ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಉಪಚುನಾವಣೆಗೆ ರಾಜ್ಯ ಬಿಜೆಪಿ ತನ್ನ ಚುನಾವಣಾ ಉಸ್ತುವಾರಿಗಳನ್ನ ನೇಮಿಸಿದೆ.
ಬೆಂಗಳೂರು, (ಮಾ.07): ಎಂ.ಸಿ. ಮನಗೂಳಿ ಅವರ ಅಕಾಲಿಕ ನಿಧನದಿಂದ ತೆರವಾದ ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಶೀಘ್ರದಲ್ಲೇ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ.
ಅದಕ್ಕೂ ಮೊದಲ ರಾಜ್ಯ ಬಿಜೆಪಿ ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬರೋಬ್ಬರಿ 8 ಮಂದಿ ನಾಯಕರನ್ನ ಉಸ್ತುವಾರಿಗಳನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
'4 ದಿನಗಳಲ್ಲಿ ಉಪ ಚುನಾವಣೆ ಘೋಷಣೆ, ನಾಲ್ಕರಲ್ಲೂ ಗೆಲುವು ನಮ್ಮದೇ
ಉಸ್ತುವಾರಿಗಳ ಪಟ್ಟಿಯಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಮೂವರು ಸಚಿವರು ಮತ್ತು ಓರ್ವ ಸಂಸದರನ್ನು ಆಯ್ಕೆ ಮಾಡಲಾಗಿದೆ.
ಉಸ್ತುವಾರಿಗಳ ಪಟ್ಟಿ ಹೀಗಿದೆ..
ಲಕ್ಷ್ಮಣ ಸವದಿ- ಉಪಮುಖ್ಯಮಂತ್ರಿ
ಗೋವಿಂದ ಕಾರಜೋಳ-ಉಪಮುಖ್ಯಮಂತ್ರಿ
ಶಶಿಕಲಾ ಜೊಲ್ಲೆ- ಸಚಿವೆ
ಮುರುಗೇಶ್ ನಿರಾಣಿ- ಸಚಿವ
ಸಿ.ಸಿ. ಪಾಟೀಲ್ ಸಚಿವ-ಸಚಿವ
ರಮೇಶ್ ಚಂದಪ್ಪ ಜಿಗಜಿಣಗಿ- ಸಂಸದ
ಅರುಣ್ ಶಹಾಪುರ- ವಿಧಾನಪರಿಷತ್ ಸದಸ್ಯ
ಚಂದ್ರಶೇಖರ್ ಕವಟಗಿ- ವಿಭಾಗ ಪ್ರಭಾರಿ
ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಗಳ ಪಟ್ಟಿ. pic.twitter.com/ucJWJ7z1GH
— BJP Karnataka (@BJP4Karnataka)