ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಅಂತ ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮ್ಯನವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಅವರು ಒಂದು ಕ್ಷೇತ್ರವನ್ನು ಹುಡುಕುವ ದುಃಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.23): ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಅಂತ ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮ್ಯನವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಅವರು ಒಂದು ಕ್ಷೇತ್ರವನ್ನು ಹುಡುಕುವ ದುಃಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಸಂಸದರ ನಿಧಿಯಿಂದ ಕೊಡಗು ಜಿಲ್ಲಾಸ್ಪತ್ರೆ(Kodagu district hospital)ಗೆ ಎರಡು ಅಂಬ್ಯುಲೆನ್ಸ್(Ambulance) ನೀಡಿದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಎಲ್ಲಾ ಭಾಗ್ಯಗಳನ್ನು ಕೊಟ್ಟು ಈಗ ಒಂದು ಕ್ಷೇತ್ರಕ್ಕಾಗಿ ಹುಡುಕಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯ ಮತ್ತು ಸೋಜಿವಾಗುತ್ತದೆ ಎಂದರು.
undefined
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಚೈಲ್ಡಿಶ್ ಮಾತು: ನಿಖಿಲ್ ಕುಮಾರಸ್ವಾಮಿ
ಒಂದು ಕ್ಷೇತ್ರವನ್ನು ಹುಡುಕಿಕೊಳ್ಳಬೇಕಾದ ಸ್ಥಿತಿ ಸಿದ್ದರಾಮಯ್ಯ(Siddaramaiah)ನವರಿಗೆ ಬಂದಿದೆ ಎಂದರೆ, ಅವರ ಈ ಭಾಗ್ಯಗಳಿಗೆ ಜನ ಯಾವುದೇ ಬೆಲೆ ಕೊಟ್ಟಿಲ್ಲ. ಅವರಿಗೆ ಇಂತಹ ಸ್ಥಿತಿ ಬಂದಿದೆ ಎಂದರೆ ಜನರಿಗೆ ಇವರ ಮೇಲೆ ಯಾವುದೇ ವಿಶ್ವಾಸ ಇಲ್ಲ ಎಂದರು. ನಾನು ಈಗಲೂ ಹೇಳುತ್ತೇನೆ ಸಿದ್ದರಾಮಯ್ಯ ಅವರು ಕೊನೆಗೆ ಮೈಸೂರಿನ ವರುಣ ಕ್ಷೇತ್ರ(Varuna assembly constituency)ಕ್ಕೆ ಬರುತ್ತಾರೆ. ಯುಗಾದಿ ಹಬ್ಬ(Ugadi festival)ದ ದಿನದಂದು ಕಾಂಗ್ರೆಸ್ ಟಿಕೆಟ್(Congress ticket) ಘೋಷಣೆ ಆಗಬೇಕಾಗಿತ್ತು. ಆದರೆ ಯಾಕೆ ಇವತ್ತಿನವರೆಗೆ ಟಿಕೆಟ್ ಘೋಷಣೆ ಆಗಿಲ್ಲ. ಇವರಿಗೆ ಯಾರಿಗೂ ರಾಜ್ಯ ಮತ್ತು ದೇಶದ ಚಿಂತೆಯಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ ಆದರೆ ಅವರ ಧರ್ಮಪತ್ನಿಗೆ ಪುತ್ರನ ಚಿಂತೆ. ರೇವಣ್ಣ ಅವರಿಗೆ ಭವಾನಿಯವರ ಚಿಂತೆಯಾದರೆ, ಕುಮಾರಣ್ಣನಿಗೆ ನಿಖಿಲ್ ನ ಚಿಂತೆ. ಹೀಗಾಗಿ ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆಯೇ ಹೊರತ್ತು, ಇವರಿಗೆ ರಾಜ್ಯದ ಚಿಂತೆ ಇಲ್ಲ. ಹೀಗಾಗಿ ರಾಜ್ಯದ ಚಿಂತೆ ಇದೆ ಎಂದು ಯಾರು ಮಂಗಗಳಾಗಬೇಡಿ ಎಂದು ಜನರಿಗೆ ಮನವಿ ಮಾಡಿದರು.
ಇವರು ಕೊಡುವ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ 2000 ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎನ್ನುವುದೆನ್ನೆಲ್ಲ ನಂಬಬೇಡಿ. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ. ಈಗ ರಾಜ್ಯದ ಜನತೆಗೆ ಟೋಪಿಹಾಕಲು ಬರುತ್ತಿದ್ದಾರೆ. ಹೀಗಾಗಿ ಇವರನ್ನು ನಂಬಬೇಡಿ ಎಂದು ಪ್ರತಾಪ್ ಸಿಂಹ(pratap simha) ತಿರುಗೇಟು ನೀಡಿದರು.
ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ ಮತ ಕೇಳುತ್ತೇವೆಯೇ ಹೊರತ್ತು ಬಿಟ್ಟಿ, ಬೋಗಸ್ ಭಾಗ್ಯಗಳನ್ನು ಕೊಡುವುದಾಗಿ ನಾವು ಹೇಳುವುದಿಲ್ಲ. ಈ ರೀತಿ ಬಿಟ್ಟಿ ಭಾಗ್ಯಗಳ ಬಗ್ಗೆ ಹೇಳುವ ಜೆಡಿಎಸ್, ಕಾಂಗ್ರೆಸ್ ಅಷ್ಟೇ ಅಲ್ಲ ಬಿಜೆಪಿಯ ಒಬ್ಬ ಕಾರ್ಯಕರ್ತನಾಗಿ ನಾನೇ ಹೇಳುತ್ತಿದ್ದೇನೆ ಬಿಜೆಪಿ ಕೂಡ ಫ್ರೀ ಭಾಗ್ಯಗಳನ್ನು ಕೊಡುವುದಾಗಿ ಹೇಳಿದರೆ ನಂಬಬೇಡಿ ಎಂದರು. ಉರಿಗೌಡ ನಂಜೇಗೌಡ ವಿಷಯವನ್ನು ಕೈಬಿಡದಿದ್ದರೆ ಮತ್ತು ಆದಿಚುಂಚನಗಿರಿ ಸ್ವಾಮೀಜಿಯವರು ಅದರ ವಿರುದ್ಧ ಹೋರಾಟ ಮಾಡದಿದ್ದರೆ ಕೆಪಿಸಿಸಿ(KPCC) ಪಟ್ಟವನ್ನು ಬದಿಗಿಟ್ಟು ನಾನೇ ನೇತೃತ್ವ ವಹಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(Dk Shivakumar) ಅವರಿಗೂ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
Bengaluru-Mysuru Expressway: ವಿರೋಧದ ನಡುವೆಯೂ ಇಂದಿನಿಂದ ಬೆಂ-ಮೈ ಹೆದ್ದಾರಿ ಟೋಲ್ ಆರಂಭ!
ಮೇ 24 ರ ನಂತರ ಸಿದ್ದರಾಮಯ್ಯನವರಿಗೆ, ಡಿಕೆಶಿಗೆ ಮತ್ತು ಜೆಡಿಎಸ್ ನವರಿಗೆ ಜನರು ಹೋರಾಟದ ಕೆಲಸವನ್ನೇ ಕೊಡುತ್ತಾರೆ. ಆಡಳಿತ ನಡೆಸುವ ಕೆಲಸವನ್ನು ಜನರು ಬಿಜೆಪಿಯವರಿಗೆ ಕೊಡುತ್ತಾರೆ. ಅವರ ಹೋರಾಟಕ್ಕೆ ಸದಾ ನಮ್ಮ ಸ್ವಾಗತವಿರುತ್ತದೆ. ಮೇ 24 ನಂತರ ನಿಮ್ಮ ಹೋರಾಟವನ್ನು ನೀವು ಮುಂದುವರಿಸಿ. ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲಿಯೇ ಕೂರಿಸಲು ಜನ ನಿರ್ಧರಿಸಿದ್ದಾರೆ ಎಂದು ತಿರುಗೇಟು ನೀಡಿದರು.