‘ನೌಕರರಿಗೆ, ರಾಜಕಾರಣಿಗಳಿಗೆ ಮೊದಲಿನಂತೆ ಗೌರವ ಸಿಗುತ್ತಿಲ್ಲ’: ಸಚಿವ ಕೆ.ಎನ್.ರಾಜಣ್ಣ

By Kannadaprabha News  |  First Published Jan 8, 2024, 9:43 PM IST

ತಮ್ಮ ಸೇವಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಸಮಾಜದ ಬೆಳವಣಿಗೆಗೆ ಸಹಾಯವಾದ ನಿವೃತ್ತ ಸರ್ಕಾರಿ ನೌಕರರ ವಿಶ್ರಾಂತಿ ಜೀವನ ಸುಖಕರವಾಗಿರಬೇಕು. ಅವರು ನೆಮ್ಮದಿ ಬಾಳು ಬಾಳಲು ಅವರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸರ್ಕಾರ ಸ್ಪಂದಿಸಿ, ಗಮನಹರಿಸುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. 
 


ತುಮಕೂರು (ಜ.08): ತಮ್ಮ ಸೇವಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಸಮಾಜದ ಬೆಳವಣಿಗೆಗೆ ಸಹಾಯವಾದ ನಿವೃತ್ತ ಸರ್ಕಾರಿ ನೌಕರರ ವಿಶ್ರಾಂತಿ ಜೀವನ ಸುಖಕರವಾಗಿರಬೇಕು. ಅವರು ನೆಮ್ಮದಿ ಬಾಳು ಬಾಳಲು ಅವರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸರ್ಕಾರ ಸ್ಪಂದಿಸಿ, ಗಮನಹರಿಸುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ನಗರದ ಬಾಲಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ನಿವೃತ್ತ ನೌಕರರ ದಿನಾಚರಣೆಯಲ್ಲಿ ಹಿರಿಯ ಚೇತನಗಳಿಗೆ ಸನ್ಮಾನ ಮಾಡಿ ಮಾತನಾಡಿದರು.

ನಿಮ್ಮ ಅಧಿಕಾರವಧಿ ಸುವರ್ಣಯುಗ. ಆಗ ಸರ್ಕಾರಿ ನೌಕರರನ್ನು ಸಮಾಜ ಗೌರವಿಸುತ್ತಿತ್ತು, ಸರ್ಕಾರವೂ ಗುರುತಿಸುತ್ತಿತ್ತು.ಈಗ ಕಾಲ ಬದಲಾಗಿದೆ. ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸಲು ಶುರುವಾಗಿ ನೌಕರರು, ರಾಜಕಾರಣಿಗಳ ಬಗ್ಗೆ ಸಮಾಜದಲ್ಲಿ ಅಗೌರವ ಭಾವನೆ ಹೆಚ್ಚಾಗುತ್ತಿದೆ ಎಂಬುದು ನೋವಿನ ಸಂಗತಿ. ಮುಂದಿನ ದಿನಗಳು ಒಳ್ಳೆಯದಾಗಿರುತ್ತವೆ ಎಂದು ನನಗೆ ಅನಿಸುತ್ತಿಲ್ಲ, ಇನ್ನಷ್ಟು ಕೆಟ್ಟದಾಗಿರುತ್ತವೆ ಎಂಬ ಭಾವನೆ ಬಂದಿದೆ ಎಂದು ತೀರಾ ನೋವಿನಿಂದ ಹೇಳಬೇಕಾಗಿದೆ ಎಂದು ಹೇಳಿದರು.

Tap to resize

Latest Videos

undefined

ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ?: ವಿಜಯೇಂದ್ರ ಹೇಳಿದ್ದೇನು?

ಸರ್ಕಾರಿ ನೌಕರರ ನಿವೃತ್ತ ಬದುಕು ನೆಮ್ಮದಿಯಾಗಿರಬೇಕು ಎನ್ನುವ ಕಾರಣಕ್ಕೆ ಸರ್ಕಾರ ಪಿಂಚಣಿ ನೀಡುತ್ತಿದೆ. ಆದರೆ ಇತ್ತೀಚೆಗೆ ಒಪಿಎಸ್, ಎನ್‌ಪಿಎಸ್ ವ್ಯತ್ಯಾಸದಿಂದ ಕೆಲವು ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಔಷಧಿ, ಮಾತ್ರೆಗೂ ಕಷ್ಟವಾಗುತ್ತಿದೆ ಎಂದು ಹಲವು ನಿವೃತ್ತ ಅಧಿಕಾರಿಗಳು ನನಗೆ ಹೇಳಿದ್ದಾರೆ. ಈ ತಾರತಮ್ಯ ನಿವಾರಣೆ ಆಗಬೇಕು ಎಂಬ ಬೇಡಿಕೆ ಇದೆ. ಈ ಬೇಡಿಕೆಯನ್ನು ಸರ್ಕಾರ ನ್ಯಾಯಯುತವಾಗಿ ಈಡೇರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ನಿವೃತ್ತ ನೌಕರರ ಪಿಂಚಣಿ ತಾರತಮ್ಯವನ್ನು ಸರ್ಕಾರ ನಿವಾರಣೆ ಮಾಡಬೇಕು, ಮುಖ್ಯವಾಗಿ ಜೀವನದ ಕೊನೆ ಘಟ್ಟದಲ್ಲಿರುವ ನಿವೃತ್ತ ನೌಕರರ ಆರೋಗ್ಯ ಬಹು ಮುಖ್ಯವಾಗಿರುತ್ತದೆ. ಸರ್ಕಾರ ಆರೋಗ್ಯ ಯೋಜನೆ ಜಾರಿಗೆ ತಂದು ಉಚಿತವಾಗಿ ಆರೋಗ್ಯ ಸೇವೆ ಒದಗಿಸಬೇಕು. ಈ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರು ಅಧಿವೇಶನದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು.

ನಿವೃತ್ತ ನೌಕರರ ಸಂಘಕ್ಕೆ ನಗರದಲ್ಲಿ ನಿವೇಶನ ಮಂಜೂರು ಮಾಡಿಕೊಡುವಂತೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ನಗರಪಾಲಿಕೆ ಆಯುಕ್ತೆ ಅಶ್ವಿಜ ಅವರಿಗೆ ಮನವಿ ಮಾಡಿದ ಬಾ.ಹ. ರಮಾಕುಮಾರಿ, ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ನೆರವಾಗಬೇಕು ಎಂದು ಮನವಿ ಮಾಡಿದರು. ಶಾಸಕ ಜ್ಯೋತಿಗಣೇಶ್‌ ಅವರು ನಿವೃತ್ತಿ ನೌಕರರು ತಮ್ಮ ಸೇವಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ನೆರವಾಗಿದ್ದಾರೆ. ಅವರ ವಿಶ್ರಾಂತಿ ಬದುಕು ಸುಖಕರವಾಗಿರಬೇಕು. ಇದಕ್ಕಾಗಿ ಸಮಾಜ ಹಾಗೂ ಅವರ ಕುಟುಂಬದವರು ಕಾಳಜಿ ವಹಿಸಬೇಕು. ಸಂಘಕ್ಕೆ ನಿವೇಶನ ಮಂಜೂರು ಮಾಡುವ ಸಂಬಂಧಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಬಿಜೆಪಿಗೆ ಎಂಟಿಬಿ ನಾಗರಾಜ್ ಕೇವಲ ವ್ಯಕ್ತಿಯಲ್ಲ, ಶಕ್ತಿ: ಬಿ.ವೈ.ವಿಜಯೇಂದ್ರ

ನಗರ ಪಾಲಿಕೆ ಆಯುಕ್ತೆ ಅಶ್ವಿಜ, ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಕೋಶಾದ್ಯಕ್ಷ ಪಿ.ನರಸಿಂಹರೆಡ್ಡಿ. ಅನಂತರಾಮಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಹಿರಿಯ ಚೇತನಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

click me!