ಶಾಸಕರು, ಪರಿಷತ್ ಸದಸ್ಯರು ಅಲ್ಲದ ಬೋಸರಾಜು ಪ್ರಮಾಣವಚನ, ರಾಜೀನಾಮೆಗೆ ಸಜ್ಜಾದ ಕೆಲ ಕಾಂಗ್ರೆಸ್ ನಾಯಕರು

By Suvarna News  |  First Published May 27, 2023, 1:19 PM IST

ಟಿಕೆಟ್ ಆಕಾಂಕ್ಷಿಯಾಗಿದ್ದ ಬೊಸರಾಜುಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಇತ್ತ ವಿಧಾನಪರಿಷತ್ ಸದಸ್ಯರೂ ಆಗಿಲ್ಲ. ಆದರೆ ಹೈಕಮಾಂಡ್ ಬೋಸರಾಜುಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಇದು ಮಂತ್ರಿಗಿರಿ ಸಿಗದ ಇತರ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ನಾಯಕರು ರಾಜೀನಾಮೆಗೆ ಮುಂದಾಗಿದ್ದಾರೆ


ಬೆಂಗಳೂರು(ಮೇ.27): ಕರ್ನಾಟಕ ಸಂಪುಟಕ್ಕೆ 24 ಸಚಿವರು ಸೇರಿಕೊಂಡಿದ್ದಾರೆ. ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಭೋಧಿಸಿದರು.  24 ನೂತನ ಸಚಿವರ ಪೈಕಿ ಎನ್ಎಸ್ ಬೋಸರಾಜುಗೆ ಮಂತ್ರಿಸ್ಥಾನ ಇದೀಗ ಹಲವು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಬೋಸರಾಜು ಶಾಸಕರೂ ಅಲ್ಲ, ಪರಿಷತ್ ಸದಸ್ಯರೂ ಅಲ್ಲ. ಆದರೆ ಕೊಟ್ಟ ಮಾತಿನಂತೆ ಹೈಕಮಾಂಡ್ ಬೋಸರಾಜುಗೆ ಮಂತ್ರಿಸ್ಥಾನ ನೀಡಿದೆ. ಇದರಂತೆ ಹಲವು ನಾಯಕರಿಗೆ ಹೈಕಮಾಂಡ್ ಭರವಸೆ ನೀಡಿತ್ತು. ಆದರೆ ಅವರಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಇದರಿಂದ ಬಿಕೆ ಹರಿಪ್ರಸಾದ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. 

 ವಿಧಾನಸಭೆ ಸದಸ್ಯರೂ ಅಲ್ಲದ ವಿಧಾನಪರಿಷತ್‌ ಸದಸ್ಯರೂ ಅಲ್ಲದ ಎನ್‌.ಎಸ್‌.ಬೋಸರಾಜು ಕಡೆ ಕ್ಷಣದಲ್ಲಿ ಆಕಾಂಕ್ಷಿ ಪಟ್ಟಿಗೆ ಸೇರ್ಪಡೆಯಾಗಿ ಅಂತಿಮ ಪಟ್ಟಿಯಲ್ಲೂ ಸ್ಥಾನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿಧಾನ ಪರಿಷತ್‌ನಿಂದ ಬಿ.ಕೆ.ಹರಿಪ್ರಸಾದ್‌, ಸಲೀಂ ಅಹಮದ್‌ ಅವರಿಗೆ ಅವಕಾಶ ನೀಡುವ ನಿರೀಕ್ಷೆಯಿತ್ತು. ಆದರೆ ಅಂತಿಮ ಕ್ಷಣದಲ್ಲಿ ಬೋಸರಾಜು ಅವಕಾಶ ಗಿಟ್ಟಿಸಿದರು. ಅವರನ್ನು ಆರು ತಿಂಗಳ ಒಳಗೆ ವಿಧಾನ ಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ.

Tap to resize

Latest Videos

Oath Taking Ceremony ಹೆಚ್‌ಕೆ ಪಾಟೀಲ್, ಕೃಷ್ಣಬೈರೇಗೌಡ ಸೇರಿ ನೂತನ ಸಚಿವರು ಪ್ರಮಾಣವಚನ ಸ್ವೀಕಾರ

ಬೋಸರಾಜು ಅವರಿಗೆ ಅವಕಾಶ ದೊರಕಿರುವುದರ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಪಾತ್ರವಿದೆ ಎನ್ನಲಾಗಿದೆ. ರಾಯಚೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬೋಸರಾಜು ಅವರಿಗೆ ಟಿಕೆಟ್‌ ದೊರಕಿರಲಿಲ್ಲ. ಈ ಸಂದರ್ಭದಲ್ಲಿ ಅವರು ಪಕ್ಷ ತೊರೆಯುವ ಬೆದರಿಕೆ ಹಾಕಿದ್ದರು. ಆಗ ಹೈಕಮಾಂಡ್‌ನ ವರಿಷ್ಠರು ವಿಧಾನಪರಿಷತ್ತಿಗೆ ಆಯ್ಕೆ ಮಾಡಿ ಸಚಿವರನ್ನಾಗಿಸುವ ಭರವಸೆ ನೀಡಿ ಪಕ್ಷದಲ್ಲಿ ಉಳಿಸಿಕೊಂಡಿದ್ದರು ಎನ್ನಲಾಗಿತ್ತು. ಆ ಭರವಸೆ ಈಗ ಈಡೇರಿಸಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ, ಇಂತಹ ಭರವಸೆ ಪಡೆದ ಹತ್ತಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌ ನಾಯಕರು ಇದ್ದರೂ ಬೋಸರಾಜು ಅವರಿಗೆ ವಿಶೇಷ ಮನ್ನಣೆ ದೊರಕಿರುವುದು ಹುಬ್ಬೇರಿಸಿದೆ.

ಇತ್ತ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಮ್ ಅಹಮ್ಮದ್, ಸಚಿವ ಸ್ಥಾನ ಸಿಗದೆ ಬೇಸರಗೊಂಡಿದ್ದಾರೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಮೂವರು ಪರಿಷತ್ ಸದಸ್ಯರಿಗೆ ಮಂತ್ರಿಸ್ಥಾನ ನೀಡುವ ಕುರಿತು ಎಲ್ಲಾ ಅಂತಿಮವಾಗಿತ್ತು. ಆದರೆ ಮೂವರನ್ನೂ ಪರಿಗಣಿಸಿಲ್ಲ. ಇದು ತೀವ್ರ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಿ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ.

ಮುಂದಿನ ದಿನದಲ್ಲಿ ಕಾದು ನೋಡಿ, ಕಾಂಗ್ರೆಸ್‌ಗೆ ಸಚಿವ ಸ್ಥಾನ ಸಿಗದ ಸಲೀಂ ಅಹಮ್ಮದ್ ವಾರ್ನಿಂಗ್!

ಸಿದ್ದರಾಮಯ್ಯ ಸಂಪುಟ ಸೇರಿಕೊಂಡ 24 ನೂತನ ಸಚಿವರ ಪಟ್ಟಿ ಇಲ್ಲಿದೆ.
1- ಈಶ್ವರ್‌ ಖಂಡ್ರೆ
2- ಲಕ್ಷೀ ಹೆಬ್ಬಾಳ್ಕರ್‌
3- ಶಿವಾನಂದ ಪಾಟೀಲ…
4- ಬಿ.ಎಸ್‌.(ಬೈರತಿ) ಸುರೇಶ್‌
5- ಡಾ.ಎಚ್‌.ಸಿ.ಮಹಾದೇವಪ್ಪ
6- ಪಿರಿಯಾಪಟ್ಟಣ ಕೆ.ವೆಂಕಟೇಶ್‌
7- ಎಸ್‌.ಎಸ್‌.ಮಲ್ಲಿಕಾರ್ಜುನ
8- ದಿನೇಶ್‌ ಗುಂಡೂರಾವ್‌
9- ಕೃಷ್ಣ ಬೈರೇಗೌಡ
10- ರಹೀಂ ಖಾನ್‌
11- ಡಿ.ಸುಧಾಕರ್‌
12- ಡಾ.ಎಂ.ಸಿ.ಸುಧಾಕರ್‌
13- ಎಚ್‌.ಕೆ.ಪಾಟೀಲ…
14- ಚೆಲುವರಾಯಸ್ವಾಮಿ
15- ಕೆ.ಎನ್‌.ರಾಜಣ್ಣ
16- ಸಂತೋಷ್‌ ಲಾಡ್‌
17- ಮಧು ಬಂಗಾರಪ್ಪ
18- ಮಂಕಾಳ ಸುಬ್ಬಾ ವೈದ್ಯ
19- ಶಿವರಾಜ ತಂಗಡಗಿ
20- ಆರ್‌.ಬಿ.ತಿಮ್ಮಾಪುರ
21- ಶರಣಬಸಪ್ಪ ದರ್ಶನಾಪುರ
22- ಶರಣ ಪ್ರಕಾಶ್‌ ಪಾಟೀಲ್‌
23- ಎನ್‌.ಎಸ್‌.ಬೋಸರಾಜು
24- ಬಿ.ನಾಗೇಂದ್ರ

click me!