2021ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಯಡಿಯೂರಪ್ಪ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಬೆಂಗಳೂರು, (ಮಾ.08): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) 2021-22ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದರು.
ಸೋಮವಾರ ಮಧ್ಯಾಹ್ನ 12.05ಕ್ಕೆ ಬಜೆಟ್ ಭಾಷಣ ಆರಂಭಿಸಿದ ಬಿಎಸ್ವೈ, 105 ಪುಟಗಳನ್ನು ಬರೋಬ್ಬರಿ ಎರಡು ತಾಸಲ್ಲಿ ಓದಿ ಮುಗಿಸಿದರು.
ಕರ್ನಾಟಕ ಬಜೆಟ್ 2021: ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆಡಳಿತ ಪಕ್ಷದ ಶಾಸಕರು ತಮ್ಮ ಕ್ಷೇತ್ರ ಅಥವಾ ತಮ್ಮ ಸಮಾಜದ ಕುರಿತ ಯೋಜನೆಗಳು ಘೋಷಣೆಯಾದಾಗ ಅಲ್ಲೊಬ್ಬ ಇಲ್ಲೊಬ್ಬರು ಮೇಜು ಕುಟ್ಟಿ ಸಂತಸ ಹೊರಹಾಕಿದ್ದು ಕಂಡುಬಂತು. ಇನ್ನು ಬಜೆಟ್‌ನಲ್ಲಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಯಡಿಯೂರಪ್ಪ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಶಿವಮೊಗ್ಗಕ್ಕೆ ಬಜೆಟ್ ಗಿಫ್ಟ್
* ಚಿಕ್ಕಮಗಳೂರು , ದಕ್ಷಿಣ ಕನ್ನಡ , ಶಿವಮೊಗ್ಗ ಕೊಡುಗು ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ 25 ಕೋಟಿ ರೂ . ವೆಚ್ಚದಲ್ಲಿ ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ .
* ಪಶುವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಗಳ ಅಳವಡಿಕೆ ಉತ್ತೇಜಿಸಲು ಈ ಕೇಂದ್ರ ಸ್ಥಾಪನೆ.
* ಶಿವಮೊಗ್ಗದಲ್ಲಿರುವ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ .
* ಶಿವಮೊಗ್ಗ ಮತ್ತು ಮೈಸೂರಿನಲ್ಲಿ ನೂರು ಕೋಟಿ ರೂ . ವೆಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ .
* ಶಿವಮೊಗ್ಗ - ಸವಳಂಗ - ಶಿಕಾರಿಪುರ - ಶಿರಾಳಕೊಪ್ಪ ಮಾರ್ಗದಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮತ್ತು ಸೇಪ್ಟಿ ಸಲ್ಯೂಷನ್ಸ್ ಪ್ರಾಯೋಗಿಕವಾಗಿ ಆರಂಭ .
* ವೈಜ್ಞಾನಿಕ ಸಂಚಾರ ನಿರ್ವಹಣಾ ವ್ಯವಸ್ಥೆಯಡಿ ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಈ ಯೋಜನೆ ಆರಂಭಿಸಲಾಗುತ್ತಿದೆ * .ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕ್ರಮವಾಗಿ 384 ಕೋಟಿ ರೂ . ಮತ್ತು 220 ಕೋಟಿ ರೂ.ಗಳ ನೀಡಲಾಗಿದೆ .
* ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಲುಸಂಕ ನಿರ್ಮಿಸಲು ಗ್ರಾಮಬಂಧ ಸೇತುವೆ ಯೋಜನೆ ಅಡಿ 100 ಕೋಟಿ ರೂ . ವೆಚ್ಚದಲ್ಲಿ ಅನುಷ್ಠಾನ.