ಜೂ.4ಕ್ಕೆ ಪ್ರಧಾನಿ ಮೋದಿ ಕೆಳಗಿಳಿಯುತ್ತಾರೆ; ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ರಣದೀಪ್ ಸುರ್ಜೇವಾಲಾ

By Ravi Janekal  |  First Published Apr 21, 2024, 5:03 PM IST

ರಾಜ್ಯದಲ್ಲಿ ಬಿಜೆಪಿ ನಾಯಕರು ಕೋಟಿಗಟ್ಟಲೇ ಹಣವನ್ನ ಕಾರಿನಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ (ಮಾರ್ಚ್ 27) ಹಣವನ್ನ ಡ್ರಾ ಮಾಡಿದ ತಿಂಗಳ ಬಳಿಕ ಆ ಹಣವನ್ನ ತೆಗೆದು ಕೊಂಡು ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಕರ್ನಾಟಕ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ವಿರುದ್ಧ ಆರೋಪಿಸಿದರು.


ಚಾಮರಾಜನಗರ (ಏ.21): ರಾಜ್ಯದಲ್ಲಿ ಬಿಜೆಪಿ ನಾಯಕರು ಕೋಟಿಗಟ್ಟಲೇ ಹಣವನ್ನ ಕಾರಿನಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ (ಮಾರ್ಚ್ 27) ಹಣವನ್ನ ಡ್ರಾ ಮಾಡಿದ ತಿಂಗಳ ಬಳಿಕ ಆ ಹಣವನ್ನ ತೆಗೆದು ಕೊಂಡು ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಕರ್ನಾಟಕ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ವಿರುದ್ಧ ಆರೋಪಿಸಿದರು.

ಇಂದು ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ಕಿಲೋ ಮೀಟರ್ ದೂರಕ್ಕೆ ಹಣವನ್ನ ವರ್ಗಾವಣೆ ಮಾಡಲು ಒಂದು ತಿಂಗಳು ಬೇಕಾ? ಮೈಸೂರು ಚಾಮರಾಜನಗರಕ್ಕೆ ಈ ಹಣ ಬಂದು ತಲುಪಿದೆ. ಇನ್ ಕಮ್ ಟ್ಯಾಕ್ಸ್ ಇಲಾಖೆ ಕೇಂದ್ರ ಸರ್ಕಾರದ ಪರವಿದೆ. ಹೀಗಾಗಿ ಯಾವುದೇ ಕ್ರಮ ಜರುಗಿಸಿಲ್ಲ. ಇನ್ನು ಕೇಂದ್ರ ಚುನಾವಣಾ ಆಯೋಗದ ನಡೆ ಕೂಸ ಅನುಮಾನ ಹುಟ್ಟು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಮೋದಿ ದೇಶಕ್ಕೆ ಹಿಡಿದಿರುವ ಶನಿ; ಜೂ.4ರ ಬಳಿಕ ಬಿಟ್ಟು ಹೋಗಲಿದೆ; ಪ್ರಧಾನಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಂದನೆ!

ಕರ್ನಾಟಕದಲ್ಲಿ ಮನಿ ಲ್ಯಾಂಡರಿಂಗ್ ಆಗ್ತಿದೆ. ಇದಕ್ಕೆ ನೇರವಾಗಿ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಆಶೋಕ್ ಉತ್ತರಿಸಬೆಕಾಗಿದೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕ ಜನತೆಗೆ ಉತ್ತರಿಸಬೇಕಾಗಿದೆ ಎಂದು ಮಾತಿನುದ್ದಕ್ಕೂ ಬಿಜೆಪಿ ನಾಯಕರು ಹಾಗು ಕೇಂದ್ರದ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ 1.25 ಕೋಟಿ ಮಹಿಳೆಯರು ಗ್ಯಾರಂಟಿ ಯೋಜನೆಯ ಪಲಾನುಭವಿಗಳು ಇದ್ದಾರೆ. ಮಹಿಳೆಯರಿಗೆ ಹಣ ತಲುಪುತ್ತಿರುವುದನ್ನ ತಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ. ಗ್ಯಾರಂಟಿ ಯೋಜನೆಯಿಂದ ಬಿಜೆಪಿಗೆ ಏನು ಸಮಸ್ಯೆಯಾಗಿದೆ? ನಾವು ಯಾವುದೇ ಕಾರಣಕ್ಕೂ ಈ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ
ಜನರ ಆಶೀರ್ವಾದ ಇದ್ರೆ ಕೇವಲ ಐದು ವರ್ಷ ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿಯೂ ಗ್ಯಾರಂಟಿ ಯೋಜನೆ ಜಾರಿಯಿರುತ್ತದೆ. ಜೂನ್ 4ಕ್ಕೆ ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರೆ ಅದನ್ನು ನೀವು ನೋಡ್ತೀರ ಎಂದರು.

ಮೋದಿ ಅವರ 10 ವರ್ಷದ ಆಡಳಿತದಲ್ಲಿ ಕ್ರಾಂತಿಕಾರಿ ಯೋಜನೆ ಅನುಷ್ಠಾನ: ತೇಜಸ್ವಿ ಸೂರ್ಯ

ಭದ್ರಾ ಯೋಜನೆ ಏನಾಯ್ತು? ನ್ಯಾಷನಲ್ ಹೈವೇ ಕಾಮಗಾರಿ ಏನಾಯ್ತು? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದ ಕೇಂದ್ರ ಸರ್ಕಾರ ಈಗ ರೈತರ ಕೈಗೆ ಚೊಂಬು ಕೊಟ್ಟಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರ(Chamarajanagar Lok sabha congress candidate) ದ ಅಭ್ಯರ್ಥಿ ಯುವಕರಿದ್ದಾರೆ, ಉತ್ಸಾಹಿಗಳಿದ್ದಾರೆ. ಈ ಬಾರಿ ಕಾಂಗ್ರೆಸ್ ನಿಂದ  28 ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ಯುವಕರಿಗೆ ಅವಕಾಶವನ್ನ ಮಾಡಿಕೊಟ್ಟಿದೆ. ನಮ್ಮ ಪಕ್ಷದ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆಕ ಯುವಕರಿಗೆ ಆದ್ಯತೆ ನೀಡಿದ್ದಾರೆ ಎಂದರು.

click me!