Karnataka Election 2023: ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ

By Govindaraj S  |  First Published May 10, 2023, 12:45 PM IST

ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಸ್ಥಾನ ಹೆಚ್ಚಳವಾಗುವ ಸಾಧ್ಯತೆ ಇದೆ. ಕಿತ್ತೂರು ಕರ್ನಾಟಕದಲ್ಲಿ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಸವಣೂರು (ಮೇ.10): ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಸ್ಥಾನ ಹೆಚ್ಚಳವಾಗುವ ಸಾಧ್ಯತೆ ಇದೆ. ಕಿತ್ತೂರು ಕರ್ನಾಟಕದಲ್ಲಿ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯದ ಜನರು ಶಾಂತಪ್ರಿಯರು. ಕಳೆದ ಬಾರಿ 2018ರ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿತ್ತು. ಎಸ್ ಡಿಪಿಐ ಮತ್ತು ಪಿಎಫ್ ಐ ಗಲಾಟೆ, ಹಾವಳಿ ಹೆಚ್ಚಾಗಿತ್ತು ಎಂದರು

ಈ ಬಾರಿ ಸೌಹಾರ್ದ ವಾತಾವರಣವಿದ್ದು, ಜನರು ನಮ್ಮ ಸರ್ಕಾರದ ಪರ ನಿಂತಿದ್ದಾರೆ. ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಉದ್ದೇಶವಿಲ್ಲ.  224 ಕ್ಷೇತ್ರಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ಅಭಿವೃದ್ಧಿ ಯೋಜನೆ ಬಗ್ಗೆ ಜನರಿಗೆ ಒಲವು ಇದೆ. ನೆರೆ ಪರಿಹಾರ, ಕೋವಿಡ್ ನಿರ್ವಹಣೆ ಮತ್ತು ಮೀಸಲಾತಿ ಹೆಚ್ಚಳದಿಂದ ಜನರ ಅಭಿಪ್ರಾಯ ಬಿಜೆಪಿ ಸರ್ಕಾರದ ಕಡೆ ಇದೆ. ಪ್ರಧಾನಿ ಮೋದಿ ಅವರು ಬಂದು ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡಿದ್ದು, ಪಕ್ಷಕ್ಕೆ ಆನೆಯ ಬಲ ತಂದಿದೆ. 

Tap to resize

Latest Videos

ಬೊಮ್ಮಾಯಿ ಮತ್ತೆ ಸಿಎಂ ಆದರೆ ಅಭ್ಯಂತರ ಇಲ್ಲ: ಬಿ.ಎಸ್‌.ಯಡಿಯೂರಪ್ಪ

ಹಾವೇರಿ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿ 6ರಲ್ಲೂ ಗೆಲ್ಲುತ್ತೇವೆ. ಲಕ್ಷ್ಮಣ ಸವದಿ ಮತ್ತು ಶೆಟ್ಟರ್ ಸ್ಪರ್ಧಿಸಿರುವ ಅಥಣಿ, ಹುಬ್ಬಳ್ಳಿ ಸೆಂಟ್ರಲ್ ಈ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ.  ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ಈ ಹೊಸ ಪ್ರಯೋಗ ಪಕ್ಷಕ್ಕೆ ಯಶಸ್ಸು ತಂದುಕೊಡಲಿದೆ ಎಂದು ಬೊಮ್ಮಾಯಿ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ತಪ್ಪು ಮಾಡಿದವರ ಮೇಲೆ ದಾಳಿ ಸಹಜ: ಯಾರು ತಪ್ಪು ಮಾಡುತ್ತಾರೆ ಅವರ ಮೇಲೆ ಐಟಿ ದಾಳಿಯಾಗುತ್ತದೆ. ಎದುರಾಳಿಗಳು ನನ್ನ ಮೇಲೆ ಆರೋಪ ಮಾಡುವುದು ಸಹಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿ, ಹಾವೇರಿಯಲ್ಲಿ ಕೆಲ ಮುಖಂಡರ ಮನೆ ಮನೆ ಮೇಲೆ ಐಟಿ ದಾಳಿಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ತಪ್ಪು ಮಾಡಿದವರ ಮನೆ ಮೇಲೆ ದಾಳಿ ಸಹಜ. 

ಬಜರಂಗ ದಳ ಮುಟ್ಟುವ ತಾಕತ್ತು ಯಾರಿಗಿದೆ?: ಸಿಎಂ ಬೊಮ್ಮಾಯಿ ಸವಾಲು

ಅದೇ ರೀತಿ ನಮ್ಮ ಮೇಲೆ ಅವರು ಆರೋಪ ಮಾಡುವುದೂ ಸಹಜ ಎಂದರು. ಕಾಂಗ್ರೆಸ್‌ನಿಂದ ಹೋಮ ಹವನ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ತಂತ್ರ-ಮಂತ್ರ ಎಲ್ಲ ಈಗ ನಡೆಯುವುದಿಲ್ಲ. ನಮಗೆ ವಿಶ್ವಾಸವಿದೆ ಬಿಜೆಪಿ ಯೇ ಅಧಿಕಾರಕ್ಕೆ ಬರುವುದು, ರಾಜ್ಯದಲ್ಲಿ ಬಿಜೆಪಿಯಿಂದಲೇ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!