ಮುಂದಿನ ದಿನದಲ್ಲಿ ಕಾದು ನೋಡಿ, ಕಾಂಗ್ರೆಸ್‌ಗೆ ಸಚಿವ ಸ್ಥಾನ ಸಿಗದ ಸಲೀಂ ಅಹಮ್ಮದ್ ವಾರ್ನಿಂಗ್!

By Suvarna News  |  First Published May 27, 2023, 12:49 PM IST

ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದರೆ, ಇತ್ತ ಸಚಿವ ಸ್ಥಾನ ಸಿಗದ ಹಲವು ನಾಯಕರು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಾರ್ನಿಂಗ್ ನೀಡಿದ್ದಾರೆ. 


ಬೆಂಗಳೂರು(ಮೇ.27): ಸಿದ್ದರಾಮಯ್ಯ ಕ್ಯಾಬಿನೆಟ್‌ಗೆ 24 ಸಚಿವರು ಮಂತ್ರಿಯಾಗಿ ಸೇರಿಕೊಂಡಿದ್ದಾರೆ. ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ರಾಜಭವನದಲ್ಲಿ ನಡೆಯುತ್ತಿದೆ. 24 ಸಚಿವರ ಪೈಕಿ ಹೆಚ್‌ಕೆ ಪಾಟೀಲ್ ಮೊದಲನೆಯವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಂದಡೆ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದರೆ, ಮತ್ತೊಂಡೆ ಸಚಿವ ಸ್ಥಾನ ಸಿಗದ ನಾಯಕರು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್, ಸಚಿವ ಸ್ಥಾನ ಸಿಗದೆ ಬೇಸಗೊಂಡಿದ್ದಾರೆ. ಇದೇ ವೇಳೆ ಮುಂದಿನಗಳಲ್ಲಿ ಏನಾಗುತ್ತೋ ಕಾದು ನೋಡಿ ಎಂದು ಮಹತ್ತರ ಬದಲಾವಣೆ ಸುಳಿವು ನೀಡಿದ್ದಾರೆ.

ನನಗೂ ಸಚಿವ ಸ್ಥಾನ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದೆ. ಪರಿಷತ್‌ನ ಮೂವರು ಸದಸ್ಯರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ ಯಾರನ್ನೂ ಸಚಿವಸ್ಥಾನಕ್ಕೆ ಪರಿಗಣಿಸಿಲ್ಲ. ಇದು ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಿ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಲೀಂ ಅಹಮ್ಮದ್, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Tap to resize

Latest Videos

Oath Taking Ceremony ಹೆಚ್‌ಕೆ ಪಾಟೀಲ್, ಕೃಷ್ಣಬೈರೇಗೌಡ ಸೇರಿ ನೂತನ ಸಚಿವರು ಪ್ರಮಾಣವಚನ ಸ್ವೀಕಾರ

ಇದೇ ವೇಳೆ ಬಿಕೆ ಹರಿಪ್ರಸಾದ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದ ಬಿಕೆ ಹರಿಪ್ರಸಾದ್ ಬೇಸರಗೊಂಡು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರ ಮಾಧ್ಯಮಗಳಿಂದ ತಿಳಿಯಿತು. ಅವರು ನನಗೆ ಸಿಕ್ಕಿಲ್ಲ. ಬಿಕೆ ಹರಿಪ್ರಸಾದ್ ಭೇಟಿಯಾಗಿ ಮಾತನಾಡುತ್ತೇನೆ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ.

ಇತ್ತ ಸಚಿವ ಸ್ಥಾನ ಎಂ ಕೃಷ್ಣಪ್ಪ ಬೆಂಬಲಿಗರು ರಾಜಭವನ ಎದುರೇ ಪ್ರತಿಭಟನೆ ಮಾಡಿದ್ದಾರೆ. ಸಚಿವ ಸ್ಥಾನ ಸಿಗದೆ ಹಿನ್ನೆಲೆಯಲ್ಲಿ ನ್ಯಾಯಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ಸತತ ನಾಲ್ಕನೇ ಭಾರಿಗೆ ಶಾಸಕರಾಗಿರುವ ಎಂ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಎಂ ಕೃಷ್ಣಪ್ಪ ಮಾತ್ರವಲ್ಲ ಅವರ ಪುತ್ರ ಪ್ರಿಯಾ ಕೃಷ್ಣಗೂ ಸಚಿವ ಸ್ಥಾನ ಮಿಸ್ ಆಗಿದೆ. ಹೀಗಾಗಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೇಲ್ಮನೆ 5 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ?

ಶಿರಾ ಕ್ಷೇತ್ರದ ಶಾಸಕ ಟಿಬಿ ಜಯಚಂದ್ರ ಕಾರ್ಯಕರ್ತರು ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ನಾಯಕ ಹಾಗೂ ಅನುಭವಿ ನಾಯಕರಾಗಿರುವ ಟಿಬಿ ಜಯಚಂದ್ರ ಅವರಿಗೆ ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಕುಂಚಿಟಿಗರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಘೋಷಣೆ ಕೂಗಿದ್ದಾರೆ.  

click me!