ಮಾಗಡಿ ರಸ್ತೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ ಸ್ವಾಗತ!

Published : Apr 29, 2023, 06:45 PM ISTUpdated : Apr 29, 2023, 07:00 PM IST
ಮಾಗಡಿ ರಸ್ತೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ ಸ್ವಾಗತ!

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣ ಕಣ ರಂಗೇರಿದೆ. ಇಂದು ಕರ್ನಾಟಕದಲ್ಲಿ ಮೋದಿ ಮೇನಿಯಾ. ಬೀದರ್‌ನಿಂದ ಆರಂಭಗೊಂಡ ಮೋದಿ ರ್ಯಾಲಿ ಇದೀಗ ಬೆಂಳೂರು ತಲುಪಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಮೋದಿಗೆ ಭರ್ಜರಿ ಸ್ವಾಗತ ನೀಡಲಾಗಿದ. ಜನ ಹೂಮಳೆ ಸ್ವಾಗತ ಕೋರಿದ್ದಾರೆ.

ಬೆಂಗಳೂರು(ಏ.29): ಕರ್ನಾಟದಲ್ಲಿಂದು ಮೋದಿ ಮೇನಿಯಾ. ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಮೋದಿ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಬೀದರ್‌ನ ಹುಮ್ನಾಬಾದ್‌ನಿಂದ ರ್ಯಾಲಿ ಆರಂಭಿಸಿದ ಮೋದಿ ಇದೀಗ ಬೆಂಗಳೂರು ತಲುಪಿದ್ದಾರೆ. ರೋಡ್ ಶೋ ಮೂಲಕ ಮಾಗಡಿ ರಸ್ತೆಗೆ ಆಗಮಿಸಿದ ಮೋದಿಗೆ ಹೂಮಳೆಯ ಸ್ವಾಗತ ಕೋರಿದ್ದಾರೆ. ಕಲಾ ತಂಡಗಳು ನೃತ್ಯ ಪ್ರಕಾರ ಮೂಲಕ ಸ್ವಾಗತ ಕೋರಿದೆ. ಇತ್ತ ಬೆಂಬಲಿಗರು, ಕಾರ್ಯಕರ್ತರು ಮೋದಿ ಜೈಕಾರ ಮೊಳಗಿಸಿದ್ದಾರೆ.

ಬೆಂಗಳೂರು ಉತ್ತರ ವಲಯದಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಮಾಗಡಿ ರೋಡ್ ನೈಸ್ ಜಂಕ್ಷನ್‌ನಿಂದ ರೋಡ್ ಶೋ ಆರಂಭಗೊಂಡಿತು. ಸುಮ್ಮನಹಳ್ಳಿ ಜಂಕ್ಷನವರೆಗಿನ ಮೆಘಾ ರೋಡ್ ಶೋಗೆ ಜನಸಾಗರವೇ ಆಗಮಿಸಿದೆ. ಟೂವೇ ರಸ್ತೆಯನ್ನು ಒನ್ ವೇ ಸಂಚಾರ ಮಾಡಲಾಗಿದೆ. ಒಂದು ರಸ್ತೆಯಲ್ಲಿ ಜನ ನಿಂತು ಮೋದಿಗೆ ಹೂಮಳೆಯ ಸ್ವಾಗತ ನೀಡಿದ್ದಾರೆ. ಮೋದಿ ಮೋದಿ ಘೋಷಣೆ ಕೂಗಿ ಬೆಂಬಲಿಸಿದ್ದಾರೆ.

ಬುಲೆಟ್‌ ಪ್ರೂಫ್‌ ವಾಹನದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ ಮ್ಯಾಜಿಕ್: ಡಿವಿಎಸ್‌, ಚಲವಾದಿ ಸಾಥ್‌

 

ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಮೋದಿಗೆ ಸದಾನಂದ ಗೌಡ ಹಾಗೂ ಚಲವಾದಿ ನಾರಾಣಯಸ್ವಾಮಿ ಸಾಥ್ ನೀಡಿದ್ದಾರೆ. ಉತ್ತರ ವಲಯದ 9 ವಿಧಾಸಭಾ ಕ್ಷೇತ್ರಗಳ ಮೇಲೆ ಕಣ್ಣಟ್ಟಿರುವ ಮೋದಿ, ಬಿಜೆಪಿ ಪರ ಪ್ರಚಾರದ ಅಬ್ಬರ ಶುರುಮಾಡಿದ್ದಾರೆ.  

ರಾಜ್ಯದ ವಿವಿಧ ಭಾಗಗಳಿಂದ ಕಲಾ ತಂಡಗಳು ಆಗಮಿಸಿ ಪ್ರಧಾನಿ ರೋಡ್ ಶೋನಲ್ಲಿ ಪ್ರದರ್ಶನ ನೀಡಿದೆ. ಶಿರಾದಿಂದ ಆಗಮಿಸಿದ ಗೊರವರ ಕುಣಿತ ತಂಡ, ವೀರಗಾಸೆ ಕಲಾ ತಂಡಗಳು ಪ್ರಧಾನಿ ಮೋದಿ ಸಾಗುವ ದಾರಿಯಲ್ಲಿ ಪ್ರದರ್ಶನ ನೀಡಿದೆ. ಮೋದಿ ರೋಡ್ ಶೋ ಆದೀಶ್ವರ್ ಜಂಕ್ಷನ್ ಬಳಿ ಆಗಮಿಸುತ್ತಿದ್ದಂತೆ ಜನರ ಉತ್ಸಾಹ ಇಮ್ಮಡಿಗೊಂಡಿದೆ. ವಂದೇ ಮಾತರಂ, ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಮಾಡಿ ರಸ್ತೆಯಲ್ಲಿ ಮೋದಿ 4.8 ಕಿಲೋಮೀಟರ್ ರೋಡ್ ನಡೆಸಲಿದ್ದಾರೆ. ಸಂಜೆ ಹೆಎಚ್ಎಎಲ್ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ BIEC ಹೆಲಿಪ್ಯಾಡ್‌ಗೆ ತೆರಳಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಾಗಡಿ ರಸ್ತೆ ನೈಸ್ ಜಂಕ್ಷನ್‌ಗೆ ತೆರಳಿದರು. ಮಾಗಡಿ ರಸ್ತೆ ನೈಸ್ ಜಂಕ್ಷನ್‌ನಿಂದ ಮೋದಿ ರೋಡ್ ಶೋ ಆರಂಭಗೊಂಡಿತು. 

91 ಬಾರಿ ನನ್ನ ನಿಂದಿಸಿ ಇದೀಗ ಲಿಂಗಾಯಿತರನ್ನು ಕಳ್ಳರೆಂದು ಅವಮಾನಿಸಿದೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

ಇಂದು ಬೆಳಗ್ಗೆ ಬೀದರ್‌ನ ಹುಮ್ನಾಬಾದ್‌ಗೆ ಆಗಮಿಸಿದ ಪ್ರಧಾನಿ ಮೋದಿ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಚೌಕಿದಾರ್ ಚೋರ್ ಎಂದರು , ಬಳಿಕ ಮೋದಿ ಚೋರ್ ಎಂದರು, ಇದೆಲ್ಲಾ ನಿಂದನೆ ಬಳಿಕ ಒಬಿಸಿ ಸಮುದಾಯವನ್ನೇ ಚೋರ್ ಎಂದರು. ಇದೀಗ ಕಾಂಗ್ರೆಸ್ ಲಿಂಗಾಯಿತ ಸಮುದಾಯವನ್ನು ಭ್ರಷ್ಟರು ಎಂದಿದ್ದಾರೆ. ಕಾಂಗ್ರೆಸ್ ಪ್ರತಿ ಬಾರಿ ನಿಂದನೆ ಮಾಡುತ್ತಲೇ ಕಾಲ ಕಳೆದಿದೆ. ಇದಕ್ಕಿಂದ ಉತ್ತಮ ಆಡಳಿತದ ಬಗ್ಗೆ ಗಮನಹರಿಸಿದರೆ ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಇರುತ್ತಿರಲಿಲ್ಲ ಎಂದರು. 

ಹುಮ್ನಬಾದ್ ಸಮಾವೇಶ ಮುಗಿಸಿ ವಿಜಯಪುರಕ್ಕೆ ಆಗಮಿಸಿದ ಮೋದಿ ಲಕ್ಷ ಜನರು ಸೇರಿದ್ದ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿ ಸಾಧನೆಗಳನ್ನು ವಿವರಿಸಿದರು. ಡಬಲ್ ಎಂಜಿನ್ ಸರ್ಕಾರದ ಸಾಧನೆ ಹೇಳಿದೆ ಮೋದಿ ಅಭಿವೃದ್ಧಿಯ ಹರಿಹಾಕರನಾಗಿರುವ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು. ವಿಜಯುಪುರಿಂದ ಬೆಳಗಾವಿ ಕುಡಚಿ ಕ್ಷೇತ್ರದಲ್ಲಿ ಮತಭೇಟೆ ನಡೆಸಿದ ಮೋದಿ, ಸಂಜೆ ಬೆಂಗಳೂರಿಗೆ ಆಗಮಿಸಿದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!
ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅಸಮಾಧಾನ!