ಲೋಕಸಭೆ ಚುನಾವಣೆಗೆ 100 ದಿನಗಳ ರೋಡ್‌ ಮ್ಯಾಪ್‌ ರಚಿಸಿದ ಬಿಜೆಪಿ: ಶೀಘ್ರವೇ ಜಿಲ್ಲಾಧ್ಯಕ್ಷರ ಘೋಷಣೆ!

Published : Jan 08, 2024, 09:49 PM IST
ಲೋಕಸಭೆ ಚುನಾವಣೆಗೆ 100 ದಿನಗಳ ರೋಡ್‌ ಮ್ಯಾಪ್‌ ರಚಿಸಿದ ಬಿಜೆಪಿ: ಶೀಘ್ರವೇ ಜಿಲ್ಲಾಧ್ಯಕ್ಷರ ಘೋಷಣೆ!

ಸಾರಾಂಶ

ಲೋಕಸಭಾ ಚುನಾವಣಾ ಬೈಠೆಕ್‌ ಸಭೆಯಲ್ಲಿ 100 ದಿನಗಳ ಪ್ರಚಾರದ ರೋಡ್‌ ಮ್ಯಾಪ್‌ ಸಿದ್ಧಪಡಿಸಲಾಗಿದೆ. ಜೊತೆಗೆ, ಶೀಘ್ರವೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುವುದು.

ಬೆಂಗಳೂರು (ಜ.08): ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತಾ ಕಾರ್ಯ ಆರಂಭಿಸಿದ ಬಿಜೆಪಿ ನಾಯಕರು ಸೋಮವಾರ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣಾ ಬೈಠೆಕ್‌ ಸಭೆಯಲ್ಲಿ 100 ದಿನಗಳ ಪ್ರಚಾರದ ರೋಡ್‌ ಮ್ಯಾಪ್‌ ಸಿದ್ಧಪಡಿಸಲಾಗಿದೆ. ಜೊತೆಗೆ, ಶೀಘ್ರವೇ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಘೋಷಣೆ ಮಾಡುವುದು ಹಾಗೂ 28 ಕ್ಷೇತ್ರಗಳಲ್ಲಿಯೂ ಗೆಲ್ಲುವುದರ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಬೆಂಗಳೂರಿನಲ್ಲಿ ನಡೆಸ ಬಿಜೆಪಿ ನಾಯಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆಯಿಂದ ಇಡೀ ದಿನ ಯೋಜನಾ ಬೈಠೆಕ್ ಸಭೆ ನಡೆದಿದೆ. ರಾಜ್ಯದಲ್ಲಿ  28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು, ನಿರ್ಣಯಿಸಬೇಕಾದ ರೂಪುರೇಷೆಗಳು, ಯಾವ ವಿಷಯ ಕೈಗೆತ್ತಿಕೊಳ್ಳಬೇಕು, ಸಮನ್ವಯತೆ ಹೇಗೆ ಇರುಬೇಕು ಎಂದು ಚಿಂತನೆ ಮತ್ತು ಚರ್ಚೆ ಮಾಡಿದ್ದೇವೆ. ದೇಶ ಹಾಗೂ ರಾಜ್ಯದ ಜನತೆಗೆ ಮೋದಿ ಗ್ಯಾರಂಟಿಯೇ ಭರವಸೆ. ರಾಜ್ಯದ ಜನರು ಈ ಬಾರಿ ನೂರಕ್ಕೆ ನೂರರಷ್ಟು ಗೆಲ್ಲಿಸುವ ವಿಶ್ವಾಸ ಇದೆ. ಆದ್ದರಿಂದ ಚುನಾವಣಾ ಪ್ರಚಾರಕ್ಕೆ 100 ದಿನಗಳ ರೋಡ್ ಮ್ಯಾಪ್ ತಯಾರಿಸಿದ್ದೇವೆ. ಇದಕ್ಕೆ ಅನುಗುಣವಾಗಿ ನಿರಂತರ ಸಭೆ, ಕಾರ್ಯಚಟುವಟಿಕೆ ಗಳನ್ನು ನಡೆಸುತ್ತೇವೆ ಎಂದು ತಿಳಿಸಿದರು.

ಮಾಲ್ಡೀವ್ಸ್‌ ಬಾಯ್ಕಾಟ್‌ಗೆ ಬೆಂಬಲಿಸಿದ ಡಾ ಬ್ರೋ, ಇಡೀ ಲಕ್ಷದ್ವೀಪವನ್ನೇ ತೋರಿಸಿಬಿಟ್ರು!

ರಾಜ್ಯದಲ್ಲಿನ ವೈಚಾರಕಾ ಹಿನ್ನೆಲೆಯ ಮತದಾರರು, ವಿವಿಧ ಯೋಜನೆಗಳ ಫಲಾನುಭವಿಗಳು, ಸರ್ವೋದಯದಿಂದ ಅಂತ್ಯೋದಯದವರೆಗೆ ಅನ್ನೋ ಸಂಕಲ್ಪ, ಎಲ್ಲಾ ಜಾತಿಯ ಜನತೆಗೆ ಮೊದಲ‌ ನಮ್ಮ ಆದ್ಯತೆ ನೀಡಲಾಗುವುದು. ಇದನ್ನೆ ಆಧರಿಸಿ ಯೋಜನೆ ರೂಪಿಸ್ತೇವೆ. ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಈ ಚುನಾವಣೆ ಏನಿದ್ದರೂ ಮೋದಿ ಹವಾ ಮಾತ್ರ. ಇದರ ಬಗ್ಗೆ ಕಾಂಗ್ರೆಸ್ ಸಚಿವರಿಗೂ ಮನವರಿಕೆ ಆಗಿದೆ. ಕಳೆದ 7 ತಿಂಗಳ ಹಿಂದೆ ನಾನು ಸಂಸದನಾಗ್ತೀನಿ ಎನ್ನುತ್ತಿದ್ದ ಸಚಿವರು ಇವಾಗ ಸೈಲೆಂಟ್ ಆಗಿದ್ದಾರೆ. ನಾವು ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ ಎಂದರು.

ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ ಕುರಿತು ಯಾವ ಯಾವ ಪಕ್ಷಕ್ಕೆ ಎಷ್ಟೆಷ್ಟು ಸೀಟು ಎಂಬುದನ್ನು ಎನ್ ಡಿಎ ಮೈತ್ರಿ ಕೂಟದ ಸಮಿತಿ ನಿರ್ಣಯಿಸುತ್ತದೆ. ಈ ನಿರ್ಣಯ ಮಾಡೋದಕ್ಕೆ ನಾವು ಕಾರ್ಯಚಟುವಟಿಕೆ ನಡೆಸ್ತೀವಿ ಅಷ್ಟೇ. ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ನಡುವೆ ಸಮನ್ವಯತೆ ಬಗ್ಗೆ ಚರ್ಚೆ ಆಗಿದೆ. ಅಸಮಾಧಾನಿತ ಸೋಮಣ್ಣ, ಯತ್ನಾಳ್, ರಮೇಶ್ ಜಾರಕಿಹೊಳಿಗೆ ಜವಬ್ದಾರಿ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ, ಬಹುತೇಕ ಅಸಮಾಧಾನಿತರಿಗೆ ವ್ಯಕ್ತಿಗತ ಬೇಸರ ಇರೋದು ಹೌದು. ವ್ಯೆಯಕ್ತಿಕವಾಗಿ ಮಾತಾಡಿ ಸಮಧಾನ ಪಡಿಸುವ ಕೆಲಸ ಆಗಿದೆ. ಅವರೆಲ್ಲರದ್ದು ಒಂದೇ, ಗುರಿಯಾಗಿದ್ದು, ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಮಾಡಬೇಕೆಂಬುದು ಆಗಿದೆ ಎಂದು ಹೇಳಿದರು.

ಬಿಜೆಪಿ ವರಿಷ್ಠರ ಎದುರು ಇಲ್ಲಿನ ಅಡ್ಜಸ್ಟ್‌ಮೆಂಟ್‌ ಎಲ್ಲ ಹೇಳಿದ್ದೇನೆ: ಶಾಸಕ ಬಸನಗೌಡ ಯತ್ನಾಳ

ಜಿಲ್ಲಾಧ್ಯಕ್ಷರ ಆಯ್ಕೆ ಪಟ್ಟಿ ಶೀಘ್ರ ಘೋಷಣೆ: ಜಿಲ್ಲಾಧ್ಯಕ್ಷರ ಆಯ್ಕೆ ಈಗಾಗಲೇ ಅಭಿಪ್ರಾಯ ಸಂಗ್ರಹ ಆಗಿದೆ. ಶೀಘ್ರವೇ ಘೋಷಣೆ ಆಗಲಿದೆ. 28 ಲೋಕಸಭಾ ಕ್ಷೇತ್ರಗಳ ಕುರಿತು ಹೈಕಮಾಂಡ್ ಗೆ ವರದಿ ಸಲ್ಲಿಕೆ ಮಾಡುವ ಬಗ್ಗೆ ಜನವರಿ 10 ಮತ್ತು ಜ.13 ರಂದು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಲೋಕಸಭೆ ಅಭ್ಯರ್ಥಿಗಳ ಬಗ್ಗೆ ವರದಿಗಳನ್ನು ಪಡೆದು ಚರ್ಚೆ ಮಾಡಲಾಗುತ್ತದೆ. ಆ ನಂತರ ಅದನ್ನು ವರಿಷ್ಠರಿಗೆ ಕಳುಹಿಸುವ ನಿರ್ಣಯ ಆಗುತ್ತದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ
ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ