Karnataka Election 2023: ಖಾದಿ ಮಾತ್ರವಲ್ಲ, ಖಾವಿ ತೊಟ್ಟವರಿಂದಲೂ ಮತ ಜವಾಬ್ದಾರಿ!

By Santosh Naik  |  First Published May 10, 2023, 10:48 AM IST

ಕರ್ನಾಟಕ ಮತಸಮರಲ್ಲಿ ಬುಧವಾರ ನಿರ್ಣಾಯಕ ದಿನ. ಈ ಹಂತದಲ್ಲಿ ಖಾದಿ ತೊಟ್ಟ ರಾಜಕೀಯ ಕ್ಷೇತ್ರದವರು ಮಾತ್ರವಲ್ಲ, ಖಾವಿ ತೊಟ್ಟ ಸ್ವಾಮೀಜಿಗಳೂ ಕೂಡ ತಮ್ಮ ಮತ ಹಕ್ಕನ್ನು ವಿವಿಧ ಕೇಂದ್ರಗಳಲ್ಲಿ ಚಲಾಯಿಸಿದರು.
 


ಬೆಂಗಳೂರು (ಮೇ.10): ರಾಜ್ಯದ ನಿರ್ಣಾಯಕ ಮತಸಮರದಲ್ಲಿ ಬುಧವಾರ ಪ್ರಮುಖ ದಿನ. ಇಡೀ ರಾಜ್ಯಾದ್ಯಂತ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಖಾದಿ ತೊಟ್ಟ ರಾಜಕಾರಣಿಗಳು ಮಾತ್ರವಲ್ಲ, ಖಾವಿ ತೊಟ್ಟ ಸ್ವಾಮೀಜಿಗಳು, ಮಠಾಧೀಶರು ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಚಿತ್ರದುರ್ಗ, ಬೆಂಗಳೂರು, ಚಿಕ್ಕೋಡಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸ್ವಾಮೀಜಿಗಳು ಮತ ಚಲಾವಣೆ ಮಾಡಿದ್ದಾರೆ. ಚಿಕ್ಕೋಡಿಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮತದಾನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸರಕಾರಿ ಶಾಲೆಗೆ ತೆರಳಿ ತಮ್ಮ ಮತಹಕ್ಕು ಚಲಾಯಿಸಿದ್ದಾರೆ. ಮತದಾನ‌ ಪವಿತ್ರವಾಗಿದೆ ಎಲ್ಲರೂ ಮತದಾನ ಮಾಡುವಂತೆ ಶ್ರೀಗಳು ಈ ವೇಳೆ ಮನವಿ ಮಾಡಿದ್ದಾರೆ. ಇನ್ನೂ ಚಿತ್ರದುರ್ಗದಲ್ಲಿ ಮತದಾನಕ್ಕೆ ವಿವಿಧ ಮಠಗಳ ಶ್ರೀಗಳು ಒಟ್ಟಾಗಿ ಆಗಮಿಸಿದ್ದರು. ಮಠದ ಕುರುಬರಹಟ್ಟಿ ಮತಗಟ್ಟೆ ಸಂಖ್ಯೆ 53ಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ. ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕುಂಚಿಟಿಗ ಮಠದ ಶಾಂತವೀರ ಶ್ರೀ, ಬೋವಿಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಮಾಚಿದೇವ ಮಠದ ಬಸವ ಮಾಚಿದೇವ ಶ್ರೀ, ಚಲವಾದಿ ಮಠದ ಬಸವ ನಾಗಿದೇವ ಶ್ರೀ, ಯಾದವ ಮಠದ ಶ್ರೀಕೃಷ್ಣ ಯಾದವ ಶ್ರೀ ಸೇರಿ ವಿವಿಧ ಮಠಾಧೀಶರಿಂದ‌ ಮತದಾನ ನಡೆದಿದೆ.

ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಶ್ರೀ ಮತದಾನ ಚಲಾವಣೆ ಮಾಡಿದ್ದಾರೆ. ಮತದಾನದ ಬಳಿಕ ಮಾತನಾಡಿದ ಮಾದಾರ ಚನ್ನಯ್ಯ ಶ್ರೀ,  ಇಂದು ಸಂವಿಧಾನಬದ್ಧ ಹಬ್ಬ ಆಚರಿಸುತ್ತಿದ್ದೇವೆ. ಎಲ್ಲರೂ ಮನೆಯಿಂದ ಹೊರ ಬಂದು ಮತ ಚಲಾಯಿಸಬೇಕು. ಮತದಾನದ ಮೂಲಕ ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು. ಸೂಕ್ತ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವುದು ಕರ್ತವ್ಯ. ಯಾರೂ ಸಹ ಶಾಂತಿ ಕದಡುವ ಕೆಲಸ ಮಾಡಬಾರದು. ಶಾಂತಿಯುತ ಮತದಾನಕ್ಕೆ ಎಲ್ಲರೂ ಒತ್ತು ನೀಡಬೇಕು. ಕರ್ತವ್ಯ, ಜವಬ್ದಾರಿ ಅರಿತು ಸಾಮಾಜಿಕ ಜವಾಬ್ದಾರಿ ಕಾಪಾಡಬೇಕು ಎಂದು ಹೇಳಿದ್ದಾರೆ.

ಇನ್ನು ಚಿತ್ರದುರ್ಗದಲ್ಲಿ ಬೆಳಗ್ಗೆ 9 ಗಂಟೆಯ ವೇಳೆಗೆ ಮೊಳಕಾಲ್ಮೂರು - ಶೇ.8.6, ಚಳ್ಳಕೆರೆ -ಶೇ.3.6, ಚಿತ್ರದುರ್ಗ- ಶೇ.8.37, ಹಿರಿಯೂರು-ಶೇ. 5.1, ಹೊಸದುರ್ಗ-ಶೇ.4.67, ಹೊಳಲ್ಕೆರೆ -ಶೇ.5.44 ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ.6.08ರಷ್ಟು ಮತದಾನ ನಡೆದಿದೆ.

ಶ್ರೀಕ್ಷೇತ್ರ ಸೋದೆಯ ಜೈನ ಮಠದ  ಶ್ರೀ ಭಟ್ಟಾಕಲಂಕ ಭಟ್ಟಾರಕ  ಸ್ವಾಮೀಜಿಯವರು , ಶಿರಸಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 12 ಸ,ಹಿ, ಪ್ರಾ, ಶಾಲೆ ಖಾಸಾಪಾಲ  ರಲ್ಲಿ ಪ್ರಥಮವಾಗಿ ಮತ ಚಲಾವಣೆ ಮಾಡಿದರು.

Tap to resize

Latest Videos

Karnataka Election 2023: ಅಮೆರಿಕಾದಿಂದ ಬಂದು ಮತದಾನ ಮಾಡಿದ ಮಹಿಳೆ!

ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಯುಂದ ಮತ:
ಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಮಠದ  ಸ್ವಾಮೀಜಿ, ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳಿಂದ  ಮತದಾನಕ್ಕೆ ಕರೆ ನೀಡಲಾಗಿದೆ. ಹರಿಹರಪುರದ ಸರ್ಕಾರಿ ಶಾಲೆಯಲ್ಲಿ ಸ್ವಾಮೀಜಿ ಮತದಾನ ಮಾಡಿದ್ದಾರೆ. ಮತದಾನ ನೆರವೇರಿಸಿದ ಬಳಿಕ ಜನರಿಗೆ ಸ್ವಾಮೀಜಿ ಕರೆ ನೀಡಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರದ ಶಾರದಾ ಲಕ್ಷ್ಮಿ ನರಸಿಂಹ ಪೀಠ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಮಠದ ಸ್ವಾಮೀಜಿ ಇವರಾಗಿದ್ದಾರೆ.

Karnataka Elections 2023 LIVE: ದಕ್ಷಿಣ ಕನ್ನಡದಲ್ಲಿ ಶೇ.12, ಒಟ್ಟಾರೆ ಶೇ8ರಷ್ಟು ಮತದಾನ 

ಸಿದ್ದಲಿಂಗ ಶ್ರೀಗಳಿಂದ ಮತದಾನ:
ತುಮಕೂರಿನಲ್ಲಿ ಮತಚಲಾವಣೆ ಮಾಡಿದ ಸಿದ್ಧಲಿಂಗ ಶ್ರೀಗಳು ಜನರು ಮತಚಲಾವಣೆ ಮಾಡುವಂತೆ ಕರೆ ನೀಡಿದರು. ಇದು ಪ್ರಜಾಪ್ರಭುತ್ವದ ಹಕ್ಕು,ಎಲ್ಲರೂ ಬಂದು ಮತದಾನ ಮಾಡಬೇಕು. ಭಾರತೀಯ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವ ಇರುವಂತಹದ್ದು. ನಮ್ಮದೆ ಪ್ರತಿನಿಧಿಗಳನ್ನ ಆಯ್ಕೆ ಮಾಡಿಕೊಳ್ಳುವಂತ ವ್ಯವಸ್ಥೆ ಇರುವಂತಹದ್ದು. ಸಂವಿಧಾನ ಕೊಟ್ಟಿರುವ ಹಕ್ಕನ್ನ ಪ್ರತಿಯೊಬ್ಬರು ಚಲಾವಣೆ ಮಾಡಬೇಕು. ಯಾರು ಕೂಡ ಮನೆಯಲ್ಲಿ ಉಳಿಯದೇ ಪ್ರಜಾಪ್ರಭುತ್ವದ ಯಶಸ್ವಿ ಗೆ ಮತದಾನ ಮಾಡಬೇಕು. ನ್ಯಾಯ ಮತ್ತು ಮುಕ್ತವಾದ ರೀತಿಯಲ್ಲಿ ಮತದಾನ ಮಾಡುವಂತಹದ್ದು. ನೂರಕ್ಕೆ ನೂರು ಮತದಾನ ಆಗುವಂತಹದ್ದು ಬಹಳ ಅಪರೂಪವಾಗಿದೆ. ನೂರಕ್ಕೆ ನೂರು ಮತದಾನ ಆದಾಗ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆ ಯಶಸ್ವಿ ಆಗುತ್ತದೆ. ನಮ್ಮ ಮತ ಅಮೂಲ್ಯ ಆಗಿರುವಂತಹದ್ದು ಯಾವುದೇ ಆಮಿಷಗಳಿಗೆ ಒಳಗಾಗೋದು ಬಹಳ ತಪ್ಪು. ಅದಕ್ಕೆ ಕೋಟಿ ಕೊಟ್ಟರೂ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಷ್ಟು ಬೆಲೆ ಬಾಳುವ ಮತವನ್ನ ಆಮಿಷಗಳಿಗೆ ಒಳಗಾಗದೇ ಮತ ಚಲಾವಣೆ ಮಾಡಬೇಕು ಎಂದು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಶ್ರೀ ಹೇಳಿಕೆ ನೀಡಿದ್ದಾರೆ.

click me!