ವಿಧಾನಸಭಾ ಚುನಾವಣೆಗೆ ಪಕ್ಷ ಮತ್ತು ಕಾರ್ಯಕರ್ತರ ಸಜ್ಜುಗೊಳಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರದ ಸ್ಥಾಪನೆಗಾಗಿ ಮಾ.10 ಮಧ್ಯಾಹ್ನ 1.30ಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣಕ್ಕೆ ಆಗಮಿಸುವ ಪ್ರಜಾಧ್ವನಿ ಯಾತ್ರೆಯ ಸಿದ್ಧತೆಯ ಕೆಪಿಸಿಸಿ ಸದಸ್ಯ ಕೆ.ಎಸ್.ಬಸವಂತಪ್ಪ ವೀಕ್ಷಿಸಿದರು.
ದಾವಣಗೆರೆ (ಮಾ.10) : ವಿಧಾನಸಭಾ ಚುನಾವಣೆಗೆ ಪಕ್ಷ ಮತ್ತು ಕಾರ್ಯಕರ್ತರ ಸಜ್ಜುಗೊಳಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರದ ಸ್ಥಾಪನೆಗಾಗಿ ಮಾ.10 ಮಧ್ಯಾಹ್ನ 1.30ಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣಕ್ಕೆ ಆಗಮಿಸುವ ಪ್ರಜಾಧ್ವನಿ ಯಾತ್ರೆಯ ಸಿದ್ಧತೆಯ ಕೆಪಿಸಿಸಿ ಸದಸ್ಯ ಕೆ.ಎಸ್.ಬಸವಂತಪ್ಪ ವೀಕ್ಷಿಸಿದರು.
ಬಸವಾಪಟ್ಟಣ-ಸಾಗರಪೇಟೆ(Basavarapattana sagarapete)ಯ ಎಲ್.ಸಿದ್ದಪ್ಪ ಹೈಸ್ಕೂಲ್ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆ(Prajadhwani yatre)ಯ ನೇತೃತ್ವ ಮತ್ತು ಉದ್ಘಾಟನೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಮಾಡಲಿದ್ದಾರೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ(DDr Shamanur shivashanktrappa), ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್(MB Patil), ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಜಮೀರ್ ಅಹಮ್ಮದ್, ಡಾ.ಎಚ್.ಸಿ. ಮಹಾದೇವಪ್ಪ, ಎಚ್.ಆಂಜನೇಯ, ಪಿ.ಟಿ.ಪರಮೇಶ್ವರನಾಯ್ಕ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್‌ಸಾಬ್, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಆಗಮಿಸಲಿದ್ದಾರೆ.
ಕಾಂಗ್ರೆಸ್ ಸಾಯಲ್ಲ, ಕೈಲಾಗದ ಈಶ್ವರಪ್ಪ ಮೈ ಪರಚಿಕೊಳ್ತಾನೆ: ಕಾಂಗ್ರೆಸ್ ಮುಖಂಡ ಕಿಡಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಮಾಜಿ ಜಿಪಂ ಸದಸ್ಯ ಗೋವಿಂದ ಸ್ವಾಮಿ, ತಾಪಂ ಮಾಜಿ ಸದಸ್ಯ ಬೆಳಲಗೆರೆ ಹನುಮಂತಪ್ಪ, ಹರೋಸಾಗರ ಪ್ರಕಾಶ್, ಮುಖಂಡರಾದ ಸತೀಶ್ ಪಾಟೀಲ್, ಕಂಚಗಾರನಹಳ್ಳಿ ರುದ್ರಪ್ಪಗೌಡ್ರು, ಅಲ್ಪಸಂಖ್ಯಾತರ ಅಧ್ಯಕ್ಷ ಹಿದಾಯತ್‌ವುಲ್ಲಾ, ಬ್ಲಾಕ್ ಮಹಿಳಾ ಅಧ್ಯಕ್ಷೆ ಶಶಿಕಲಾ, ಯುವ ಕಾಂಗ್ರೆಸ್ ಅಧ್ಯಕ್ಷ ಓ.ಜಿ.ಕಿರಣ್‌ಕುಮಾರ್, ನವೀಲೆಹಾಳ್ ಮುಖಂಡರಾದ ಹಾಲೇಶಪ್ಪ, ಚಿರಡೋಣಿ ಕಾಂತರಾಜ, ಗೋಪಾಲಪ್ಪ, ಬಸವಾಪಟ್ಟಣ ಗ್ರಾಪಂ ಸದಸ್ಯರಾದ ರಮೇಶ್, ಮಾರುತಿ, ಶಶಿಧರ್, ತಾಪಂ ಮಾಜಿ ಸದಸ್ಯ ಕಣಿವೆಬಿಳಚಿ ಮಂಜುನಾಥರಾವ್, ತ್ಯಾವಣಿಗೆ ಲೋಹಿತ್, ಸಿ.ಅಂಜಿನಪ್ಪ, ಪರುಶುರಾಮ, ಮಂಜುನಾಥ ಮತ್ತಿತರರಿದ್ದರು
ನಾಳೆ ಹೊನ್ನಾಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ
ಹೊನ್ನಾಳಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆಯು ಮಾ.11 ಹೊನ್ನಾಳಿಗೆ ಆಗಮಿಸಲಿದೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ನಗರದ ಪಟ್ಟಣ ಶೆಟ್ಟಿಲೇಔಟ್‌ನಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕಾಗಿ ಸ್ಥಳ ನಿಗದಿ ಮಾಡಿದ್ದು ಶನಿವಾರ ಬೆಳಿಗ್ಗೆ 10ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಸಿದ್ದರಾಮಯ್ಯ ಮಾ.10ರಂದು ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿ 11 ರಂದು ದಾವಣಗೆರೆಯಿಂದ ಬಸ್ಸಿನಲ್ಲೇ ಹೊನ್ನಾಳಿಗೆ ಆಗಮಿಸುವರು ಎಂದರು. ತಾಲೂಕಿನ ಎಕೆ ಕಾಲನಿಯಿಂದ ಹೊನ್ನಾಳಿವರೆಗೂ ಸಾವಿರ ಯುವಕರು ಬೈಕ್ ರಾರಯಲಿ ನಡೆದು ಅಲ್ಲಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹೂವಿನ ಹಾರ ಹಾಕಿದ ನಂತರ ವೇದಿಕೆಗೆ ಕರೆತರಲಾಗುವುದು ಎಂದರು.
ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್ಸಿಗೆ: ವಿಧಾನಸಭಾ ಚುನಾವಣೆಗೆ ಸ್ಪರ್ಧೆ
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಆರ್.ನಾಗಪ್ಪ, ಕೆಪಿಸಿಸಿ ಸದಸ್ಯ ಡಾ. ಈಶ್ವರನಾಯ್ಕ, ಮುಖಂಡರಾದ ಬಿ.ಸಿದ್ದಪ್ಪ, ಜಿಪಂ ಮಾಜಿ ಸದಸ್ಯ ಎಂ. ರಮೇಶ್,ಎಚ್.ಎ. ಉಮಾಪತಿ, ಸಣ್ಣಕ್ಕಿ ಬಸವನಗೌಡ, ದಿಡಗೂರು ಪ್ರಕಾಶ್, ಮನು ವಾಲಜ್ಜಿ, ಪ್ರಶಾಂತ್ ಬಣ್ಣಜ್ಜಿ ಸೇರಿ ಹಲವರಿದ್ದರು.