ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋತು ಆ ಪಕ್ಷದ ಸಿದ್ದರಾಮಯ್ಯ ಕಾಡಿಗೆ ಹೋಗಲಿದ್ದು, ಬಂಡೆ ಖ್ಯಾತಿಯ ಡಿ.ಕೆ. ಶಿವಕುಮಾರ್ ಚೂರು ಚೂರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ವ್ಯಂಗ್ಯವಾಡಿದರು.
ಲಿಂಗಸುಗೂರು (ಫೆ.26) : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋತು ಆ ಪಕ್ಷದ ಸಿದ್ದರಾಮಯ್ಯ ಕಾಡಿಗೆ ಹೋಗಲಿದ್ದು, ಬಂಡೆ ಖ್ಯಾತಿಯ ಡಿ.ಕೆ. ಶಿವಕುಮಾರ್ ಚೂರು ಚೂರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪಯಾತ್ರೆ (BJP Vijaya sankalpa yatre) ಉದ್ಘಾಟಿಸಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್ ಮುಕ್ತ (Congress free Karnataka)ರಾಜ್ಯವಾಗಲಿದ್ದು, ಆ ಪಕ್ಷದ ನಾಯಕರಾದ ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ ಶಿವಕುಮಾರ್(DK Shivakumar) ನಿರುದ್ಯೋಗಿಗಳು ಆಗಲಿದ್ದಾರೆ. ವಿರೋಧ ಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಬಾದಾಮಿ ಜನ ಬೇಡ ಎನ್ನುತ್ತಿದ್ದಾರೆ. ಅತ್ತ ವರುಣಾದಲ್ಲಿ ಸ್ಪರ್ಧೆಗೆ ಅಡ್ಡಿ ಮಾಡುತ್ತಿದ್ದಾರೆ. ಕೋಲಾರದಲ್ಲೂ ಸ್ಪರ್ಧೆ ಬೇಡ ಎಂದು ತಡೆಯುತ್ತಿದ್ದಾರೆ. ಪರಿಣಾಮ ಸಿದ್ದರಾಮಯ್ಯನವರಿಗೆ ಸೀಟ್ ಇಲ್ಲಾ, ಕಾಂಗ್ರೆಸ್ ಓಟು ಇಲ್ಲಾ ಎಂಬ ಪರಸ್ಥಿತಿ ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.
undefined
ರಾಯಚೂರು ನಗರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್ ಲೆಕ್ಕಾಚಾರ
ಮುಸ್ಲಿಂಮರ ಪರವಾಗಿ ಬಿಜೆಪಿ ಇದೆ. ಅದರಂತೆ ಅಬ್ದುಲ್ ಕಲಾಂ(APJ Abdul kalam)ರನ್ನು ರಾಷ್ಟ್ರಪತಿಯನ್ನಾಗಿ ನೇಮಿಸಿತು. ಇತ್ತೀಚೆಗೆ ಆಂದ್ರಪ್ರದೇಶ ರಾಜ್ಯಪಾಲರಾಗಿ ನೇಮಕಗೊಂಡ ಸೈಯದ್ ಅಬ್ದುಲ್ ನಜೀರ್(Governor Syed Abdul Nazir)ರಂತಹ ದೇಶ ಭಕ್ತ ಮುಸ್ಲಿಂಮರನ್ನು ಮುಂಚೂಣಿಗೆ ತಂದು ಅಧಿಕಾರ ನೀಡಿದ್ದೇವೆ. ಕಾಂಗ್ರೆಸ್ ಮತ್ತು ಅದರ ನಾಯಕರು ದೇಶ ವಿರೋಧಿ, ಭಯೋತ್ಪಾದಕ ಮುಸ್ಲಿಂಮರ ಪರವಿದ್ದು, ಮಂಗಳೂರಲ್ಲಿ ಬಾಂಬ್ ಹಾಕಿದವರ ಪರವಾಗಿ ಕಣ್ಣೀರು ಹಾಕುವ ಸಿದ್ದರಾಮಯ್ಯನವರಿಗೆ ತಮ್ಮ ಆಡಳಿತದ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡರು ಕಣ್ಣೀರು ಬರಲಿಲ್ಲಾ ಎಂದು ತರಾಟೆಗೆ ತೆಗೆದುಕೊಂಡರು.
ಪಾಕಿಸ್ತಾನದ ಪ್ರಜೆಗಳು ಪ್ರಧಾನಿ ಮೋದಿ(PM Narendra Modi) ಆಡಳಿತ ಮೆಚ್ಚಿಕೊಂಡು ಪಾಕಿಸ್ತಾನಕ್ಕೆ ಮೋದಿಯನ್ನು ಪ್ರಧಾನಿಯನ್ನಾಗಿ ನೇಮಿಸಿ ಇಲ್ಲಾ ಭಾರತದೊಳಗೆ ಸೇರಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಮೋದಿಯಂತಹ ವಿಶ್ವನಾಯಕನ್ನು ಅಮೇರಿಕಾದಂತಹ ದೇಶಗಳು ಮೆಚ್ಚಿಕೊಂಡಿವೆ. ರಷ್ಯಾ-ಉಕ್ರೇನ್ ಯುದ್ದದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಾರತದ 6 ಸಾವಿರ ವಿದ್ಯಾರ್ಥಿಗಳನ್ನು ಕರೆ ತರಲು 6 ಭಾರಿ ಯುದ್ಧ ನಿಲ್ಲಿಸಿ ದೇಶದ ವಿದ್ಯಾರ್ಥಿಗಳ ಪ್ರಾಣ ಕಾಪಾಡಿದವರು ಮೋದಿ ಎಂದು ತಿಳಿಸಿದರು.
ವೀರಶೈವ ಧರ್ಮ(Veerashaiva Dharma) ಒಡೆದು, ಟಿಪ್ಪು ಜಯಂತಿ ಆಚರಿಸಿ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣರಾಗಿ, 30 ಸಾವಿರ ಜನರ ಮೇಲೆ ರೌಡಿಶೀಟ್ ಪ್ರಕರಣ ದಾಖಲಿಸಿದರು. ಮರಳು, ಭೂ, ಡ್ರಗ್‌್ಸ ಮಾಫಿಯಾದ ಕ್ರಿಮಿನಲ್ ಆಡಳಿತ ನೀಡಿದ ಸಿದ್ದರಾಮಯ್ಯನವರಿಂದ ಜನರು ದೂರ ಹೋಗುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Karnataka Budget 2023: ರಾಯಚೂರಿಗೆ ಜಿಲ್ಲೆಗೆ ಕಹಿಯಾದ ಕೊನೆ ಬಜೆಟ್
ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ(MP Raja amareshwar Nayak), ಮಾಜಿ ಶಾಸಕ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿದ್ದರಾಜು, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಗಂಗಾಧರ ನಾಯಕ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಉಮೇಶ ಸಜ್ಜನ್, ಶರಣಪ್ಪಗೌಡ, ಗಿರಿಮಲ್ಲನಗೌಡ, ಡಾ.ಶಿವಬಸ್ಸಪ್ಪ, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಬಾವಿ, ಶಶಿಕಲಾ, ಬಸ್ಸಮ್ಮ ಪರಮೇಶ ಯಾದವ್ ಸೇರಿದಂತೆ ಇದ್ದರು.