಿಕೆ! ಕಾಂಗ್ರೆಸ್ ಭರವಸೆ ಕಾರ್ಯಸಾಧುವೇ?

ಸುಧಾಕರ್‌ಗೆ ಗಡಿನಾಡು ರೈತ ಸಂಘದ ಬೆಂಬಲ: ಸಚಿವ ಸುಧಾಕರ್‌ರ ಜನಪರ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಕರ್ನಾಟಕ ರಾಜ್ಯ ಗಡಿನಾಡು ರೈತ ಸಂಘ ಮತ್ತು ಹಸಿರು ಸೇನೆ(ರಿ)ಯ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ ಈ ಚುನಾವಣೆಯಲ್ಲಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಗಡಿನಾಡು ರೈತ ಸಂಘ ಮತ್ತು ಹಸಿರು ಸೇನೆ(ರಿ)ಯ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಟಿ.ಮುನಿರಾಜು ಮಾತನಾಡಿ, ಸಚಿವ ಡಾ.ಕೆ.ಸುಧಾಕರ್‌ ಅವರು 2007 ರಿಂದಲೂ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ನಿಂದ ಸಮಾಜಸೇವೆ ಮಾಡುತ್ತಿದ್ದಾರೆ.

2013 ರಲ್ಲಿ ಶಾಸಕರಾಗಿ ಆಯ್ಕೆಯಾಗಿ ನಂತರ ಸಚಿವರಾಗಿ ರಾಜ್ಯ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು. ರೈತರಿಗಾಗಿ ಹೂವಿನ ಮಾರುಕಟ್ಟೆ, ಹಾಲು ಒಕ್ಕೂಟ ಪ್ರತ್ಯೇಕ ಮಾಡಿದ್ದಾರೆ. ಕ್ಷೇತ್ರದಲ್ಲಿ ವಸತಿ ರಹಿತರಿಗೆ 22 ಸಾವಿರ ನಿವೇಶನ ಹಂಚಿದ್ದು, ಮುಂದೆ ಮನೆಗಳನ್ನು ನಿರ್ಮಾಣ ಮಾಡಿದ ನಾಯಕ ಸಚಿವ ಸುಧಾಕರ್‌. ತಮ್ಮ ತಾಯಿ ಶಾಂತ ಹೆಸರಿನಲ್ಲಿ ಆರು ಶಾಂತಾ ಮೊಬೈಲ್‌ ಕ್ಲಿನಿಕ್‌ ತೆರೆದು ಕ್ಷೇತ್ರದ ಹಳ್ಳಿ ಹಳ್ಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಇದ್ದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ ಎಂದರು.

ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ: ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ದ ಎಚ್‌ಡಿಕೆ ವ್ಯಂಗ್ಯ

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಬಸವರಾಜ್‌ ಜಿಲ್ಲಾ ಘಟಕದ ಪಧಾಧಿಕಾರಿಗಳಾದಶ್ರೀರಾಮಪ್ಪ, ವೆಂಕಟೇಶ್‌,ರಾಜಣ್ಣ,ರಾಮಕೃಷ್ಣಪ್ಪ, ಕದಿರಪ್ಪ ,ಎಸ್‌ ಅರ್‌ ಲಕ್ಷ್ಮೀ, ಎಸ್‌ ಎಂ ಬಾಗ್ಯಮ್ಮ ವಿಜಯ್‌ ಕುಮಾರ್‌ ಇತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ