ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಿರ್ಮಾಣವಾಗಿದ್ದು, ಎರಡೂ ಪಕ್ಷಗಳು ಜಿದ್ದಿಗೆ ಬಿದ್ದವಂತೆ ಪ್ರಚಾರ ನಡೆಸುತ್ತಿದ್ದಾರೆ ಇನ್ನೊಂದೆಡೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದೀಗ ದೈವ ಆಧಾರಿತ ನಾಟಕ ಯಕ್ಷಗಾನಗಳ ಮೂಲಕ ಭರ್ಜರಿ ಪಾಲಿಟಿಕ್ಸ್ ನಡೆಯುತ್ತಿದೆ.
ಶಿವಮೊಗ್ಗ (ಮಾ.23): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಿರ್ಮಾಣವಾಗಿದ್ದು, ಎರಡೂ ಪಕ್ಷಗಳು ಜಿದ್ದಿಗೆ ಬಿದ್ದವಂತೆ ಪ್ರಚಾರ ನಡೆಸುತ್ತಿದ್ದಾರೆ ಇನ್ನೊಂದೆಡೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದೀಗ ದೈವ ಆಧಾರಿತ ನಾಟಕ ಯಕ್ಷಗಾನಗಳ ಮೂಲಕ ಭರ್ಜರಿ ಪಾಲಿಟಿಕ್ಸ್ ನಡೆಯುತ್ತಿದೆ.
ಕಿಮ್ಮನೆ ರತ್ನಾಕರ್ ವರ್ಸಸ್ ಆರಗ ಜ್ಞಾನೇಂದ್ರ ಪಾಲಿಟಿಕ್ಸ್:
ಯಕ್ಷಗಾನ ತಾಳಮದ್ದಳೆ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರರ ಹಾಡಿ ಹೊಗಳಿದ ಕಲಾವಿದರು. ಗೃಹ ಮಂತ್ರಿ ಆಗಿರುವ ಅರಗ ಜ್ಞಾನೇಂದ್ರ ಮುಂದಿನ ಅಧಿಕಾರವಧಿಯಲ್ಲಿ ಸಿಎಂ ಆಗಲಿ ಎಂದು ಹಾಡು ಕಟ್ಟಿ ಹೇಳಿದ ಕಲಾವಿದ ಸತೀಶ್. ತಾಳಮದ್ದಳೆ ಮೂಲಕ ಗೃಹ ಸಚಿವರನ್ನುಹಾಡಿಹೊಗಳಿರುವ ಕಲಾವಿದ.
ನಾನು ಬಿಜೆಪಿ-ಕಾಂಗ್ರೆಸ್‌ನಿಂದ ಅನುಭವಿಸಿದ ಕಷ್ಟ ನನಗಷ್ಟೇ ಗೊತ್ತು: ರೈತರಿಗೆ ಭಾವನಾತ್ಮಕ ಪತ್ರ ಬರೆದ ಎಚ್‌ಡಿಕೆ
ಈ ಹಿಂದೆ ಕಿಮ್ಮನೆ ರತ್ನಾಕರ್(kimmane ratnakar) ಬೆಂಬಲಿಗರಿಂದ ಶಿವ ದೂತ ಗುಳಿಗ ನಾಟಕ ಪ್ರದರ್ಶನ ಮಾಡಿಸಿದ್ದರು ಈ ವೇಳೆ ಗುಳಿಗ ನಾಟಕ(Guliga nataka)ದ ಮೂಲಕ ಜಾಪಳ ಮಾತ್ರೆ ಹಾಕುತ್ತಿದ್ದಾರೆ ಎಂದು ಜ್ಞಾನೇಂದ್ರ(Araga jnanendra) ಟೀಕೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಎಲ್ಲೆಡೆ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ತುಳುನಾಡು ಜನರು ಗೃಹ ಸಚಿವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ
ಇದೀಗ ಗೃಹ ಸಚಿವರ ಬೆಂಬಲಿಗರು ಯಕ್ಷಗಾನ ತಾಳ ಮದ್ದಳೆ ಮೂಲಕ ಕಾಂಗ್ರೆಸ್ಸಿಗರ ನಾಟಕ ಆಯೋಜನೆಗೆ ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಇಬ್ಬರು ನಾಯಕರ ನಡುವೆ ದೈವ ಆಧಾರಿತ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ದೈವ ಯಾರ ಪರವಾಗಿರುವುದೋ ಚುನಾವಣೆ ಬಳಿಕ ಗೊತ್ತಾಗಲಿದೆ..!
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣೆ ಮುಂದೆ ಕಿಮ್ಮನೆ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ