ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ

Published : Mar 10, 2023, 10:27 AM ISTUpdated : Mar 10, 2023, 10:28 AM IST
ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ

ಸಾರಾಂಶ

'ಏ ಹುಚ್ಚ ನೀನೇ ಗೆಲ್ಲಕ್ಕೆ ಆಗುವುದಿಲ್ಲ. ಮುಡಾಮುಚ್ಚಿಕೊಂಡು ಹೋಗ್ತಿದಿ. ನಿಮ್ಮ ಮನೆಯಲ್ಲೇ ಜಗಳ ನಡೆದಿದೆ‌. ರೇವಣ್ಣನ ಹೆಂಡತಿಗೆ ಟಿಕೆಟ್ ಕೊಡಲು ನಿನಗೆ ಮನಸ್ಸು ಇಲ್ಲ. ಒಂದು ಕಡೆ ಮಗ, ಒಂದು ಕಡೆ ಹೆಂಡತಿ, ಇನ್ನೊಂದು ಕಡೆ ಅಪ್ಪ ಇರುವ ಪಕ್ಷ ನಿಮ್ಮದು. ಒಂದು ಕಡೆ ದೇವೇಗೌಡರು ಸೋತರೂ, ಇನ್ನೊಂದು ಕಡೆ ನಿಮ್ಮ ‌ಮಗ ಸೋತರು‌. ಸೋತು ಸುಣ್ಣವಾಗಿರುವ ನೀನು ನನ್ನ ಬಗ್ಗೆ ಮಾತಾಡ್ತಿಯಾ ಎಂದು ಎಚ್‌ಡಿಕೆ ವಿರುದ್ಧ ಕೆಂಡಮಂಡಲಾರದರು.

ವರದಿ: ಜಗನ್ನಾಥ ಪೂಜಾರ್,  ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಮಾ.10) : ಕುಮಾರಸ್ವಾಮಿಗೆ ನಾನು ನೇರ ಸವಾಲ್ ಹಾಕುವೆ. ನಿಜವಾಗಲು ನಿನಗೆ ಗಂಡಸ್ಥನ ಇದ್ರೆ, ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನ ಶಕ್ತಿ ಪ್ರೂವ್ ಮಾಡು ಎಂದು ಶಾಸಕ ಶಿವನಗೌಡ ನಾಯಕ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಯಚೂರು ಜಿಲ್ಲೆ ದೇವದುರ್ಗ ತಾ. ಜಾಲಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.

ಹೋಳಿ ಹಬ್ಬಕ್ಕೂ ಮೊದಲೇ ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ರಂಗಿನಾಟ

ನಾನು 20 ವರ್ಷದಿಂದ ರಾಜಕೀಯ ‌ಮಾಡುತ್ತಿರುವೆ. ಅದು ಯಾರೋ ಕುಮಾರಸ್ವಾಮಿ ಅಂತೆ, ಆತನಿಗೆ ಒಬ್ಬರೂ ಅಲ್ಲ 7 ಮಂದಿ ಹೆಂಡರೂ ಇದ್ದಾರೆ ಮಾಜಿ ಸಿಎಂ ದೇವದುರ್ಗಕ್ಕೆ ಬಂದಾಗ ಶಿವನಗೌಡಗೆ ಈ ಸಲ ವೋಟು ಹಾಕಬೇಡಿ. ಮನೆಗೆ ಕಳುಹಿಸಿ ಬಿಡಿ ಎಂದಿದ್ದರು. 'ಏ ಹುಚ್ಚ ನೀನೇ ಗೆಲ್ಲಕ್ಕೆ ಆಗುವುದಿಲ್ಲ. ಮುಡಾಮುಚ್ಚಿಕೊಂಡು ಹೋಗ್ತಿದಿ. ನಿಮ್ಮ ಮನೆಯಲ್ಲೇ ಜಗಳ ನಡೆದಿದೆ‌.
ರೇವಣ್ಣನ ಹೆಂಡತಿಗೆ ಟಿಕೆಟ್ ಕೊಡಲು ನಿನಗೆ ಮನಸ್ಸು ಇಲ್ಲ. ಒಂದು ಕಡೆ ಮಗ, ಒಂದು ಕಡೆ ಹೆಂಡತಿ, ಇನ್ನೊಂದು ಕಡೆ ಅಪ್ಪ ಇರುವ ಪಕ್ಷ ನಿಮ್ಮದು. ಒಂದು ಕಡೆ ದೇವೇಗೌಡರು ಸೋತರೂ, ಇನ್ನೊಂದು ಕಡೆ ನಿಮ್ಮ ‌ಮಗ ಸೋತರು‌. ಸೋತು ಸುಣ್ಣವಾಗಿರುವ ನೀನು ನನ್ನ ಬಗ್ಗೆ ಮಾತಾಡ್ತಿಯಾ ಎಂದು ಎಚ್‌ಡಿಕೆ ವಿರುದ್ಧ ಕೆಂಡಮಂಡಲಾರದರು.

ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೂವ್ ಮಾಡು:

ನಾನು ಕುಮಾರಸ್ವಾಮಿ(HD Kumaraswamy)ಗೆ ಸವಾಲ್ ಹಾಕುವೆ. ನಿಜವಾಗಲು ನಿನಗೆ ಗಂಡಸ್ಥನ ಇದ್ರೆ, ದೇವದುರ್ಗ ವಿಧಾನಸಭಾ ಕ್ಷೇತ್ರ(Devadurga Assembly constituency)ದಲ್ಲಿ ನಿನ್ನ ಶಕ್ತಿ ಪ್ರೂವ್ ಮಾಡು. ನಾನು ಒಂದು ಲಕ್ಷ 50 ಸಾವಿರ ವೋಟು ತೆಗೆದುಕೊಳ್ಳುವೆ‌. ಇಲ್ಲದಿದ್ರೆ ನಾನು ಗೆದ್ದರೂ  ರಾಜೀನಾಮೆ ನೀಡುವೆ. ಇದು ಕುಮಾರಸ್ವಾಮಿಗೆ ನನ್ನ ಚಾಲೆಂಜ್. ಒಂದು ಮಾತು ತಿಳಿದುಕೊಳ್ಳಿ, ಈ ಚುನಾವಣೆಯಲ್ಲಿ ನಾನು ಅಷ್ಟೇ ಗೆಲ್ಲುವುದಿಲ್ಲ, ನನ್ನ ಜೊತೆಗೆ ನಾಲ್ಕು ಸ್ಥಾನ ಗೆಲ್ಲಿಸುವೆ. ಯಾವ ಕುಮಾರಸ್ವಾಮಿಗೂ ಅಂಜುವುದಿಲ್ಲ, ಯಾವ ರಾಹುಲ್ ಗಾಂಧಿಗೂ(Rahul gandhi) ಅಂಜಲ್ಲ‌. ಜನರ ಆರ್ಶಿವಾದ ಇರುವರೆಗೂ ಯಾರು ನನಗೆ ಏನು ಮಾಡಲು ಸಾಧ್ಯವಿಲ್ಲ‌.  ನಾನು ಮುಂಡರಗಿ ಶಿವರಾಯನ ಮಗ‌. ನಾನು ಹಣಮಂತರಾಯನ ಮಗನಲ್ಲ.ನಾನು ಪ್ರಾಮಾಣಿಕನಾಗಿ ದುಡಿಯುವೆ  ಎಂದು ಶಾಸಕ ಶಿವನಗೌಡ ನಾಯಕ(Shivanagowda nayak) ಮಾಜಿ ಸಿಎಂ ಎಚ್ ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ರು‌.

ಬಿಜೆಪಿ ಅಲೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಧೂಳಿಪಟ:

ಬಸವಕಲ್ಯಾಣ(Basavakalyana)ದಿಂದ ಶುರುವಾದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ(Vijayasankalpa yatre) ಈಗ ರಾಯಚೂರು(Raichur) ಜಿಲ್ಲೆಯಲ್ಲಿ ನಡೆದಿದೆ. 20 ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀರಾಮುಲು(Sriramulu B), ಈಗ ರಾಜ್ಯದಲ್ಲಿ ಬಿಜೆಪಿ ಅಲೆ ಶುರುವಾಗಿದೆ. ಈ ಅಲೆಗೆ ಕಾಂಗ್ರೆಸ್ ಮತ್ತು ಜೆಡಿಎಸ್(Congress-JDS) ಧೂಳಿಪಟವಾಗುತ್ತವೆ. 2023ರ ಚುನಾವಣೆಯ(Karnataka assembly election 2023)ಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಬೇಕಾಗಿದೆ. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕಗೆ 1ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಎಲ್ಲಾ ಪಕ್ಷದ ನಾಯಕರು ದೇವದುರ್ಗದ ಮೇಲೆ ಕಣ್ಣು ಹಾಕಿದ್ದಾರೆ. ಇಡೀ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ದೇವದುರ್ಗಕ್ಕೆ ಅತೀ ಹೆಚ್ಚು ಅನುದಾನ ಬಂದಿದೆ. ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ 2ನೇ ಸ್ಥಾನ ದೇವದುರ್ಗಕ್ಕೆ ಇದೆ. ನವಕರ್ನಾಟಕ, ನವಭಾರತ್ ನಿರ್ಮಾಣ ಮಾಡಲು ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಸಿಎಂ ಬೊಮ್ಮಾಯಿ(CM Basavaraj bommai) 5ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಾರೆ. ಈ ಹಿಂದಿನ ಯಾವುದೇ ಸರ್ಕಾರವೂ  ಎಸ್ ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಎಸ್ ಸಿ ಮತ್ತು ಎಸ್ ಟಿಗೆ ಮೀಸಲಾತಿ ಸಿಕ್ಕಿದೆ‌.
ನಾನು ಹೇಳಿದ್ದೇನೆ ನಮ್ಮ ಸರ್ಕಾರ ಬರಲಿ.ರಕ್ತದಲ್ಲಿ ಬರೆದುಕೊಂಡುತ್ತೇನೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿದೆ. ಹೇಳಿದಂತೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡಿದ್ದಾರೆ. ಧರ್ಮ ಮತ್ತು ಸತ್ಯ ಬಿಟ್ಟು ಒಂದು ಇಂಚೂ ನಾವು ಜಾರಲ್ಲ‌ ಎಂದು ಶ್ರೀರಾಮುಲು ತಿಳಿಸಿದರು.

ಇಡೀ ಜಗತ್ತಿನ ಜನಪ್ರಿಯ ವ್ಯಕ್ತಿ ನಮ್ಮ ಪ್ರಧಾನಿ ಮೋದಿ

ದೇವದುರ್ಗ ವಿಧಾನಸಭಾ ಕ್ಷೇತ್ರ(Devadurga assembly constituency)ದ ಜಾಲಹಳ್ಳಿ(Jalahalli)ಯಲ್ಲಿ ಬಿಜೆಪಿ ವಿಜಯ ಸಂಕಲ್ಪ ‌ಯಾತ್ರೆ ನಡೆಯಿತು. ಯಾತ್ರೆ ಉದ್ದೇಶಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish shettar) ಮಾತನಾಡಿದ್ರು‌. ಇತ್ತೀಚೆಗೆ ಪ್ರಧಾನಿ ಮೋದಿ(Narendra Modi) ಮೇಲೆ ಜನರ  ಅಭಿಮಾನ ಹೆಚ್ಚಾಗಿದೆ.ನಮ್ಮ ಪ್ರಧಾನಿ ‌ಮೋದಿ ಕೇವಲ ನಮ್ಮ ದೇಶದ ಪ್ರಧಾನಿ ಅಷ್ಟೇ ಅಲ್ಲ..ಇಡೀ ಜಗತ್ತೇ ಇವತ್ತು ಮೋದಿ ಅವರನ್ನ ಕೊಂಡಾಡುತ್ತಿದೆ.ಇಡೀ ಜಗತ್ತಿನ ಜನಪ್ರಿಯ ವ್ಯಕ್ತಿ ನಮ್ಮ  ಮೋದಿಯಾಗಿದ್ದಾರೆ.ಶ್ರೀಲಂಕಾ ಮತ್ತು ಪಾಕಿಸ್ತಾನನಲ್ಲಿ ಆರ್ಥಿಕತೆ ಹಾಳಾಗಿ ಹೋಗಿದೆ.

ಟಿಕೆಟ್ ಆಕಾಂಕ್ಷಿಗಳಿಂದ ಕ್ರೀಡಾ ರಾಜಕೀಯ, ಯುವಜನತೆಯನ್ನು ಸೆಳೆಯಲು ಕ್ರೀಡೆಯಲ್ಲಿ ಗೆದ್ದವರಿಗೆ 1 ಲಕ್ಷ ನಗದು!

ಮೋದಿ ನಾಯಕತ್ವದ ಬಗ್ಗೆ ಪಾಕಿಸ್ತಾನದ ಪ್ರಜೆಗಳು ಮಾತನಾಡುವಂತೆ ಮೋದಿ ಮಾಡಿದ್ದಾರೆ‌. ಬದಲಾವಣೆ ಅತ್ತ ರಾಜ್ಯ ಹೊರಟ್ಟಿದೆ. ಇದಕ್ಕೆ ಕಾರಣವೇ ನಮ್ಮ ಡಬಲ್ ಎಂಜಿನ್ ಸರ್ಕಾರವಾಗಿದೆ.ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಧೂಳಿಪಟ್ಟವಾಗಿದೆ‌. ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯುನಲ್ಲಿ ಇದೆ‌. ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಆಗಲು ಸೂಟ್ ಹೊಲಿಸಿಕೊಂಡಿದ್ದಾರೆ ಓಡಾಟ ನಡೆಸಿದ್ದಾರೆ. ಜೆಡಿಎಸ್ ಹಾಸನ ಟಿಕೆಟ್ ಗಾಗಿ ಬಡಿದಾಟ ಹೆಚ್ಚಾಗಿದೆ. ಜೆಡಿಎಸ್ ಗೆ 23ಸ್ಥಾನ ಬಂದ್ರೆ ಸಾಕು ಅಂತಿದ್ದಾರೆ‌. ಜೆಡಿಎಸ್ ಗೆ ಓಟು ಹಾಕಿದ್ರೆ ವೆಸ್ಟ್ ಆಗುತ್ತೆ ನಿಮ್ಮ ಓಟುಗಳು ವೆಸ್ಟ್ ಮಾಡಬೇಡಿ ಎಂದು ಜನರಿಗೆ ಕರೆ ನೀಡಿದ್ರು‌.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು