ಉತ್ತರ ಕನ್ನಡದಲ್ಲಿ ಅಮೆರಿಕಾದಿಂದ ಬಂದು ಮಹಿಳೆಯೊಬ್ಬಳು ಮತದಾನ ಮಾಡಿ ಸುದ್ದಿಯಾಗಿದ್ದರೆ, ದಾವಣಗೆರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಮೆರಿಕದಿಂದ ವೋಟ್ ಮಾಡಲು ಬಂದಿದ್ದ ವ್ಯಕ್ತಿಗೆ ನಿರಾಸೆಯಾಗಿದೆ.
ದಾವಣಗೆರೆ (ಮೇ.10): ದೂರದ ಊರುಗಳಿಂದ ವೋಟ್ ಹಾಕೋಕೆ ಬಂದಿರೋದು ಸಾಕಷ್ಟು ಸುದ್ದಿಯಾಗಿದೆ. ಆದರೆ, ವಿದೇಶಗಳಿಂದ ತಮ್ಮೂರಿಗೆ ಬಂದು ವೋಟ್ ಹಾಕೋಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ನಿರಾಸೆಯಾಗಿದೆ. ಬರೋಬ್ಬರು ಒಂದು ವಾರದ ರಜೆ ಹಾಗೂ ಎರಡು ಲಕ್ಷ ರೂಪಾಯಿ ಖರ್ಚು ಮಾಡಿಕೊಂಡು ಅಮೆರಿಕದಿಂದ ಬಂದ ವ್ಯಕ್ತಿಗೆ, ವೋಟ್ ಮಾಡಲು ತೆರಳಿದಾಗಲೇ, ತಮ್ಮ ಹೆಸರು ವೋಟರ್ ಲಿಸ್ಟ್‌ನಿಂದ ಡಿಲೀಟ್ ಆಗಿರೋದು ಗೊತ್ತಾಗಿದೆ. ಅದರ ಬೆನ್ನಲ್ಲಿಯೇ ಅವರಿಗೆ ಅಧಿಕಾರಿಗಳು ವೋಟ್ ನಿರಾಕರಿಸಿದ್ದಾರೆ. ಇದರಿಂದಾಗಿ ಮತ ಚಲಾಯಿಸಲು ಅಮೆರಿಕಾದಿಂದ ಬಂದಿದ್ದ ವ್ಯಕ್ತಿಗೆ ನಿರಾಸೆಯಾಗಿದೆ. ಮತಪಟ್ಟಿಯಿಂದ ತಮ್ಮ ಹೆಸರು ಮಾಯವಾಗಿದ್ದಕ್ಕೆ ಅವರು ಆಘಾತವನ್ನೂ ವ್ಯಕ್ತಪಡಿಸಿದ್ದರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲು ಬಂದಿದ್ದ ರಾಘವೆಂದ್ರ ಶೇಟ್‌ಗೆ ಮತಗಟ್ಟೆಗೆ ಬಂದಾಗಲೇ ಈ ವಿಚಾರ ತಿಳಿಸಿದೆ. ದಾವಣಗೆರೆ ಮೂಲದ ಮತದಾರರಾಗಿರುವ ರಾಘವೇಂದ್ರ ಶೇಟ್ ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದು, ಪ್ರಮುಖ ಚುನಾವಣೆ ಸಂದರ್ಭದಲ್ಲಿ ಊರಿಗೆ ಬಂದು ಮತದಾರ ಮಾಡುತ್ತಿದ್ದರು. ಈ ಬಾರಿ ವಿಧಾನಸಭಾ ಚುನಾವಣೆ ಹಿನ್ನಲೆ ಮತದಾನಕ್ಕಾಗಿ ಒಂದು ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿಕೊಂಡು ಕೆಲ ದಿನಗಳ ಹಿಂದೆಯಷ್ಟೇ ದಾವಣೆಗೆರೆಗೆ ಬಂದಿದ್ದರು.
Karnataka Elections 2023 LIVE: 11ರ ಹೊತ್ತಿಗೆ ರಾಜ್ಯದೆಲ್ಲೆಡೆ ಶೇ.21 ರಷ್ಟು ಮತದಾನ
undefined
ಮತ ಚಲಾವಣೆಗಾಗೆ ಒಂದು ವಾರ ರಜೆ, ಎರಡು ಲಕ್ಷ ಖರ್ಚು ಮಾಡಿ ಬಂದಿದ್ದೇನೆ ಎಂದು ರಾಘವೇಂದ್ರ ಶೇಟ್ ತಿಳಿಸಿದ್ದಾರೆ. ನಗರದ ಬಕೇಶ್ವರ ಶಾಲೆ ಮತಗಟ್ಟೆ ಸಂಖ್ಯೆ 74 ರಲ್ಲಿ ಅವರು ಮತದಾನ ಮಾಡಬೇಕಿತ್ತು. ಜನವರಿ ತಿಂಗಳ ಲಿಸ್ಟ್‌ನಲ್ಲಿ ಚೆಕ್ ಮಾಡಿದಾಗ ಮತಪಟ್ಟಿಯಲ್ಲಿ ಹೆಸರಿತ್ತು. ಮತಪಟ್ಟಿಯಿಂದ ಹೆಸರು ಮಾಯವಾಗಿದ್ದರ ಬಗ್ಗೆ ರಾಘವೇಂದ್ರ ಶೇಟ್ ಬೇಸರ ವ್ಯಕ್ತಪಡಿಸಿದ್ದಾರೆ.
Karnataka Election 2023: ಅಮೆರಿಕಾದಿಂದ ಬಂದು ಮತದಾನ ಮಾಡಿದ ಮಹಿಳೆ!